Advertisement

Theft case : 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

07:36 PM Aug 21, 2023 | Team Udayavani |

ವಿಟ್ಲ : 20 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ.

Advertisement

ವಿಟ್ಲ ಪೊಲೀಸ್‌ ಠಾಣೆಯಲ್ಲಿ 2003ರಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿದ್ದ ಕೇರಳ ಕ್ಯಾಲಿಕಟ್‌ ಸಮೀಪದ ಎಡತಂತರ ನಿವಾಸಿ ನೌಷದ್‌ ಯಾನೆ ಹಂಸದ್‌ (46) ಬಂಧಿತ ಆರೋಪಿ.

ಕ್ಯಾಲಿಕಟ್‌ ಜಿಲ್ಲೆಯ ಪೇರಾಂಬರದಲ್ಲಿ ಸ್ಥಳೀಯ ಠಾಣಾ ಪೊಲೀಸರ ಸಹಕಾರದಿಂದ ಬಂಧಿಸಿ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next