Advertisement

ಹಂಗಾರಕಟ್ಟೆಯ ಚಕ್ರವರ್ತಿ ಬಾರ್ ನಲ್ಲಿ ಕಳ್ಳತನ; 1.50ಲಕ್ಷದ ಮದ್ಯ‌ ಕಳವು

04:21 PM Apr 24, 2020 | mahesh |

ಕೋಟ: ಮಾಬುಕಳ ಸಮೀಪ ಹಂಗಾರಕಟ್ಟೆಯ ಚಕ್ರವರ್ತಿ ಬಾರ್ ಗೆ ಕಳ್ಳರು ನುಗ್ಗಿ ಸುಮಾರು 1.50 ಲಕ್ಷ ಮೌಲ್ಯದ ಮದ್ಯವನ್ನು ಅಪಹರಿಸಿದ ಘಟನೆ ಎ.22ರಂದು ಸಂಭವಿಸಿದೆ. ಬಾರ್ ನ ಹಿಂಬದಿಯ ಕಿಟಕಿ ಹಾಗೂ ಬಾರ್ ನ ಹಂಚಿನ ಮಾಡಿನ ಹಂಚು ತೆಗೆದು ಒಳನುಗ್ಗಿ 266.735 ಲೀಟರ್ ನಷ್ಟು ಮದ್ಯ ತುಂಬಿರುವ ಸುಮಾರು 31 ಬಾಕ್ಸ್ ಹಾಗೂ 44.250 ಲೀಟರ್ ಬಿಯರ್ ಇರುವ 3 ಬಾಕ್ಸ್ ಕಳುವಾಗಿದ್ದು ಅದರ ಮೌಲ್ಯ 1,50,000/  ರೂಪಾಯಿ ಆಗಿರುತ್ತದೆ.

Advertisement

ಗುರುವಾರ ಅಪರಾಹ್ನ ಬಾರ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಭೋಜ ದೇವಾಡಿಗರವರ ಕರೆ ಮಾಡಿ ಬಾರ್ ನ ಹಿಂಬದಿಯ ಕಿಟಕಿ ಮುರಿದಿದ್ದು ಮೇಲಿನ ಹಂಚು ತೆಗೆದ ಸ್ಥಿತಿಯಲ್ಲಿ ಇರುವುದಾಗಿ ತಿಳಿಸಿದ ಮೇರೆಗೆ ಬಾರ್ ನ ಮಾಲೀಕರು ಸ್ಥಳಕ್ಕಾಗಮಿಸಿ‌ ಕೋಟ ಪೊಲೀಸರು ಹಾಗೂ ಅಬಕಾರಿ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದು ಅವರು ಸ್ಥಳಕ್ಕಾಗಮಿಸಿ‌ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಿಸಿ ಟಿವಿ ಕಣ್ತಪ್ಪಿಸಿ ಕಳ್ಳತನ ;  ಬಾರ್ ನ ಕಟ್ಟಡ ಅತ್ಯಂತ ಹಳೆಯದಾಗಿದ್ದು ಹಂಚಿನ ಮೇಲ್ಚಾವಣಿ ಹೊಂದಿದ್ದರಿಂದ ಕಳವು ಮಾಡಲು ಸುಲಭವಾಗಿದೆ ಹಾಗೂ ಕಟ್ಟಡದ ಎದುರುಗಡೆ ಸಿಸಿ ಟಿವಿ ಅಳವಡಿಸಿದ್ದರೂ ಹಿಂಬದಿಯಿಂದ ಕ್ಯಾಮಾರ ಕಣ್ತಪ್ಪಿಸಿ ಕೃತ್ಯವೆಸಗಲಾಗಿದೆಯ ಹಾಗೂ ಸ್ಕೂಟಿಯೊಂದರಲ್ಲಿಇಬ್ಬರು ವ್ಯಕ್ತಿಗಳು ಆಗಮಿಸಿದ ಚಿಕ್ಕ ಕುರುಹು ಮಾತ್ರ ಲಭ್ಯವಾಗಿದೆ
ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next