Advertisement

Sagara: ಮನೆಗಳಲ್ಲಿ ಕಳ್ಳತನ; ಗ್ರಾಮೀಣ ಜನರಲ್ಲಿ ಆತಂಕ

03:39 PM Dec 16, 2023 | Kavyashree |

ಸಾಗರ: ಅಡಕೆ ಬೆಳೆಗಾರರು, ಜಮೀನುದಾರರ ಮನೆಗಳಿಗೆ ನುಗ್ಗುತ್ತಿದ್ದ ಕಳ್ಳರು ತಮ್ಮ ಗುರಿಯನ್ನು ಬದಲಿಸುತ್ತಿದ್ದು ಗ್ರಾಮೀಣ ಭಾಗದ ಕೃಷಿ ಕಾರ್ಮಿಕರ ಮನೆಗಳಲ್ಲೇ ಹೆಚ್ಚು ಕಳ್ಳತನ ನಡೆಸುತ್ತಿರುವ ಘಟನೆಗಳು ಸಾಗರದಲ್ಲಿ ಹೆಚ್ಚಾಗುತ್ತಿವೆ.

Advertisement

4-5 ದಿನದ ಹಿಂದೆ ಸಾಗರದ ಬಳಸಗೋಡಿನ ನಾರಾಯಣಪ್ಪ ಎಂಬವರ ಮನೆಯ ಹಂಚು ತೆಗೆದು ಸುಮಾರು 70 ಸಾವಿರ ರೂ. ನಗದು, ಒಂದೂವರೆ ತೊಲ ತೂಕದ ಬಂಗಾರದ ಆಭರಣಗಳ ಕಳ್ಳತನವಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ನಾರಾಯಣಪ್ಪ ದಂಪತಿಗಳು ಕೂಲಿ ಕೆಲಸಕ್ಕೆ ಹೋಗಿದ್ದ ಸಂದರ್ಭ ಈ ಕಳ್ಳತನ ನಡೆದಿದ್ದು, ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾರಾಯಣಪ್ಪ ಬಾಳೆ ಕೃಷಿಯಲ್ಲಿ ಬಂದ ಹಣವನ್ನು ಮನೆ ರಿಪೇರಿ ಖರ್ಚಿಗೆ ತೆಗೆದಿರಿಸಿದ್ದರು. ಈ ಉಳಿತಾಯದ ಮೊತ್ತ ಹಾಗೂ ಬಂಗಾರ ಕಳ್ಳತನ ಆಗಿರುವುದರಿಂದ ದಂಪತಿ ಆತಂಕಕ್ಕೊಳಗಾಗಿದ್ದಾರೆ.

ಈಗಾಗಲೇ ಕರ್ಕಿಕೊಪ್ಪ, ಗೀಜಗಾರು, ಮಂಕಳಲೆ, ಶಿರವಾಳ ಮೊದಲಾದೆಡೆ ವಿವಿಧ ಕಳ್ಳತನದ ಪ್ರಕರಣಗಳು ನಡೆದಿವೆ.

Advertisement

ಕರ್ಕಿಕೊಪ್ಪದ ಘಟನೆ ಸಂಬಂಧ ಗ್ರಾಮಸ್ಥರೇ ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಕೊಟ್ಟಿದ್ದರೂ ಅವರು ದುರ್ಬಲ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಅಪರಾಧಿಗಳನ್ನು ರಕ್ಷಿಸುತ್ತಾರೆ ಎಂದು ಎಡಜಿಗಳೇ ಮನೆ ಭಾಗದ ಸಾರ್ವಜನಿಕರು ಇತ್ತೀಚೆಗೆ ಡಿವೈಎಸ್‌ಪಿ ಕಚೇರಿ ಎದುರು ಪ್ರತಿಭಟನೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next