Advertisement

ರಂಗಕರ್ಮಿ ಡಿ.ಕೆ.ಚೌಟ ಅವರಿಗೆ ಶ್ರದ್ಧಾಂಜಲಿ

06:45 AM Jun 24, 2019 | Lakshmi GovindaRaj |

ಬೆಂಗಳೂರು: ಇತ್ತೀಚೆಗೆ ನಿಧನರಾದ ಹಿರಿಯ ರಂಗಕರ್ಮಿ ಹಾಗೂ ಸಾಹಿತಿ ಡಿ.ಕೆ.ಚೌಟ ಅವರಿಗೆ ಭಾನುವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ತುಳುವರೆ ಚಾವಡಿ ಬೆಂಗಳೂರು ಸಂಘಟನೆ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಬೆಂಗಳೂರಿನ ಹಲವು ಕಡೆಗಳಲ್ಲಿರುವ ವಿವಿಧ ತುಳು ಸಂಘಟನೆಯ ಮುಖಂಡರು ಭಾಗವಹಿಸಿದ್ದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ತುಳುವರೆ ಚಾವಡಿ ಬೆಂಗಳೂರು ಸಂಘಟನೆಯ ಗೌವರ ಕಾರ್ಯಾಧ್ಯಕ್ಷ ಪುರುಷೋತ್ತಮ ಚೇಂಡ್ಲಾ, ಎಲ್ಲಾ ರಂಗಗಳಲ್ಲೂ ಸೈ ಎನಿಸಿಕೊಂಡಿರುವ ವ್ಯಕ್ತಿ ಅಂದರೆ ಅದು ಡಿ.ಕೆ.ಚೌಟ ಎಂದು ಬಣ್ಣಿಸಿದರು.

ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆನ ಸೇರಿಸಬೇಕು ಎಂಬ ಹೋರಾಟದಲ್ಲಿ ಚೌಟರು ಕಾಣಿಸಿಕೊಂಡಿದ್ದರು. ತುಳುಭಾಷೆಗೆ ವಿಶೇಷವಾದ ಸ್ಥಾನ ಮಾನ ದೊರಕಬೇಕು ಎಂಬ ತುಡಿತ ಅವರದ್ದಾಗಿತ್ತು. ಆದರೆ ಈಗ ಅವರನ್ನು ಕಳೆದು ಕೊಂಡಿರುವುದು ತುಳು ಭಾಷೆಗೆ ತುಂಬಲಾರದ ನಷ್ಟ ಎಂದು ಹೇಳಿದರು.

ಶ್ರೀಮಂತ ಮನೆತನದಿಂದ ಹುಟ್ಟಿದ್ದ ಚೌಟರವರು ಕೃಷಿಕನಾಗಿ, ಉದ್ಯಮಿಯಾಗಿ, ಸಾಹಿತಿಯಾಗಿ ಹಾಗೂ ರಂಗಕರ್ಮಿಯಾಗಿ ಹೆಸರು ಮಾಡಿದ್ದಾರೆ. ಎಲ್ಲಾ ಕ್ಷೇತ್ರಗಳಿಗೂ ಒಗ್ಗಿಕೊಳ್ಳುವ ವ್ಯಕ್ತಿ ಅವರಾಗಿದ್ದರು ಎಂದರು.

ಡಿ.ಕೆ.ಚೌಟ ಅವರ ಒಡನಾಡಿ ಕೃಷ್ಣಮೂರ್ತಿ ಕವತ್ತಾರು ಮಾತನಾಡಿ, ಎಲ್ಲರಿಗೂ ಸದಾ ಒಳಿತನ್ನು ಬಯಸುತ್ತಿದ್ದ ಚೌಟರು ರಾಜಮನೆತನದಲ್ಲಿ ಹುಟ್ಟಿದರೂ, ಆಡಂಬರವನ್ನು ನೀರಿಕ್ಷೆ ಮಾಡುತ್ತಿರಲಿಲ್ಲ. ಹೊಸತನ್ನು ಸಾಧಿಸಬೇಕು ಎಂಬ ಹಂಬಲ ಅವರಲ್ಲಿತ್ತು ಎಂದು ನುಡಿದರು.

Advertisement

ಕೃಷಿಯನ್ನು ಬಹಳ ಇಷ್ಟಪಡುತ್ತಿದ್ದ ಅವರು ಸಾಂಸ್ಕೃತಿಕ ಕೃಷಿಯನ್ನು ಕೂಡ ಮಾಡಿದರು. ಹೀಗಾಗಿ ಅವರು ನಮಗೆ ಹಲವು ರೀತಿಯಲ್ಲಿ ಮಾದರಿ ವ್ಯಕ್ತಿಯಾಗಿ ನಿಲ್ಲುತ್ತಾರೆ. ಅವರು ನಡೆದ ದಾರಿಯಲ್ಲಿ ಸಾಗೋಣ ಎಂದರು.

ಶಿಕ್ಷಣ ತಜ್ಞ ಕೆ.ಈ.ರಾಧಾಕೃಷ್ಣ ಮಾತನಾಡಿ, ತುಳು ಸಾಹಿತ್ಯಕ್ಕೆ ಚೌಟರವರ ಸೇವೆ ಅನನ್ಯ. ತುಳು ಭಾಷೆ ಅಲ್ಲದೆ ಕನ್ನಡದಲ್ಲೂ ಕೆಲವು ಕೃತಿಗಳನ್ನು ರಚಿಸಿದ್ದಾರೆ. ಹೀಗಾಗಿ ಚೌಟರವರ ನಿಧನ ಕನ್ನಡ ಸಾಂಸ್ಕೃತಿ ಲೋಕಕ್ಕೆ ತುಂಬಲಾರದ ನಷ್ಟ ಎಂದು ಹೇಳಿದರು.

ಬೆಂಗಳೂರು ತುಳು ಕೂಟದ ಕಾರ್ಯದರ್ಶಿ ದೇವೇಂದ್ರ ಹೆಗಡೆ, ವಿಜಯ್‌ಕುಮಾರ್‌ ಕುಲಶೇಖರ್‌, ಸುಂದರಾಜ್‌ ರೈ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ, ಮಾಜಿ ಅಧ್ಯಕ್ಷ ಚಂದ್ರಹಾಸ ರೈ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next