Advertisement

GP ಅಧ್ಯಕ್ಷರ ಅಧಿಕಾರ ಮೊಟಕು ಪ್ರಯತ್ನ -15 ನೇ ಹಣಕಾಸು ಕ್ರೀಯಾಯೋಜನೆ ಮಂಜೂರಾತಿಗೆ ಅಡ್ಡಿ

03:19 PM Sep 26, 2023 | Kavyashree |

ತೀರ್ಥಹಳ್ಳಿ: ಸರ್ಕಾರ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯ ಅಧಿಕಾರಿಗಳು ಹಂತಹಂತವಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರುಗಳ ಅಧಿಕಾರವನ್ನು ಮೊಟಕುಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಗ್ರಾಮ ಪಂಚಾಯತ್ ಒಕ್ಕೂಟದ ಅಧ್ಯಕ್ಷ ಅನಿಲ್ ತಿಳಿಸಿದ್ದಾರೆ.

Advertisement

ಇದೀಗ 15ನೇ ಹಣಕಾಸು ಕ್ರೀಯಾಯೋಜನೆಯ ಮಂಜೂರಾತಿಗೆ ಅಡ್ಡಿಪಡಿಸುವ ಮೂಲಕ ಕೇಂದ್ರ ಸರ್ಕಾರ ನೀಡುತ್ತಿರುವ ಅನುದಾನದಲ್ಲಿ ಕಾಮಗಾರಿಗಳನ್ನು ಮಾಡಲು ಅಡಚಣೆಯನ್ನುಂಟು ಮಾಡುತ್ತಿರುವುದು ಖಂಡನೀಯ ಎಂದರು.

ಕೇಂದ್ರ ಸರ್ಕಾರ ಗ್ರಾಮ ಪಂಚಾಯತಿಗಳಿಗೆ ಬಿಡುಗಡೆ ಮಾಡುವ 15ನೇ ಹಣಕಾಸಿಗೆ ಗ್ರಾಮ ಪಂಚಾಯತಿಯಲ್ಲಿ ನಿಯಮಾನುಸಾರ ಕ್ರೀಯಾಯೋಜನೆ ತಯಾರಿಸಿ ಇ ಗ್ರಾಮ್ ಸ್ವರಾಜ್ ಗೆ ಆನ್‌ಲೈನ್‌ನಲ್ಲಿ ಅಪ್ ಲೋಡ್ ಮಾಡುವ ಮೂಲಕ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳೇ ಕಾಮಗಾರಿಗಳಿಗೆ ಅನುಮೋದನೆ ನೀಡುವಂತಹ ಅವಕಾಶವಿದೆ ಎಂದು ಹೇಳಿದರು.

ಆದರೆ ಇದೀಗ ಕ್ರೀಯಾ ಯೋಜನೆ ತಯಾರಿಸಿ ಅನುಮೋದನೆಗಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಕಳುಹಿಸಬೇಕೆಂದು ಶಿವಮೊಗ್ಗ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ ಮೌಖಿಕವಾಗಿ ತಿಳಿಸಿದ್ದಾರೆ ಎಂದು ಅಭಿವೃದ್ಧಿ ಅಧಿಕಾರಿಗಳು ತಾಲೂಕಿನ ಎಲ್ಲಾ ಪಂಚಾಯತಿಯ ಕ್ರೀಯಾ ಯೋಜನೆ ಮಂಜೂರಾತಿಗೆ ಅಡ್ಡಿ ಪಡಿಸುತ್ತಿದ್ದು ಕಳೆದ ಮೂರ್ನಾಲ್ಕು ತಿಂಗಳ ಹಿಂದೆಯೇ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹದಿನೈದನೇ ಹಣಕಾಸಿನ ಹಣಕ್ಕೆ ಕ್ರೀಯಾಯೋಜನೆ ತಯಾರಿಸಿದ್ದರೂ ಕಾಮಗಾರಿ ಮಾಡಿಸದಂತಾಗಿದೆ ಎಂದು ತಿಳಿಸಿದರು.

ಮಳೆಗಾಲದ ಆರಂಭದಲ್ಲೇ ಹಲವು ಗ್ರಾಮ ಪಂಚಾಯತಿಗಳಲ್ಲಿ ಕ್ರೀಯಾ ಯೋಜನೆ ತಯಾರಾಗಿದ್ದರೂ ಮೇಲಧಿಕಾರಿಗಳ ಮೌಖಿಕ ಆದೇಶವನ್ನು ಪಾಲಿಸಬೇಕೆಂದು, ಅಭಿವೃದ್ಧಿ ಅಧಿಕಾರಿಗಳು ಕೆಲಸ ನಿರ್ವಹಿಸಲು ಬಿಡುತ್ತಿಲ್ಲ. ಕ್ರೀಯಾ ಯೋಜನೆಯನ್ನು ತಾಲೂಕು ಪಂಚಾಯತಿಗೆ ಕಳುಹಿಸಲಾಗಿದೆ ಜಿಲ್ಲಾ ಪಂಚಾಯತ್ ನಿಂದ ಆನುಮೋದನೆ ಆಗಿಲ್ಲ ಎಂದು ಅಬಿವೃದ್ದಿ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ ಎಂದರು.

