Advertisement

ಪ್ರತಿಭಾ ವಿಕಸನಕ್ಕೆ ರಂಗಕಲೆ ಪೂರಕ:  ಶಂಕರ ಪೂಜಾರಿ

01:05 AM Mar 02, 2019 | |

ಮಲ್ಪೆ: ಪ್ರತಿಯೊಬ್ಬರಲ್ಲೂ ವಿಶೇಷವಾದ ಸಾಮರ್ಥ್ಯವಿರುತ್ತದೆ. ಸರಿಯಾದ ಅವಕಾಶ ಸಿಕ್ಕಿದಾಗ ಮಾತ್ರ ಅದು ಮೌಲ್ಯ ಪಡೆದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ರಂಗಕಲೆಯೂ ಸಾಕಷ್ಟು ಪ್ರತಿಭೆಗಳು ಮುಖ್ಯವಾಹಿನಿಗೆ ಬರು ವಂತೆ ಮಾಡುತ್ತದೆ ಎಂದು ಕಟಪಾಡಿ  ವಿಶ್ವನಾಥ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ಬಿ. ಎನ್‌. ಶಂಕರ  ಪೂಜಾರಿ ಹೇಳಿದರು.

Advertisement

ಉಡುಪಿ ಭುಜಂಗ ಪಾರ್ಕ್‌ನ ಬಯಲು ರಂಗ ಮಂದಿರದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ಸುಮನಸಾ ಕೊಡವೂರು ಆಯೋಜಿಸಿದ  ರಂಗಹಬ್ಬ-7ರ 2ನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಮುಖ್ಯ ಅತಿಥಿಗಳಾಗಿದ್ದ ಹಿರಿಯ ರಂಗನಟಿ ಮಾಧವಿ ಭಂಡಾರಿ ಮಾತ ನಾಡಿ, ಸರಿ-ತಪ್ಪುಗಳನ್ನು ತಿಳಿಸುವುದರೊಂದಿಗೆ ಸಮಾಜ ತಿದ್ದುವ ಕಾಯಕ ನಾಟಕರಂಗದಿಂದಾಗುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ನಗರಸಭಾ ಸದಸ್ಯ  ಶ್ರೀಶ ಭಟ್‌ ಕೊಡವೂರು, ಉಡುಪಿ ರಂಗಭೂಮಿ ಕಾರ್ಯದರ್ಶಿ ರವಿರಾಜ್‌ ಎಚ್‌.ಪಿ, ಸ್ನೇಹ ಟ್ಯುಟೋರಿಯಲ್‌ ಕಾಲೇಜಿನ ಉಪ ಪ್ರಾಂಶುಪಾಲ  ಕರುಣಾಕರ್‌ ಮಲ್ಪೆ, ನ್ಯಾಯವಾದಿ ಅನಿಲ್‌ ಕುಮಾರ್‌, ರಂಗ ಕಲಾವಿದೆ ಪುಷ್ಪಾ  ಶಶಿಧರ್‌, ಪ್ರಗತಿಪರ ಕೃಷಿಕ ಮುದ್ದು ಅಣ್ಣಪ್ಪ ಶೆಟ್ಟಿ ಹಾಗೂ ಸುಮನಸಾದ ಅಧ್ಯಕ್ಷ ಪ್ರಕಾಶ್‌ ಜಿ.  ಕೊಡವೂರು ಉಪಸ್ಥಿತರಿದ್ದರು.ಹಿರಿಯ ನಾಟಕಕಾರ ಮುಂಬಯಿಯ ನಂದಳಿಕೆ ನಾರಾಯಣ ಶೆಟ್ಟಿ ಅವರನ್ನು ರಂಗಸಾಧಕ ಸಮ್ಮಾನ ನೀಡಿ ಗೌರವಿಸಲಾಯಿತು. 

ಸುಮನಸಾ ಉಪಾಧ್ಯಕ್ಷ ಗಣೇಶ್‌ ರಾವ್‌ ಎಲ್ಲೂರು ಸ್ವಾಗತಿಸಿದರು. ಪ್ರಜ್ಞಾಶ್ರೀ ವಂದಿಸಿದರು. ಪ್ರವೀಣ್‌ ಚಂದ್ರ ತೋನ್ಸೆ ನಿರೂಪಿಸಿದರು. ಬಳಿಕ ಸುಮನಸಾ ಕೊಡವೂರು ತಂಡದಿಂದ “ಅವ್ವ’ ನಾಟಕ ಪ್ರದರ್ಶನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next