Advertisement

ಪಾಲ್ತಾಡಿ: ಮನೆಮಂದಿಯನ್ನು ಕೂಡಿ ಹಾಕಿ ನಗದು, ಬೆಳ್ಳಿ ನಾಣ್ಯ ಕಳ್ಳತನ

03:11 PM Apr 04, 2021 | Team Udayavani |

ಸವಣೂರು: ಪಾಲ್ತಾಡಿ ಗ್ರಾಮದ ಪರಣೆ ಎಂಬಲ್ಲಿ ಮಿತ್ರಾ ಜೈನ್ ಬಂಬಿಲಗುತ್ತು ಅವರ ಮನೆಗೆ ನುಗ್ಗಿದ ಕಳ್ಳರು ನಗದು ಹಾಗೂ ಬೆಳ್ಳಿ ನಾಣ್ಯಗಳನ್ನು ಕಳವುಗೈದ ಘಟನೆ ಆದಿತ್ಯವಾರ ಬೆಳಕಿಗೆ ಬಂದಿದೆ.

Advertisement

ಪರಣೆಯಲ್ಲಿರುವ ಮಿತ್ರಾ ಜೈನ್ ಅವರ ಮನೆಗೆ ನುಗ್ಗಿದ ಕಳ್ಳರು ಮನೆಮಂದಿಯನ್ನು ಕೋಣೆಯೊಳಗೆ ಲಾಕ್ ಮಾಡಿ ನಗದು, ನಗ ದೋಚಿದ್ದಾರೆ.

ಇದನ್ನೂ ಓದಿ:12 ವರ್ಷದ ಬಾಲಕನ ಜೀವಕ್ಕೆ ಮುಳುವಾಯ್ತು ಪಬ್ ಜಿ ಸೇಡು: ಜೊತೆ ಆಟಗಾರ ಬಾಲಕ ಪೊಲೀಸ್ ವಶಕ್ಕೆ!

ಮನೆಯ ಹಂಚು ತೆಗೆದು ಒಳನುಗ್ಗಿದ ಕಳ್ಳರು, ಮಿತ್ರಾ ಜೈನ್ ಹಾಗೂ ಅವರ ಪುತ್ರಿ ದಿವ್ಯ ಅವರು ಮಲಗಿದ್ದ ಕೋಣೆಯನ್ನು ಹೊರಗಿನಿಂದ ಲಾಕ್ ಮಾಡಿ, ಇನ್ನೊಂದು ಕೋಣೆಯಲ್ಲಿದ್ದ ನಗದು,ಬೆಳ್ಳಿ ನಾಣ್ಯಗಳನ್ನು ದೋಚಿದ್ದಾರೆ.

ಸ್ಥಳಕ್ಕೆ ಪುತ್ತೂರು ಎಎಸ್ಪಿ ಗಾನ, ಸುಳ್ಯ ಸಿಐ ನವೀನ್ ಚಂದ್ರ ಜೋಗಿ, ಬೆಳ್ಳಾರೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next