Advertisement

ಜಿಲ್ಲಾ ಪಂಚಾಯತ್‌ನಲ್ಲಿ ಆದಕ್ಕೆ ಸಂಬಂಧಿಸಿದ ಕೇಸ್ ವರ್ಕರ್ ಇಲ್ಲ ಎಂಬುದಾಗಿ  ಗ್ರಾಮ ಪಂಚಾಯತಿಯ ಅಧ್ಯಕ್ಷರುಗಳು ಆರೋಪಿಸುತ್ತಿದ್ದು, ಪಂಚಾಯಿತಿಯಲ್ಲಿ 15ನೇ ಹಣಕಾಸು ಯೋಜನೆಯಡಿ ಹಣವಿದ್ದರೂ ಕಾಮಗಾರಿ ನಿರ್ವಹಿಸದಂತಾಗಿದ್ದು,ಅಭಿವೃದ್ದಿ ಕುಂಟಿತವಾಗಿದೆ ಎಂದು ಹೇಳಿದರು.

ಯಾವುದೇ ಜಿಲ್ಲೆಯಲ್ಲೂ ಕಾರ್ಯರೂಪದಲ್ಲಿ ಇಲ್ಲದ ನಿಯಮವನ್ನು ಜಾರಿಗೊಳಿಸಲು ಮೌಖಿಕ ಆದೇಶವನ್ನು ನೀಡಿರಿವ ಸಿಇಓ ಸ್ನಹೇಲ್ ಸುಧಾಕರ್ ಆದನ್ನು ಹಿಂಪಡೆಯ ಬೇಕಿದೆ. ನಿಯಮಾನುಸಾರ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳೇ 15ನೇ ಹಣಕಾಸು ಯೋಜನೆಯ ಕಾಮಗಾರಿಗಳ ಅನುಮೋದನೆಗೆ ಕ್ರಮ ಕೈಗೊಳ್ಳಬೇಕಾಗಿದ್ದರೂ ವಿನಾ ಕಾರಣ ಮಂಜೂರಾತಿಗಾಗಿ ಜಿಲ್ಲಾ ಪಂಚಾಯತ್‌ಗೆ ಕಳುಹಿಸಿ ಎಂದು ಹೇಳಿರುವುದು ಖಂಡನೀಯವಾಗಿದ್ದು ಯಾವುದೇ ಲಿಖಿತ ಆದೇಶವಿಲ್ಲದೆ ಅಭಿವೃದ್ಧಿ ಅಧಿಕಾರಿಗಳಿಗೆ ಈ ರೀತಿ ಸೂಚನೆ ನೀಡಿರುವುದು ಸಮಂಜಸವಲ್ಲ.

(ಒಂದು ವೇಳೆ ಸರ್ಕಾರದ ಆದೇಶವಿದ್ದರು ಅದು ಅವೈಜ್ಞಾನಿಕ) ಇದರಿಂದ ಕಾಮಗಾರಿ ನಿರ್ವಹಿಸಲು ಸಾಕಷ್ಟು ವಿಳಂಬವಾಗುತ್ತಿರುವುದಲ್ಲದೆ ಅಡಚಣೆಯೂ ಉಂಟಾಗಿದೆ.ಜೊತೆಗೆ ಈ ರೀತಿ ಅನುಮೋದನೆ ಜಿಲ್ಲಾ ಪಂಚಾಯತ್ ಗೆ ಕಳುಹಿಸಿ ಎನ್ನುವ ಮೂಲಕ ಗ್ರಾಮ ಪಂಚಾಯತಿಯ ಅಧ್ಯಕ್ಷರುಗಳ ಅಧಿಕಾರವನ್ನು ಮೊಟಕುಗೊಳಿಸುವ ಹುನ್ನಾರವೂ ಇದಾಗಿದೆಯೆಂದು ತಿಳಿಸಿರುವ ಒಕ್ಕೂಟದ ಅಧ್ಯಕ್ಷ ಅನಿಲ್ ಕೂಡಲೇ ಎಲ್ಲಾ ಗ್ರಾಮ ಪಂಚಾಯತಿಯ ಅಭಿವೃದ್ದಿ ಅಧಿಕಾರಿಗಳಿಗೆ ಹಿಂದಿನಂತೆ ಕ್ರೀಯಾಯೋಜನೆಯ ಮಂಜೂರಾತಿಗೆ ಅನುಮೋದನೆ ನೀಡುವಂತೆ ಮಾಡಿ ಕಾಮಗಾರಿಗಳನ್ನು ನಡೆಸಲು ಕ್ರಮ  ಕೈಗೊಳ್ಳುವಂತೆ ಆದೇಶ ಹೊರಡಿಸಬೆಕಿದೆ ಎಂದು ಅವರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next