Advertisement
ಫೆ. 7ರಂದು ನಡೆದಿದ್ದ ಪ್ರಕರಣದಲ್ಲಿ 17,28,735 ರೂ., 696.21 ಗ್ರಾಂ ಚಿನ್ನಾಭರಣ, 1 ಲಕ್ಷ ಮೌಲ್ಯದ ಬೆಳ್ಳಿಯನ್ನು ಕಳವು ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿ ತನಿಖೆ ನಡೆಸಿ 2,40,700 ರೂ., ಕಳವು ಮಾಡಿದ ಹಣದಿಂದ ಖರೀದಿಸಿದ ಸುಮಾರು 9 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ಸಾಮಗ್ರಿಗಳು, 12,48,218 ರೂ. ಮೌಲ್ಯದ ಚಿನ್ನಾಭರಣ ಹಾಗೂ ಕಳವಿಗೆ ಬಳಸಿದ್ದ ಬ್ರೇಜಾ ಕಾರು, ಗ್ಯಾಸ್ ಕಟ್ಟರ್ ಮುಂತಾದವುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಮಹಮ್ಮದ್ ರಫೀಕ್ (35) ವಿರುದ್ಧ ಈಗಾಗಲೇ ಒಟ್ಟು 23 ಪ್ರಕರಣಗಳು ದಾಖಲಾಗಿರುತ್ತವೆ. ಗೂಡಿನಬಳಿ ನಿವಾಸಿಯಾದ ಈತ ನ್ಯಾಯಾಲಯದಿಂದ ಜಾಮೀನು ಪಡೆದು ಬಂದು ಮತ್ತೆ ಅಪರಾಧ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ. ಕಲಂದರ್ ವಿರುದ್ಧ 8 ಪ್ರಕರಣ ಗಳು ದಾಖಲಾಗಿವೆ. ಕಲಂದರ್ ಹಾಗೂ ಬಂಧಿತ ದಯಾನಂದ ಇಬ್ಬರೂ ಕೇರಳದ ಮಂಜೇಶ್ವರ ತಾಲೂಕಿನವರು. ಮಹಮ್ಮದ್ ರಫೀಕ್ ವಿರುದ್ಧ ಬಂಟ್ವಾಳ ನಗರ (2 ಪ್ರಕರಣ), ವೇಣೂರು (2), ಪುತ್ತೂರು ಗ್ರಾಮಾಂತರ(1), ವಿಟ್ಲ (1), ಮಂಗಳೂರು ನಗರ ಪೂರ್ವ(2), ಉಳ್ಳಾಲ(1), ಮಂಗಳೂರು ನಗರ ದಕ್ಷಿಣ(4), ಮಂಗಳೂರು ಗ್ರಾಮಾಂತರ(1), ಬೆಂಗಳೂರು ನಗರ (6), ಹಾಗೂ ಉಡುಪಿ ಜಿಲ್ಲೆಯಲ್ಲಿ 3 ಪ್ರಕರಣಗಳು ದಾಖಲಾಗಿವೆ. ಕಲಂದರ್ ವಿರುದ್ಧ ಪುತ್ತೂರು ಗ್ರಾಮಾಂತರ (2), ವಿಟ್ಲ (3), ಉಪ್ಪಿನಂಗಡಿ (1), ಮೂಡುಬಿದಿರೆ (1), ಕುಂಬಳೆ (1) ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.
Related Articles
Advertisement