Advertisement

ಗೆಜ್ಜೆ ಕಟ್ಟಿ ಹೆಜ್ಜೆ  ಹಾಕಿದ ಯುವ ಮೇಳ

02:41 PM Feb 03, 2018 | |

ಪುತ್ತೂರು: ಯುವಜನ ಮೇಳಕ್ಕೆ ಗುರುವಾರ ಚಾಲನೆ ನೀಡಲಾಗಿದ್ದರೂ, ವೇದಿಕೆಯಲ್ಲಿ ಯುವ ಹೆಜ್ಜೆಗಳು ಸದ್ದು
ಮಾಡಿದ್ದು ಶುಕ್ರವಾರ.

Advertisement

ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆ ಮೈದಾನದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಯುವಜನ ಮೇಳ ರಂಗು ಪಡೆದುಕೊಂಡಿದೆ. ಸ್ಪರ್ಧೆಗಳಿಗಾಗಿ ಮೂರು ವೇದಿಕೆಗಳನ್ನು ನಿರ್ಮಿಸಿದ್ದು, ವಿವೇಕ ವೇದಿಕೆ, ಕೋಟಿ- ಚೆನ್ನಯ ಹಾಗೂ ಶಿವರಾಮ ಕಾರಂತ ವೇದಿಕೆ ಎಂದು ಹೆಸರಿಡಲಾಗಿದೆ. ಬೆಳಗ್ಗೆ 9 ಗಂಟೆಗೆ ಸಾಂಸ್ಕೃತಿಕ ಸ್ಪರ್ಧೆ ಆರಂಭಗೊಂಡಿದ್ದು, ರಾತ್ರಿ 11 ಗಂಟೆವರೆಗೂ ಮುಂದುವರಿಯಿತು. ಮೂರು ವೇದಿಕೆಗಳ ಪೈಕಿ ವಿವೇಕ ವೇದಿಕೆ ಪ್ರಧಾನ. ಪ್ರಧಾನ ವೇದಿಕೆಯ ಬಳಿಯಲ್ಲಿ ಕೌಂಟರ್‌, ಮಾಹಿತಿ ಕೇಂದ್ರದ ವ್ಯವಸ್ಥೆ ಮಾಡಲಾಗಿತ್ತು.

ಜಾನಪದ ನೃತ್ಯದೊಂದಿಗೆ ಶುಕ್ರವಾರ ಕಾರ್ಯಕ್ರಮ ಆರಂಭಗೊಂಡಿತು. 10 ನಿಮಿಷ ಅವಧಿ ನೀಡಿದ್ದು, ತಂಡದಲ್ಲಿ 12 ಜನರಂತೆ ಸ್ಪರ್ಧಿಸಿದರು. ಇದೇ ಹೊತ್ತಿನಲ್ಲಿ ಇನ್ನೆರಡು ವೇದಿಕೆಗಳಲ್ಲಿ ಯುವಕ-ಯುವತಿಯರಿಗಾಗಿ ವೈಯಕ್ತಿಕ ಭಾವಗೀತೆ ಸ್ಪರ್ಧೆ ನಡೆಯಿತು. ಮೊದಲ ಹಂತದ ಸ್ಪರ್ಧೆ ನಡೆದ ಬಳಿಕ ಕೋಲಾಟ,  ಯುವತಿಯರಿಗೆ ವೈಯಕ್ತಿಕ ರಂಗಗೀತೆ, ಯುವಕರಿಗೆ ವೈಯಕ್ತಿಕ ರಂಗಗೀತೆ, ಡೊಳ್ಳು ಕುಣಿತ, ಗೀಗೀ ಪದ, ಯುವತಿಯರಿಗೆ ಗೀಗೀ ಪದ ಸ್ಪರ್ಧೆ ನಡೆಯಿತು. ಕೊನೆಯದಾಗಿ ಯುವಕರಿಗೆ ದೊಡ್ಡಾಟ, ರಾಗಿ ಬೀಸುವ ಪದ ಜರಗಿತು.

ಗುರುವಾರ ಬೆಳಗ್ಗಿನ ಉಪಾಹಾರ, ಮಧ್ಯಾ ಹ್ನದ ಊಟಕ್ಕೆ 2 ಸಾವಿರ ಮಂದಿ ಇದ್ದರು. ರಾತ್ರಿ ಸಾರ್ವಜ ನಿಕರು ಸಹಿತ
4 ಸಾವಿರ ಮಂದಿ ಊಟ ಮಾಡಿದರು. ಶುಕ್ರವಾರ ಸ್ಪರ್ಧಿಗಳ ಜತೆ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳುವ
ನಿರೀಕ್ಷೆ ಇದೆ. 

ಉತ್ತಮ ಆತಿಥ್ಯ
ಊಟ, ಫಲಾಹಾರದ ವ್ಯವಸ್ಥೆ ತುಂಬಾ ಚೆನ್ನಾಗಿದೆ. ಉಪ್ಪಿನಕಾಯಿ, ಗಸಿ, ಪಲ್ಯ ಅನ್ನ, ಸಾರಿನ ಜತೆಗೆ ಮಜ್ಜಿಗೆ, ಪಾಯಸವೂ ಇದೆ. ಇಷ್ಟು ದೊಡ್ಡ ಸಂಖ್ಯೆಯ ಜನರಿಗೆ ಉತ್ತಮ ಆತಿಥ್ಯ ನೀಡುವುದು ಸಣ್ಣ ವಿಷಯವಲ್ಲ.
– ಸ್ಮಿತಾಶ್ರೀ,
ಶಿಕ್ಷಕಿ, ಸಂಜಯನಗರ
ಹಿ.ಪ್ರಾ. ಶಾಲೆ

Advertisement
Advertisement

Udayavani is now on Telegram. Click here to join our channel and stay updated with the latest news.

Next