Advertisement

ಕನ್ನಡಕ್ಕೆ ರಜತ ಸಂಭ್ರಮ: ತೀರ್ಥಹಳ್ಳಿಯಲ್ಲಿ ನೆಡೆಯಲಿದೆ ಅದ್ದೂರಿ ಕನ್ನಡ ರಾಜ್ಯೋತ್ಸವ

03:27 PM Nov 20, 2023 | sudhir |

ತೀರ್ಥಹಳ್ಳಿ : ಕನ್ನಡಕ್ಕೆ ರಜತ ಸಂಭ್ರಮ ತುಂಬಿದ ಕಾರಣಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ತವರಿನಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ತೀರ್ಮಾನಿಸಿದ್ದು ನವೆಂಬರ್ 25 ರ ಶನಿವಾರ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಹಲವಾರು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ವೆಂಕಟೇಶ್ ಹೆಗ್ಡೆ ಹೇಳಿದರು.

Advertisement

ಸೋಮವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಅವರು ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಕನ್ನಡ ವಿಷಯದಲ್ಲಿ 125 ಕ್ಕೆ 125 ಅಂಕ ಪಡೆದ ತಾಲೂಕಿನ ಎಲ್ಲಾ ಶಾಲೆಯ 25 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ ನೀಡಲಾಗುವುದು, ಹಾಗೆ ಡ್ಯಾನ್ಸ್ ಪ್ಯಾಲೇಸ್ ಅಕಾಡೆಮಿ ತೀರ್ಥಹಳ್ಳಿ ಇವರಿಂದ ಡ್ಯಾನ್ಸ್ ಕಾರ್ಯಕ್ರಮ ಇರಲಿದೆ ಎಂದರು.

ಸಂಜೆ 6 ಗಂಟೆಗೆ ದುರ್ಗಾ ಕಲಾತಂಡ ಹಾರಾಡಿ ಬ್ರಹ್ಮಾವರ ಇವರಿಂದ ” ಒಂದಲ್ಲಾ ಒಂದ್ ಸಮಸ್ಯೆ” ಎಂಬ ಕುಂದ ಕನ್ನಡದ ಹಾಸ್ಯಮಯ ನಗೆ ನಾಟಕ ನೆಡೆಯಲಿದೆ. ರಚನೆ ಮತ್ತು ನಿರ್ದೇಶನ ರಾಜೇಶ್ ಹಾರಾಡಿ ಹಾಗೂ ಶುಭಕರ ಬೆಳವು ಇವರ ಸಂಗೀತ ಇರಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾಜಿ ಗೃಹಸಚಿವರು, ಹಾಲಿ ಶಾಸಕರಾದ ಆರಗ ಜ್ಞಾನೇಂದ್ರ, ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡ, ಆರ್ ಮದನ್, ಪ. ಪಂ ಅಧ್ಯಕ್ಷೆ ಗೀತಾ ರಮೇಶ್ ಭಾಗಿಯಾಗಲಿದ್ದಾರೆ ಎಂದರು.

ಆ ದಿನ ಪಟ್ಟಣದ ಪ್ರತಿಯೊಂದು ಅಂಗಡಿ ಮುಂಗಟ್ಟುಗಳ ಮುಂಭಾಗ ಕನ್ನಡ ಬಾವುಟವನ್ನು ಕಟ್ಟಬೇಕು. ಪಟ್ಟಣದ ತುಂಬಾ ಆ ದಿನ ಕನ್ನಡ ರಾರಾಜಿಸಬೇಕು. ಪ್ರತಿಯೊಂದು ಅಂಗಡಿಗಳಿಗೂ ಕನ್ನಡ ಧ್ವಜವನ್ನು ನಾವೇ ತಲುಪಿಸುತ್ತೇವೆ ಹಾಗೂ ಮುಂದಿನ ದಿನಗಳಲ್ಲಿ ಪಟ್ಟಣದ ಪ್ರತಿಯೊಂದು ಅಂಗಡಿ ಹೆಸರುಗಳು ಕನ್ನಡದಲ್ಲಿ ಇರುವಂತೆ ಪಟ್ಟಣ ಪಂಚಾಯತ್ ಗೆ ತಿಳಿಸಿದ್ದೇವೆ. ಒಂದು ತಿಂಗಳೊಳಗೆ ಸರಿ ಪಡಿಸದಿದ್ದರೆ ಮಸಿ ಬಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ತಾ. ಕರವೇ ಅಧ್ಯಕ್ಷರಾದ ಸುರೇಂದ್ರ ಯಡೂರು, ಮಲ್ಲಕ್ಕಿ ರಾಘವೇಂದ್ರ, ವಿಜಯ್ ಬಿಳಿಗಿರಿ, ವಿಕ್ರಮ್ ಶೆಟ್ಟಿ, ಶ್ರೀಕಾಂತ್, ಅರ್ಜುನ್ ಸೇರಿ ಹಲವರು ಉಪಸ್ಥಿತರಿದ್ದರು.

Advertisement

ಇದನ್ನೂ ಓದಿ: 2nd Pocso Case; ಮುರುಘಾ ಶರಣರನ್ನು ಮತ್ತೆ ಬಂಧಿಸಿದ ಪೊಲೀಸರು

Advertisement

Udayavani is now on Telegram. Click here to join our channel and stay updated with the latest news.

Next