Advertisement

ಚಿಕ್ಕಮಾಗಿ ಶಾಲೆಯ 35 ಮಕ್ಕಳು ಅಸ್ವಸ್ಥ

06:00 AM Dec 21, 2018 | |

ಕಮತಗಿ (ಬಾಗಲಕೋಟೆ): ಜಿಲ್ಲೆಯ ಹುನಗುಂದ ತಾಲೂಕಿನ ಚಿಕ್ಕಮಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮಧ್ಯಾಹ್ನ ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 35ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡ ಘಟನೆ ನಡೆದಿದೆ. ತಕ್ಷಣ ಮಕ್ಕಳನ್ನು ಆ್ಯಂಬುಲೆನ್ಸ್‌ ಮತ್ತು ಟಂಟಂ ಮೂಲಕ ಕಮತಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತರಲಾಯಿತು. ಅಲ್ಲಿ ವೈದ್ಯರಿಲ್ಲದ ಕಾರಣ ಸ್ಟಾಪ್‌ನರ್ಸ್‌ ಮತ್ತು ಸಿಬ್ಬಂದಿಯೇ ಸಲೈನ್‌ ಹಚ್ಚಿ, ಮಕ್ಕಳ ಆರೈಕೆ ಮಾಡಿದರು. ಬಳಿಕ ಐದು ಆಂಬ್ಯುಲೆನ್ಸ್‌ ಮೂಲಕ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು.

Advertisement

ಗೊತ್ತಾಗಿದ್ದು ಹೇಗೆ?: 143 ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಎಂದಿನಂತೆ ಬಿಸಿಯೂಟ ಸಿದಟಛಿಪಡಿಸಲಾಗಿತ್ತು. ಸುಮಾರು 40 ಮಕ್ಕಳಿಗೆ ಅನ್ನ-ಸಾಂಬಾರ ಬಡಿಸಲಾಗಿತ್ತು. 41ನೇ  ವಿದ್ಯಾರ್ಥಿಗೆ ಊಟ ಬಡಿಸುವ ವೇಳೆ ಸಾಂಬಾರದಲ್ಲಿ ಹಲ್ಲಿ ಕಂಡು ಬಂತು. ಆಗ ಊಟ ಮಾಡದಂತೆ ಕೂಗಿ ಹೇಳಲಾಯಿತು. ಆದರೆ, ಅಷ್ಟೊತ್ತಿಗೆ 35ಕ್ಕೂ ಹೆಚ್ಚು ಮಕ್ಕಳು ಅರ್ಧ ಊಟ ಮಾಡಿದ್ದರು. ಕೆಲವು ಮಕ್ಕಳು ವಾಂತಿ ಮಾಡಿಕೊಳ್ಳಲಾರಂಭಿಸಿದರು. ತಕ್ಷಣ ಎಲ್ಲ ಮಕ್ಕಳನ್ನೂ ಕಮತಗಿ ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ಕೊಡಿಸಲಾಯಿತು.
ಅಧ್ಯಕ್ಷೆ-ಸಿಇಒ ಭೇಟಿ: ವಿಷಯ ತಿಳಿದು ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ, ಸಿಇಒ ಗಂಗೂಬಾಯಿ ಮಾನಕರ, ಹುನಗುಂದ ತಹಶೀಲ್ದಾರ್‌ ಸುಭಾಸ ಸಂಪಗಾವಿ ಮುಂತಾದವರು ಭೇಟಿ ನೀಡಿ, ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲು ಸೂಚಿಸಿದರು. ಕಮತಗಿ ಆಸ್ಪತ್ರೆಗೆ ಐಹೊಳೆ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯರು ನಿಯೋಜನೆ ಇದ್ದು, ವಿಷಯ ತಿಳಿದ ಅವರು ಬಳಿಕ ಆಸ್ಪತ್ರೆಗೆ ಬಂದು
ಚಿಕಿತ್ಸೆ ನೀಡಿದರು. 

ಘಟನೆಗೆ ಚಿಕ್ಕಮಾಗಿ ಶಾಲೆಯ  ಬಿಸಿಯೂಟ ತಯಾರಕರೇ ಮೂಲಕಾರಣ. ಊಟ ತಯಾರಿಸುವ ವೇಳೆ ಶುಚಿತ್ವ ಕಾಪಾಡುವುದು ಅವರ ಹೊಣೆ. ಹಲ್ಲಿ ಬಿದ್ದರೂ ನೋಡದೇ ಮಕ್ಕಳಿಗೆ ಊಟ ಬಡಿಸಿದ ಕಾರಣ ಮೂವರು ಅಡುಗೆ ಸಿಬ್ಬಂದಿಯನ್ನು ಕರ್ತವ್ಯದಿಂದ ವಜಾಗೊಳಿಸಲಾಗುವುದು.
● ಗಂಗೂಬಾಯಿ ಮಾನಕರ, ಜಿಪಂ ಸಿಇಒ
 

Advertisement

Udayavani is now on Telegram. Click here to join our channel and stay updated with the latest news.

Next