ಮಲ್ಪೆ: ಉಡುಪಿ ನಗರಸಭಾ ವ್ಯಾಪ್ತಿಯ ಪುತ್ತೂರು ಬ್ರಾಹ್ಮಣ ಮಹಾಸಭಾ ವತಿಯಿಂದ 14ನೇ ವರ್ಷದ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳ ಉದ್ಘಾಟನೆಯು ಪುತ್ತೂರು ಶ್ರೀ ಭಗವತೀ ದುರ್ಗಾಪರಮೇಶ್ವರಿ ದೇವಸ್ಥಾನದ ಭಗವತೀ ಸಭಾಗƒಹದಲ್ಲಿ ಶನಿವಾರ ನಡೆಯಿತು.
ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನ ನೀಡಿ ಬ್ರಾಹ್ಮಣ ಸಮುದಾಯದಲ್ಲಿ ಸೇನೆಗೆ ಸೇರುವವರು ವಿರಳ ಅಂತಹ ದೇಶ ಸೇವೆ ಮಾಡಿದ ಯೋಧರನ್ನು ಸಮ್ಮಾನಿಸಿರುವುದು ಶ್ಲಾಘನೀಯ ಮತ್ತು ಯುವಜನತೆಗೆ ದೇಶ ಸೇವೆ ಮಾಡಲು ಪೊÅàತ್ಸಾಹಿಸಿದಂತಾಗಿದೆ ಎಂದರು. 14ನೇ ವರ್ಷದ ವನವಾಸ ಮುಗಿಸಿ, ರಾಮರಾಜ್ಯ ಆದಂತೆ ಪುತ್ತೂರು ಬ್ರಾಹ್ಮಣ ಮಹಾಸಭಾ 13 ವರ್ಷ ಪೂರೈಸಿ 14ನೇ ವರ್ಷದಲ್ಲಿ ಉತ್ತಮ ಕೆಲಸ ಮಾಡಿ ಪುತ್ತೂರು ರಾಮರಾಜ್ಯವಾಗಲಿ ಎಂದು ಶೀÅಗಳು ಹೇಳಿದರು.
ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಚ್. ಮೋಹನ ಉಡುಪ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಮಾಜಿ ಶಾಸಕ ಕೆ. ರಘುಪತಿ ಭಟ್, ಕೆನರಾ ಬ್ಯಾಂಕ್ ವಿಭಾಗೀಯ ನಿವೃತ್ತ ಪ್ರಬಂಧಕ ಎನ್. ಮಂಜುನಾಥ ಭಟ್, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಂ. ಮಂಜುನಾಥ ಉಪಾಧ್ಯ ಪರ್ಕಳ ಮತ್ತು ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಪಿ.ರಾಮ ಭಟ್, ಕಾರ್ಯದರ್ಶಿ ಪ್ರಮೋದ್ ತಂತ್ರಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯೋಗ ಶಿಬಿರ, ಯುವ ಘಟಕ, ಭಗವತೀ ಶ್ರೀ ದುರ್ಗಾ ಪರಮೇಶ್ವರಿ ದೇವರಿಗೆ ಲಕ್ಷ ಪ್ರದಕ್ಷಿಣೆಯ ಸಂಕಲ್ಪ ನಡೆಯಿತು. ಈ ಸಂದರ್ಭದಲ್ಲಿ ಸಾಧಕ ಯೋಧ ರಂಗನಾಥ ಕೆದ್ಲಾಯರಿಗೆ ಸನ್ಮಾನ, ವಲಯ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳಾದ ಅಭಿಷೇಕ್ ಮತ್ತು ಮಹಾಲಕ್ಷ್ಮಿà ಅವರಿಗೆ ಅಭಿನಂದನೆ ಮತ್ತು ವಲಯದಲ್ಲಿ 50 ಸಂವತ್ಸರಗಳ ಸಾರ್ಥಕ ದಾಂಪತ್ಯ ಜೀವನ ಪೂರೈಸಿದ ವಲಯದ ಸದಸ್ಯರಾದ ವನಿತಾ ವಾಸುದೇವ ಉಡುಪ ದಂಪತಿಯನ್ನು ಸಮ್ಮಾನಿಸಿ ಗೌರವಿಸಲಾಯಿತು. ಉಚಿತವಾಗಿ ಎಲ್ಲಾ ಸದಸ್ಯರಿಗೆ ತರಕಾರಿ ಬೀಜಗಳನ್ನು ವಿತರಿಸಲಾಯಿತು.
ಸಭಾ ಕಾರ್ಯಕ್ರಮದ ಅನಂತರ ಶ್ರೀದೇವರಿಗೆ ಹೂವಿನ ಪೂಜೆ, ವಲಯದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಬ್ರಾಹ್ಮಣ ಮಹಾಸಭಾ ಪುತ್ತೂರು ಇದರ ಅಧ್ಯಕ್ಷ ಎಚ್. ಮೋಹನ ಉಡುಪ ಪ್ರಸ್ತಾವಿಸಿ, ಸ್ವಾಗತಿಸಿದರು. ಸುರೇಖಾ ಗುರುಪ್ರಸಾದ್ ಪ್ರಾರ್ಥಿಸಿ, ದಿನೇಶ್ ಉಪೂ³ರು, ಮಮತಾ ತುಂಗ, ಪದ್ಮನಾಭ ಉಪಾಧ್ಯ ಮತ್ತು ಹಯವದನ ಭಟ್ ಅಭಿನಂದನಾ ಪತ್ರ ವಾಚಿಸಿದರು. ಕೋಶಾಧಿಕಾರಿ ಚೆ„ತನ್ಯ ಎಂ.ಜಿ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಪ್ರಮೋದ್ ತಂತ್ರಿ ವಂದಿಸಿದರು.