Advertisement

Arrested: 36 ಪ್ರಕರಣಗಳಿದ್ದರೂ ಮತ್ತೆ ಕಳ್ಳತನಕ್ಕಿಳಿದಿದ್ದ ರೌಡಿ ಬಂಧನ

11:11 AM Apr 13, 2024 | Team Udayavani |

ಬೆಂಗಳೂರು: ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ 36 ಪ್ರಕರಣಗಳಿದ್ದರೂ ಮತ್ತೆ ಕಳ್ಳತನಕ್ಕಿಳಿದ ರೌಡಿ ಸೇರಿ ಮೂವರನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

Advertisement

ಗಿರಿನಗರದ ರೌಡಿ ನರಸಿಂಹರೆಡ್ಡಿ, ಕೋಲಾರ ಮೂಲದ ಕಾರ್ತಿಕ್‌ ಮತ್ತು ನರಸಿಂಹ ಬಂಧಿತರು. ಆರೋಪಿಗಳಿಂದ 10 ಲಕ್ಷ ರೂ. ಮೌಲ್ಯದ 151 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಮಾ.30ರಂದು ಸಂಜಯ್‌ ನಗರದ ಡಾಲರ್ಸ್‌ ಕಾಲೋನಿಯ ಮನೆಯೊಂದಕ್ಕೆ ಮನೆಯೊಂದರ ಮುಖ್ಯದ್ವಾರದ ಬಾಗಿಲಿನ ಲಾಕ್‌ ಒಡೆದು ಒಳನುಗ್ಗಿದ್ದ ಆರೋಪಿಗಳು ಅಲ್ಲಿದ್ದ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದರು. ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ಹೋಗಿದ್ದ ಮನೆ ಮಾಲೀಕರು ವಾಪಸ್‌ ಬಂದು ನೋಡುವ ವೇಳೆ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು. ಕೂಡಲೇ ಸಂಜಯನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು ಕೃತ್ಯ ನಡೆದ ಆಸು-ಪಾಸಿನಲ್ಲಿರುವ ಸಿಸಿ ಕ್ಯಾಮೆರಾ ಸೇರಿದಂತೆ ವಿವಿಧ ತಾಂತ್ರಿಕ ಕಾರ್ಯಾಚರಣೆ ನಡೆಸಿದಾಗ ಆರೋಪಿಗಳ ಸುಳಿವು ಸಿಕ್ಕಿತ್ತು. ನಂತರ ಮೂವರು ಆರೋಪಿಗಳನ್ನೂ ಪತ್ತೆ ಹಚ್ಚಿ ಬಂಧಿಸಿದ್ದಾರೆ. ವಿವಿಧ ಪೊಲೀಸ್‌ ಠಾಣೆಗಳಲ್ಲಿ ರೌಡಿ ನರಸಿಂಹರೆಡ್ಡಿ ವಿರುದ್ಧ 36 ಪ್ರಕರಣಗಳಿವೆ. ನರಸಿಂಹರೆಡ್ಡಿ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಿಡುಗಡೆ ಹೊಂದಿದ್ದ. ಆದರೆ, ಇದೀಗ ಹಳೆ ಚಾಳಿ ಮುಂದುವರಿಸಿ ಕಂಬಿ ಎಣಿಸುವಂತಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next