Advertisement

ಮನೆ ಬಾಗಿಲಿನ ಬೀಗ ಮುರಿದು ಕಳ್ಳತನ; ಒಂಟಿ ಮಹಿಳೆಗೆ ಬೆದರಿಸಿ ಚಿನ್ನಾಭರಣ, ನಗದು ದೋಚಿ ಪರಾರಿ

06:09 PM Oct 27, 2022 | Team Udayavani |

ಕುಣಿಗಲ್: ಬಾಗಿಲಿನ ಬೀಗ ಒಡೆದು, ಮುಖಕ್ಕೆ ಬಟ್ಟೆ ಸುತ್ತಿಕೊಂಡು ಮನೆ ಒಳ ನುಗ್ಗಿದ್ದ ಕಳ್ಳರು, ಮಹಿಳೆರ್ಯೋವಳಿಗೆ ಚಾಕು ತೋರಿಸಿ, ಬೆದರಿಸಿ, ನಗದು ಸೇರಿದಂತೆ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ಹುತ್ರಿದುರ್ಗ ಹೋಬಳಿ ಹಾಲುವಾಗಿಲು ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ.

Advertisement

ಹುತ್ರಿದುರ್ಗ ಹೋಬಳಿ ಹಾಲುವಾಗಿಲು ಗ್ರಾಮದ ವಾಸಿ ಲಲಿತಮ್ಮ ನಗದು ಹಾಗೂ ಚಿನ್ನಾಭರಣ ಕಳೆದುಕೊಂಡ ಮಹಿಳೆ.

ಘಟನೆ ವಿವರ: ಲಲಿತಮ್ಮ ಅವರ ಪತಿ ಮರಣ ಹೊಂದಿದ್ದು, ಮಗ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಮನೆಯಲ್ಲಿ ಲಲಿತಮ್ಮ ಒಬ್ಬರೇ ಇರುತ್ತಿದ್ದರು. ಎಂದಿನಂತೆ ಲಲಿತಮ್ಮ ಬುಧವಾರ ರಾತ್ರಿ ಮಧ್ಯರಾತ್ರಿ ಸುಮಾರು 1.30ರ ಸಮಯದಲ್ಲಿ ಹಸುಗಳು ಕೂಗಿನ ಶಬ್ದಕ್ಕೆ ಲಲಿತಮ್ಮ ಎಚ್ಚರಗೊಂಡಿದ್ದಾರೆ.

ಅದೇ ಸಮಯಕ್ಕೆ ಇಬ್ಬರು ಕಳ್ಳರು ಮನೆಯ ಬಾಗಿಲಿನ ಬೀಗ ಒಡೆದು ಮನೆಯ ಕೊಠಡಿ ಒಳಗೆ ನುಗ್ಗಿ, ಒಬ್ಬ ಕಳ್ಳ ಲಲಿತಮ್ಮನವರಿಗೆ ಚಾಕು ತೋರಿಸಿ, ಬೀರುವಿನ ಬೀಗ ನೀಡುವಂತೆ ಕೇಳಿದ್ದಾನೆ. ಭಯಗೊಂಡ ಲಲಿತಮ್ಮ ಬೀರುವಿನ ಬೀಗ ಕೊಟ್ಟಿದ್ದು, ಬಟ್ಟೆಗಳನ್ನು ಎಸೆದು ಬಳಿಕ ಚಿನ್ನ, ಬೆಳ್ಳಿ ವಸ್ತುಗಳ ಜೊತೆಗೆ ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ಇವರು ಕನ್ನಡ ಮಿಶ್ರಿತ ತೆಲುಗು ಬಾಷೆಯಲ್ಲಿ ಮಾತನಾಡುತ್ತಿದ್ದರು. ಮನೆ ಒಳಗೆ ಇಬ್ಬರು ಕಳ್ಳರು ಬಂದಿದ್ದರೂ ಹೊರ ಹೋಗಬೇಕಾದರೆ ಮೂರು ಮಂದಿ ಒಂದೇ ಬೈಕ್‌ನಲ್ಲಿ ಹೋಗಿದ್ದಾರೆ ಎಂದು ಲಲಿತಮ್ಮ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Advertisement

ಸ್ಥಳಕ್ಕೆ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿ, ಮಾಹಿತಿ ಕಲೆ ಹಾಕಿದ್ದಾರೆ. ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ತಿಂಗಳಲ್ಲಿ ಮೂರು ಕಳ್ಳತನ, ಭಯಗೊಂಡ ನಾಗರೀಕರು: ಕುಣಿಗಲ್ ಪಟ್ಟಣದಲ್ಲಿ ಮದ್ಯದಂಗಡಿ ಹಾಗೂ ಎಂಎಲ್‌ಐಎಲ್ ಕಳ್ಳತನ ಪ್ರಕರಣಗಳು ಮಾಸುವ ಮುನ್ನವೇ ಹುತ್ರಿದುರ್ಗ ಹೋಬಳಿ ಹಾಲುವಾಗಿಲು ಗ್ರಾಮದಲ್ಲಿ ಮಹಿಳೆಯನ್ನು ಬೆದರಿಸಿ ನಗದು ಸೇರಿದಂತೆ ಚಿನ್ನಾಭರಣ ದೋಚಿರುವುದು ನಾಗರೀಕರ ನಿದ್ದೆ ಕೆಡಿಸಿದೆ. ರಾತ್ರಿ ವೇಳೆ ಪೊಲೀಸ್ ಗಸ್ತು ಬಿಗಿಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next