Advertisement
ಮದ್ಯದ ಅಮಲಿನಲ್ಲಿ ಗ್ರಾಮಕ್ಕೆ ಬಂದ ಯುವಕ ತಾಳಿಕೋಟೆ-ಮುದ್ದೇಬಿಹಾಳ ಮುಖ್ಯ ರಸ್ತೆಯಲ್ಲಿ ತಾನು ತಂದ ಬೈಕ್‌ನ್ನು ನಿಲ್ಲಿಸಿ ಪಕ್ಕದಲ್ಲಿದ್ದ ಮನೆಯೊಂದರಲ್ಲಿ ಮಹಿಳೆಯೊಬ್ಬಳಿಗೆ ಕೈ ಮಾಡಿ ತನ್ನಲ್ಲಿಗೆ ಬಾ ಎಂಬ ರೀತಿಯಲ್ಲಿ ಸನ್ನೆ ಮಾಡಿದ್ದಾನೆ. ಅಲ್ಲದೇ ಬೈಕಿನಿಂದ ಶಬ್ದವನ್ನೂ ಮಾಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಒಗ್ಗೂಡಿ ಯುವಕನಿಗೆ ಥಳಿಸಿದ್ದಾರೆ.
ಇಂತಹ ಪ್ರಕರಣಗಳು ಹೆಚ್ಚಾಗುತ್ತವೆ. ಆದ್ದರಿಂದ ಯುವಕನ ಮನೆಯವರನ್ನು ಕರೆಸಿ ಅವರಿಗೆ ಇವನು ಮಾಡಿದ ತಪ್ಪನ್ನು ತಿಳಿಸಿರಿ. ಇದರಿಂದ ಯುವಕನಿಗೂ ಪಶ್ಚಾತ್ತಾಪವಾಗುವುದು ಹಾಗೂ ಮನೆಯವರಿಗೂ ಇವನ ಘನತೆ ತಿಳಿಯುವುದು ಎಂದು ಹೇಳಿದ ನಂತರ ಗ್ರಾಮಸ್ಥರು ಯುವಕನನ್ನು ಪೊಲೀಸರಿಗೆ ಒಪ್ಪಿಸುವ ನಿರ್ಧಾರ ಕೈಬಿಟ್ಟು ಯುವಕನ ಬೈಕ್ ಕಸಿದುಕೊಂಡು ನಿಮ್ಮ ಮನೆಯವರನ್ನು ಕರೆದುಕೊಂಡು ಬಂದು ಬೈಕ್ ತೆಗೆದುಕೊಂಡು ಹೋಗು ಎಂದು ಕಳುಹಿಸಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.