Advertisement
ಸೂಕ್ಷ್ಮಸಂವೇದನೆಯ ನಾಟಕಗಳಿಗೆ ಪ್ರೇಕ್ಷಕ ವರ್ಗದ ಅಭಾವ ಇದೆಯಾ? ಇಲ್ಲ. ಸಿನೆಮಾ ಅಥವಾ ತುಳು ಹಾಸ್ಯ ನಾಟಕಗಳನ್ನು ನೂರು ಜನ ನೋಡುವುದಕ್ಕೂ, ರಂಗಭೂಮಿಯ ಸೂಕ್ಷ್ಮ ಸಂವೇದನಾ ನಾಟಕಗಳನ್ನು 10 ಪ್ರಬುದ್ಧ ವೀಕ್ಷಕರು ನೋಡುವುದಕ್ಕೂ ಅಜಾಗಜಾಂತರ ವ್ಯತ್ಯಾಸವಿದೆ.
ಯಕ್ಷಗಾನ, ನಾಗಮಂಡಲ, ಹೊಸ ಸಂವೇದನೆ ನಾಟಕಗಳೆಲ್ಲವೂ ರಂಗಭೂಮಿ. ಯಕ್ಷಗಾನ, ನಾಗಮಂಡಲ ಜಿಲ್ಲೆಯಲ್ಲಿ ತುಂಬ ಪ್ರಭಾವ ಬೀರಿದೆ. ಇದನ್ನು ಕೆಲವರು ಧಾರ್ಮಿಕ ನೆಲೆಯಲ್ಲಿ ಕಂಡರೆ, ಇನ್ನು ಕೆಲವರು ಬೇರೆ ಆಯಾಮದಲ್ಲಿ ನೋಡುತ್ತಾರೆ. ಇದು ಜನರ ಮನಸ್ಥಿತಿಗೆ ಬಿಟ್ಟ ವಿಚಾರ. ಹಾಗಂತ ಹೊಸ ಸಂವೇದನೆ ಅಥವಾ ಸೂಕ್ಷ್ಮ ಸಂವೇದನೆ ನಾಟಕಗಳಲ್ಲಿ ಅಮೂಲಾಗ್ರ ಬದಲಾವಣೆ ಅಗತ್ಯ ಇಲ್ಲ. ಅದರ ಪ್ರೇಕ್ಷಕ ವರ್ಗವೇ ಬೇರೆ. ಕನ್ನಡದ ಲೇಖಕರ ಬದಲು ಇಂಗ್ಲಿಷ್ ಲೇಖಕರ ಕತೆ, ಕಾದಂಬರಿ, ಕೃತಿಗಳೇ ರಂಗಭೂಮಿಯಲ್ಲಿ ಪ್ರದರ್ಶನಗೊಳ್ಳುತ್ತಿವೆ. ಇದೂ ಪ್ರೇಕ್ಷಕರು ದೂರ ವಿರಲು ಕಾರಣವಿರಬಹುದೇ?
ಷೇಕ್ಸ್‌ಪಿಯರ್, ಕಾಳಿದಾಸ ಬರೆದಿರುವ ಕೃತಿಗಳು ಅಂದಿಗೂ, ಇಂದಿಗೂ, ಎಂದಿಗೂ ಪ್ರಸ್ತುತ. ಬೆಂಗಳೂರಿನಲ್ಲೇ ದಿನಕ್ಕೆ 5 ರಿಂದ 8 ನಾಟಕಗಳು ಬೇಕಾಗಿವೆ. ಕನ್ನಡದ ಲೇಖಕರಾದ ಕಂಬಾರರು, ಕಾರ್ನಾಡರು ವರ್ಷಕ್ಕೆ 8-10 ಕೃತಿಗಳು ಬರೆದರೆ ಅದು ಸಾಕಾಗದು. ರಂಗಭೂಮಿ ನಾಟಕಕ್ಕೆ ಕನ್ನಡದಲ್ಲಿ ಕೃತಿಗಳ ಕೊರತೆ ಬಹಳಷ್ಟಿದೆ.
Related Articles
ವೀಕ್ಷಕರ ದೃಷ್ಟಿಯಲ್ಲಿ ಕಡಿಮೆ ಆಗುತ್ತಿರುವುದು ನಿಜ. ದೃಶ್ಯ ಮಾಧ್ಯಮ, ಸಿನೆಮಾಗಳಿಂದಾಗಿ ಸೂಕ್ಷ್ಮ ಸಂವೇದನೆಯ ನಾಟಕಗಳತ್ತ ಯುವಕರ ಒಲವು ಕಡಿಮೆ. ಆದರೆ ರಂಗಭೂಮಿ ನಾಟಕ ತರಬೇತಿಗೆ ಬರುತ್ತಿರುವ ಹುಡುಗರ ಸಂಖ್ಯೆ ಹೆಚ್ಚಿದೆ. ಅಷ್ಟೇ ಬೇಗ ಹೊರ ಹೋಗುತ್ತಿರುವವರ ಸಂಖ್ಯೆಯೂ ಸಾಕಷ್ಟಿದೆ. ಆರ್ಥಿಕ ಸ್ಥಿತಿಯೂ ಇದಕ್ಕೆ ಕಾರಣವಾಗಿರಬಹುದು. ಸಿನೆಮಾದಲ್ಲಾದರೆ ಉತ್ತಮ ಸಂಭಾವನೆ ಸಿಕ್ಕರೆ, ನಾಟಕದಲ್ಲಿ ಅಂತಹ ಸಂಭಾವನೆ ಸಿಗುತ್ತಿಲ್ಲ. ರಂಗಭೂಮಿಯಿಂದ ದೂರವಾಗಲು ಇದು ಕೂಡ ಕಾರಣವಾಗಿರಬಹುದು.
