Advertisement

ರಂಗಕಲೆ ಆಸಕ್ತಿ ಬೆಳೆಯಬೇಕು: ಡಾ|ಶಾಂತಾರಾಮ್‌

02:42 PM Mar 16, 2018 | Team Udayavani |

ಕುಂದಾಪುರ : ಯುವಜನರು ರಂಗಕಲೆಗಳ ಕುರಿತು ಆಸಕ್ತಿ ಬೆಳೆಸಿಕೊಳ್ಳುವ ಕಾರ್ಯ ಆಗಬೇಕಿದೆ. ರಂಗ ಅಧ್ಯಯನ ಕೇಂದ್ರದಿಂದ ಈ ಕಾರ್ಯ ನಡೆಯಬೇಕು ಎಂದು ಮಣಿಪಾಲದ ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ ಆಡಳಿತಾಧಿಕಾರಿ, ಕುಂದಾಪುರದ ರಂಗ ಅಧ್ಯಯನ ಕೇಂದ್ರದ ಡಾ| ಎಚ್‌. ಶಾಂತಾರಾಮ್‌ ಹೇಳಿದರು.

Advertisement

ಅವರು ಗುರುವಾರ ಭಂಡಾರ್‌ಕಾರ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ಪದ್ಮಾವತಿ ಭಂಡಾರ್‌ಕಾರ್ ರಂಗಮಂದಿರದಲ್ಲಿ ರಂಗ ಅಧ್ಯಯನ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರಿನ ಸಂಯುಕ್ತ ಆಶ್ರಯದಲ್ಲಿ ಮಾ. 15ರಿಂದ   22ರ ವರೆಗೆ ನಡೆಯಲಿರುವ ಭಾರತೀಯ ರಂಗ ಮಹೋತ್ಸವದ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾಟಕದೊಂದಿಗೆ ಇತರ ರಂಗ ಕಲೆಗಳಿಗೂ ಉತ್ತೇಜನ ನೀಡಬೇಕು. ಅವುಗಳಿಗೂ ಸರಿಯಾದ ವೇದಿಕೆ ನಿರ್ಮಿಸಿಕೊಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು. ಎಲ್ಲ ಕೆಲಸಗಳಿಗೂ ಸರಕಾರವನ್ನೇ ಅವಲಂಬಿಸುವುದು ಸರಿಯಲ್ಲ ಎಂದವರು ಹೇಳಿದರು. 

ಕಾರ್ಯಕ್ರಮ ಉದ್ಘಾಟಿಸಿದ ರಂಗಕರ್ಮಿ ಗೋಪಾಲಕೃಷ್ಣ ನಾಯರಿ ಮಾತನಾಡಿ, ವಿದ್ಯುನ್ಮಾನ ಯುಗದಲ್ಲಿ ರಂಗದ ಬಗೆಗಿನ ಆಸಕ್ತಿ ಕಳೆಗುಂದುತ್ತಿದ್ದು, ಈ ಕಾಲೇಜಿನಿಂದ ವಿದ್ಯಾರ್ಥಿಗಳಿಗೆ ಉಚಿತ ನಾಟಕ ತರಬೇತಿಯಂತಹ ಕಾರ್ಯಗಳು ನಡೆಯುವುದು ಉತ್ತಮ ಬೆಳವಣಿಗೆ. ಈಗಿನ ಆಳುವ ವರ್ಗಕ್ಕೆ ಇಂದ್ರಿಯಗಳೇ ಕಳೆದುಹೋಗಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಿಗಬೇಕಾದವರಿಗೆ ಸರಿಯಾದ ಅನುದಾನ ಸಿಗುತ್ತಿಲ್ಲ ಎಂದರು. 

ರಂಗ ಅಧ್ಯಯನ ಕೇಂದ್ರದ ವಿಶ್ವಸ್ತರಾದ ಕೆ. ಶಾಂತಾರಾಮ್‌ ಪ್ರಭು, ದೇವದಾಸ್‌ ಕಾಮತ್‌, ರಾಜೇಂದ್ರ ತೋಳಾರ್‌, ರಂಗ ಅಧ್ಯಯನ ಕೇಂದ್ರದ ಸಂಚಾಲಕ ವಸಂತ ಬನ್ನಾಡಿ ಉಪಸ್ಥಿತರಿದ್ದರು.  ರಂಗ ಅಧ್ಯಯನ ಕೇಂದ್ರದ ಕಾರ್ಯದರ್ಶಿ,  ಕಾಲೇಜಿನ ಪ್ರಾಂಶುಪಾಲ ಡಾ| ಎನ್‌.ಪಿ. ನಾರಾಯಣ ಶೆಟ್ಟಿ ಸ್ವಾಗತಿಸಿದರು. ಅಧ್ಯಾಪಕ ಕುಮಾರ್‌ ವಂದಿಸಿದರು. ಉಪನ್ಯಾಸಕಿ ಪಾರ್ವತಿ ಜಿ. ಐತಾಳ್‌ ಕಾರ್ಯಕ್ರಮ ನಿರ್ವಹಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next