ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ನಷ್ಟ ಹೊಂದಿ ಸಾಲ ತೀರಿಸಲು ದರೋಡೆ ಮಾಡಿ, ಮಲೆಮಹದೇಶ್ವರ ಬೆಟ್ಟಕ್ಕೆ ಹೋಗಿದ್ದಇಬ್ಬರು ಕಾನೂನು ಸಂಘರ್ಷಕ್ಕೊಳಗಾದವರು ಸೇರಿ ನಾಲ್ವರು ಗಿರಿನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಗಿರಿನಗರ ನಿವಾಸಿ ಶ್ರೀಧರ್ (29), ನಿತಿನ್ ರಾಜ್ (18) ಮತ್ತು ಇಬ್ಬರು ಕಾನೂನು ಸಂಘರ್ಷಕ್ಕೊಳಗಾದವರನ್ನು ಬಂಧಿಸಲಾಗಿದೆ.
ಅಪ್ರಾಪ್ತರನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಆರೋಪಿಗಳ ಪೈಕಿ ಶ್ರೀಧರ್, ಪದವೀಧರನಾಗಿದ್ದು, ಕ್ರಿಕೆಟ್ ಬೆಟ್ಟಿಂಗ್ ಗೀಳು ಅಂಟಿಸಿಕೊಂಡಿದ್ದ. ಅದರಿಂದ ಸಾವಿರಾರು ರೂ. ಸಾಲ ಮಾಡಿಕೊಂಡಿದ್ದ. ಅದರಿಂದ ಸಾಲಗಾರರು ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದರು. ಹೀಗಾಗಿ, ಮನೆ ತೋರೆದಿದ್ದ ಆರೋಪಿ, ಕೆಲಪುಂಡರ ಜತೆ ಸೇರಿಕೊಂಡು ಗಾಂಜಾ ಹಾಗೂ ಮೋಜಿನ ಜೀವನಕ್ಕೆ ಬಲಿಯಾಗಿದ್ದ. ಇದೇ ವೇಳೆ ಪರಿಚಯವಾದ ನಿತಿನ್‌ರಾಜ್ ಮತ್ತು ಇತರೆ ಇಬ್ಬರು ಬಾಲಕರಿಗೆ ಹಣದ ಆಮಿಷವೊಡ್ಡಿ ಕೃತ್ಯವೆಸಗಲು ಪ್ರೇರಕನಾಗಿದ್ದ.
ಜೂ. 2ರಂದು ಲೋಕೇಶ್ ಎಂಬವರು ಗಿರಿ ನಗರದ ಬ್ಯಾಂಕ್ ಕಾಲೋನಿಯ ಬಾರ್‌ವೊಂದರಲ್ಲಿ ಮದ್ಯ ಸೇವಿಸಿ ಮನೆಗೆ ಹೋಗುತ್ತಿದ್ದರು. ಅದೇ ಬಾರ್‌ನಲ್ಲಿ ಮದ್ಯ ಸೇವಿಸಿದ್ದ ನಾಲ್ವರು ಆರೋಪಿಗಳು, ಮಾರ್ಗಮಧ್ಯೆ ಲೋಕೇಶ್‌ರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, 50 ಸಾವಿರ ರೂ. ಮೌಲ್ಯದ ಚಿನ್ನದ 2 ಉಂಗುರ,1.40 ಲಕ್ಷ ರೂ. ಮೌಲ್ಯದ 28 ಗ್ರಾಂ ಚಿನ್ನದ ಸರಹಾಗೂ 20 ಸಾವಿರ ನಗದು, ಮೊಬೈಲ್,ದ್ವಿಚಕ್ರ ವಾಹನ ಕಿತ್ತುಕೊಂಡು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.
ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ, ಪೂಜೆ :
ಕೃತ್ಯ ಎಸಗಿದ ಬಳಿಕ ಆರೋಪಿಗಳು ಚಿನ್ನಾಭರಣ ಪೈಕಿ ಸರ, ಒಂದು ಉಂಗುರ ಅಡಮಾನ ಇಟ್ಟು, ನೇರವಾಗಿ ಗೋವಾಕ್ಕೆ ತೆರಳಿ ಮೋಜು-ಮಸ್ತಿ ಮಾಡಿದ್ದಾರೆ. ಬಳಿಕ ಚಾಮರಾಜಪೇಟೆಯ ಮಲೆಮಹದೇಶ್ವರ ಬೆಟ್ಟದ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದ್ದಾರೆ. ನಂತರ ಬಂದು ಮತ್ತೂಂದು ಉಂಗುರವನ್ನು ಅಡಮಾನ ಇಟ್ಟು ಬಂದ ಹಣದಲ್ಲಿ ನಾಲ್ವರು ಹಂಚಿಕೊಂಡು ಬೈಕ್‌ನಲ್ಲಿ ಓಡಾಡುತ್ತಿದ್ದರು. ಸಿಸಿ ಕ್ಯಾಮೆರಾ ದೃಶ್ಯಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದ್ದು, ಗಿರಿ ನಗರ ಠಾಣೆಯಲ್ಲಿ ಕ್ರ ಎಂದು ಪೊಲೀಸರು ಹೇಳಿದರು. ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.