Advertisement
ಚಲನಚಿತ್ರ ಹಾಗೂ ರಂಗಭೂಮಿಗಿರುವ ವ್ಯತ್ಯಾಸಗಳು ಏನು?ರಂಗಭೂಮಿ ಒಂದು ಜೀವಂತ, ಸಾಹಸಿಕ ಮಾಧ್ಯಮ. ಇಲ್ಲಿ ಸವಾಲುಗಳು ಹೆಚ್ಚಿರುತ್ತವೆ. ಆದರೆ ಚಲನಚಿತ್ರ ಹಾಗಲ್ಲ. ಸಿನೆಮಾ ಒಂದು ಯಾಂತ್ರಿಕ, ತಾಂತ್ರಿಕ ಮಾಧ್ಯಮ. ಕ್ಯಾಮರಾದಲ್ಲಿ ಚೆನ್ನಾಗಿ ಕಾಣಬೇಕು ಅಂತ ದೇಹವನ್ನು ಫಿಟ್ ಮಾಡಿಕೊಂಡರೆ ಮಾತ್ರ ಸಾಲದು. ನಟನೆಯೂ ಮುಖ್ಯ. ಆದರೆ ರಂಗಭೂಮಿಯಲ್ಲಿ ದೇಹಕ್ಕಿಂತ ನಟನೆ ಮಾತ್ರ ಮುಖ್ಯವಾಗುತ್ತದೆ. ನಾಟಕಗಳಿಗೆ ಪ್ರೇಕ್ಷಕರ ಸಂಖ್ಯೆ ಹೆಚ್ಚಲು ಏನು ಮಾಡಬೇಕು?
ರಂಗಭೂಮಿ ಒಂದು ದೊಡ್ಡ ಕಲ್ಪನೆ. ಇಲ್ಲಿನ ನಾಟಕಗಳಿಗೆ ಎಲ್ಲ ವರ್ಗದ ಪ್ರೇಕ್ಷಕರು ಬರುವುದಿಲ್ಲ. ಆದರೆ ಇಲ್ಲಿ ನಾಟಕದ ಯಶಸ್ಸಿಗೆ ಜನರು ಮಾನದಂಡ ಅಲ್ಲವೇ ಅಲ್ಲ. ಇದು ಜೀವನ ದರ್ಶನವನ್ನು ಮಾಡಿಕೊಡುವ ನಾಟಕಗಳು. ಜನಪ್ರಿಯ, ಜನ ಪ್ರತೀತ, ಸೂಕ್ಷ್ಮ ಸಂವೇದನೆ ಎನ್ನುವ ಮೂರು ರೀತಿಯ ಕಲೆಗಳಿದ್ದು, ಕಿಶೋರ್ ಕುಮಾರ್, ಎಸ್‌ಪಿಬಿ ಹಾಡುಗಳಿಗೆ ಹೆಚ್ಚಿನ ಪೇಕ್ಷಕ ವರ್ಗ ಬರುತ್ತಾರೆ. ಹಾಗಂತ ಪಂಡಿತ್ ಭೀಮ್‌ಸೇನ್ ಜೋಷಿ ಅವರ ಸಂಗೀತ ಗಾಯನಕ್ಕೆ ಬರುವ ಜನ ಕಡಿಮೆಯಾದರೂ, ಆ ಬಂದಂತಹ ಜನ ಯಾರು ಎನ್ನುವುದು ಇಲ್ಲಿ ಮುಖ್ಯ.ರಂಗಭೂಮಿ ಇದ್ದಂತೆ ಇದ್ದರೆ ಸಾಕು. ಬಸ್ರೂರು ಸಮೀಪದ ಆನಗಳ್ಳಿ ಮೂಲದ ಸುರೇಶ್ ಅವರು ನೀನಾಸಂನಿಂದ ರಂಗಭೂಮಿ ಕಡೆಗೆ ಆಸಕ್ತಿ ಬೆಳೆಸಿಕೊಂಡವರು. ಅನಂತರ ಹೊಸದಿಲ್ಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ತರಬೇತಿ, ಅಲ್ಲಿಯೇ 1 ವರ್ಷಗಳ ಕಾಲ ಫೆಲೋಶಿಪ್, ಭೋಪಾಲದ ರಂಗ ಮಂಡಲದಲ್ಲಿ 2 ವರ್ಷಗಳ ತಾಂತ್ರಿಕ ನಿರ್ದೇಶಕರಾಗಿ, 1988 ರಿಂದ 97 ರವರೆಗೆ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ನಾಟಕ ನಿರ್ದೇಶನ, ರಂಗ ತರಬೇತಿ ನೀಡಿದ್ದಾರೆ. 1997 ರಿಂದ 2013 ರವರೆಗೆ ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ವಿಭಾಗದ ವಲಯ ನಿರ್ದೇಶಕರಾಗಿ ಹಲವಾರು ರಂಗ ತರಬೇತಿ, ನಾಟಕ, ಸೆಮಿನಾರ್, ನಾಟಕೋತ್ಸವ, ಸಂಘಟನೆ ಕೆಲಸ ಮಾಡಿದವರು. ಈವರೆಗೆ ಒಟ್ಟು 190 ಸೂಕ್ಷ್ಮ ಸಂವೇದನೆಯ ನಾಟಕಗಳನ್ನು ನಿರ್ದೇಶಿಸಿ ಅನುಭವಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಅನೇಕ ಕಲಾವಿದರು ಇವರ ಗರಡಿಯಲ್ಲೇ ಪಳಗಿ ಹೆಸರು ಮಾಡಿದ್ದಾರೆ. ಸಂದರ್ಶನ: ಪ್ರಶಾಂತ ಪಾದೆ