Advertisement

Canada: ದೇಗುಲಗಳಲ್ಲಿ ಕಳವು- ಭಾರತೀಯ ಮೂಲದ ವ್ಯಕ್ತಿ ಸೆರೆ

08:08 PM Dec 29, 2023 | Team Udayavani |

ಟೊರೊಂಟೊ: ಕೆನಡಾದ ಡರ್ಹಾಮ್‌ ಮತ್ತು ಗ್ರೇಟರ್‌ ಟೊರೊಂಟೊ ಪ್ರದೇಶಗಳ ಹಿಂದೂ ದೇಗುಲಗಳಲ್ಲಿ ಕಳ್ಳತನ ಮಾಡಿದ ಆರೋಪದಲ್ಲಿ ಭಾರತೀಯ ಮೂಲದ ಕೆನಡಾ ಪ್ರಜೆಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಬ್ರಾಂಪ್ಟನ್‌ ನಗರದ ನಿವಾಸಿಯಾದ ಜಗದೇಶ್‌ ಪಂಧರ್‌(41) ಬಂಧಿತ ಆರೋಪಿ.

Advertisement

“ಪ್ರಾಥಮಿಕ ತನಿಖೆಯ ಪ್ರಕಾರ, ಇದು ದ್ವೇಷಪೂರಿತ ಅಪರಾಧವಲ್ಲ. ಆರೋಪಿ ದೇಗುಲಗಳಿಗೆ ನುಗ್ಗಿ ಹುಂಡಿಗಳಲ್ಲಿರುವ ಹಣವನ್ನು ದೋಚಿದ್ದಾನೆ’ ಎಂದು ಟೊರೊಂಟೊ ಪೊಲೀಸರು ತಿಳಿಸಿದ್ದಾರೆ. ಅ.8ರಂದು ಪಿಕರಿಂಗ್‌ನ ಬೌಲೆವಾರ್ಡ್‌ ಮತ್ತು ಅಜಾಕ್ಸ್‌ನಲ್ಲಿರುವ ಹಿಂದೂ ದೇಗುಲಗಳ ಬಾಗಿಲು ಮುರಿದು ನುಗ್ಗಿದ್ದ ಆರೋಪಿ, ಅಲ್ಲಿದ್ದ ಹುಂಡಿಗಳನ್ನು ದೋಚಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next