Advertisement

Theft: ಮನೆಗೆ ನುಗ್ಗಿ ಚಿನ್ನದ ನೆಕ್ಲೆಸ್‌ ಕಳವು

09:40 PM Mar 07, 2024 | Team Udayavani |

ಸುಳ್ಯ: ತಾಲೂಕಿನ ಕೊಡಿಯಾಲ ಗ್ರಾಮದ ಮೂವಪ್ಪೆ ನಸೀರ ಐ.ಎಚ್‌. ಅವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಳನುಗ್ಗಿದ ಕಳ್ಳರು ಚಿನ್ನದ ನೆಕ್ಲೇಸ್‌ ಕಳವು ಮಾಡಿದ ಘಟನೆ ಮಾ. 6ರಂದು ಬೆಳಕಿದೆ ಬಂದಿದೆ.

Advertisement

ನಸೀರ ಅವರು ಮಾ. 3ರಂದು ಬೆಐಗ್ಗೆ ಇಂದ್ರಾಜೆಗೆ ಹೋಗಿದ್ದು, ಮಾ. 6ರಂದು ಸಂಜೆ ಮರಳಿ ಮನೆಗೆ ಬಂದಾಗ ಬೆಡ್‌ರೂಮಿನ ಬಾಗಿಲು ಒಳಗಡೆಯಿಂದ ಚಿಲಕ ಹಾಕಿದ್ದು, ಸಂಶಯಗೊಂಡು ಬೆಡ್‌ರೂಮಿನ ಕಿಟಕಿಯ ಬಳಿ ನೋಡಿದಾಗ ಕಳ್ಳರು ಕಿಟಕಿಯ ಬಾಗಿಲಿನ ಗಾಜು ಮುರಿದು ಚಿಲಕ ತೆಗೆದು ಕಿಟಕಿಯ ಸರಳನ್ನು ಪಿಕ್ಕಾಸಿನಿಂದ ಮುರಿದು ಒಳ ನುಗ್ಗಿ ಕಪಾಟಿನಲ್ಲಿದ್ದ 40 ಗಾಂ ತೂಕದ ಸುಮಾರು1,48,000 ರೂ. ಮೌಲ್ಯದ ಚಿನ್ನದ ನೆಕ್ಲೇಸನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಬೆಳ್ಳಾರೆ ಠಾಣೆಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next