Advertisement

ಸಿನಿಮಾಗಿಂತ ರಂಗಕಲೆಗಿದೆ ಹೆಚ್ಚಿನ ಶಕ್ತಿ

11:11 AM Dec 12, 2021 | Team Udayavani |

ಸೇಡಂ: ತಾಲೂಕಿನ ಮುನಕನಪಲ್ಲಿ ಗ್ರಾಮದಲ್ಲಿ ಹೇಮರೆಡ್ಡಿ ಮಲ್ಲಮ್ಮ ನಾಟ್ಯ ಸಂಘದ ವತಿಯಿಂದ ಶ್ರೀ ಗುರು ಮಲ್ಲಾರಾಧ್ಯ ರಂಗಮಂಟಪದಲ್ಲಿ “ಮಗ ಹೋದರೂ ಮಾಂಗಲ್ಯ ಬೇಕು’ ಎನ್ನುವ ಸಾಮಾಜಿಕ ನಾಟಕ ಪ್ರದರ್ಶಿಸಲಾಯಿತು. ಬಹುತೇಕ ಗ್ರಾಮೀಣ ಪ್ರತಿಭೆಗಳನ್ನು ಒಳಗೊಂಡ ನಾಟಕ ಅತ್ಯದ್ಭುತವಾಗಿ ಮೂಡಿಬಂತು.

Advertisement

ಯಲ್ಲಪ್ಪ ಯಾಳಗಿ ರಚಿತ ರಾಚಪ್ಪ ಮಾಸ್ತರ ಕಮರಡಗಿ ನಿರ್ದೇಶನದಲ್ಲಿ ನಡೆದ ನಾಟಕ ಹಲವಾರು ಸಾಮಾಜಿಕ ಹಾಗೂ ಕೌಟುಂಬಿಕ ಸನ್ನಿವೇಶ ಗಳನ್ನು ಒಳಗೊಂಡಿದ್ದವು. ರಂಗಭೂಮಿ ಕಲಾವಿದರು ಇಡೀ ನಾಟಕವನ್ನು ಅಚ್ಚುಕಟ್ಟಾಗಿ ಮೂಡುವಂತೆ ಮಾಡಿದರು.

ನಾಟಕ ಪ್ರದರ್ಶನವನ್ನು ಹಾಪಕಾಮ್ಸ್‌ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ ಊಡಗಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸಬೇಕಾಗಿದೆ. ತಾಂತ್ರಿಕ ಯುಗದಲ್ಲಿ ನಮ್ಮ ಭಾಗದ ಕಲೆಗೆ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕಾಗಿದೆ. ಸಿನಿಮಾಗಳಿಗಿಂತಲೂ ರಂಗಕಲೆಗೆ ಹೆಚ್ಚಿನ ಶಕ್ತಿ ಇದೆ ಎಂದರು.

ಜಾಕನಪಲ್ಲಿ ಶಿವಯೋಗಿ ಮಠದ ಅಭಿನವ ಗವಿಸಿದ್ಧಲಿಂಗೇಶ್ವರ ಸ್ವಾಮೀಜಿ, ಜೆಡಿಎಸ್‌ ಮುಖಂಡ ಬಾಲರಾಜ ಗುತ್ತೇದಾರ ಮಾತನಾಡಿದರು. ಮಾಜಿ ಜಿಪಂ ಸದಸ್ಯ ವೀರಾರೆಡ್ಡಿ ಹೂವಿನಬಾವಿ, ಜೆಡಿಎಸ್‌ ಕಾರ್ಯಾಧ್ಯಕ್ಷ ಶಿವರಾಮರೆಡ್ಡಿ, ಕಾಂಗ್ರೆಸ್‌ ಮುಖಂಡ ಸತೀಶರೆಡ್ಡಿ ಪಾಟೀಲ ರಂಜೋಳ, ಪತ್ರಕರ್ತರ ಸಂಘದ ಅಧRಕ್ಷ ಶಿವಕುಮಾರ ನಿಡಗುಂದಾ, ಪತ್ರಕರ್ತ ಶರಣಪ್ಪ ಎಳ್ಳಿ, ಅಶೋಕ ಕುಂಬಾರ, ಪ್ರಕಾಶ ಹಾಗೂ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next