Advertisement

Sirsi: ಹಕ್ಕು ಪ್ರಾಪ್ತವಾಗುವವರೆಗೂ, ಹೋರಾಟದ ಘರ್ಜನೆ ನಿಲ್ಲಿಸದಿರಿ; ಕಾಗೋಡ ತಿಮ್ಮಪ್ಪ

02:58 PM Sep 12, 2024 | Team Udayavani |

ಶಿರಸಿ: ಹೋರಾಟವಿಲ್ಲದೇ, ನ್ಯಾಯವಿಲ್ಲ. ದೇಶದ ಎಲ್ಲಾ ಭೂಮಿ ಹಕ್ಕಿನ ಫಲಶೃತಿಯಲ್ಲಿ ಹೋರಾಟದ ಇತಿಹಾಸವಿದೆ. ಅದರಂತೆ, ಅರಣ್ಯ ಭೂಮಿ ಹಕ್ಕು ಪ್ರಾಪ್ತವಾಗುವವರೆಗೂ, ಹೋರಾಟದ ಘರ್ಜನೆ ನಿಲ್ಲಿಸಬಾರದು ಎಂದು ಸಾಮಾಜಿಕ ಚಿಂತಕ, ಮಾಜಿ ಸ್ಪೀಕರ್ ಕಾಗೋಡ ತಿಮ್ಮಪ್ಪ ಅರಣ್ಯವಾಸಿಗಳಿಗೆ ಕರೆ ನೀಡಿದರು.

Advertisement

ಅವರು ಗುರುವಾರ ಮಾರಿಕಾಂಬ ಕಲ್ಯಾಣ ಮಂಟಪದಲ್ಲಿ ರವೀಂದ್ರ ನಾಯ್ಕ ನೇತೃತ್ವದಲ್ಲಿ ಜರುಗಿದ ಅರಣ್ಯ ಭೂಮಿ ಹಕ್ಕಿನ 33 ವರ್ಷದ ಹೋರಾಟದ ಅಂಗವಾಗಿ ಏರ್ಪಡಿಸಿದ ‘ಅರಣ್ಯ ವಾಸಿಗಳ ಚಿಂತನ’ ಕಾರ‍್ಯಕ್ರಮ ಉದ್ಗಾಟಿಸಿ ಮಾತನಾಡುತ್ತಿದ್ದರು.
ಮಲಗಿರುವ ಸರ್ಕಾರವನ್ನು ಎದ್ದೇಳಿಸಬೇಕು. ಭೂಮಿ ಮಾನವನ ಸಂವಿಧಾನ ಬದ್ಧ ಹಕ್ಕು. ಕಾನೂನು ಬಂದರೂ ಮಂಜೂರಿಯಲ್ಲಿ ವಿಫಲರಾಗಿದ್ದೇವೆ ಎಂದರು‌. ಜನಪ್ರತಿನಿಧಿಗಳ ನಿರಾಸಕ್ತಿ ಇದಕ್ಕೆ ಕಾರಣವಾಗಿದೆ. ಹೋರಾಟದೊಂದಿಗೆ ಕಾನೂನು ಜಾಗೃತವನ್ನು ಮೂಡಿಸಿ ಎಂದು ಹೇಳಿದರು.

ಪ್ರಸ್ತಾವಿಕ ಮಾತನಾಡಿದ ಪ್ರಧಾನ ಸಂಚಾಲಕ ಜೆ.ಎಮ್.ಶೆಟ್ಟಿ, ಮುಂದಿನ ದಿನಗಳಲ್ಲಿ ಭೂಮಿ ಹಕ್ಕಿಗಾಗಿ ಕಾನೂನು ಹೋರಾಟ ತೀವ್ರಗೊಳಿಸಲಾಗುವುದು ಎಂದರು.

ಹೋರಾಟಗಾರ ಏ.ರವೀಂದ್ರ ನಾಯ್ಕ, ರಾಜ್ಯ ಸಂಚಾಲಕಿ ರಂಜಿತಾ ರವೀಂದ್ರ ಉಪಸ್ಥಿತರಿದ್ದರು. ಶಂಕರ ಕೋಡಿಯ, ಪಾಡುರಂಗ ನಾಯ್ಕ ಬೆಳೆಕೆ, ಸದಾನಂದ ತಿಗಡಿ, ರಮಾನಂದ ನಾಯ್ಕ, ಮಾಭಲೇಶ್ವರ್ ನಾಯ್ಕ ಬೇಡ್ಕಣಿ, ಆನಂದ ನಾಯ್ಕ, ರಾಘುವೇಂದ್ರ ಕವಂಚೂರು, ಮುಂತಾದವರು ಮಾತನಾಡಿದ್ದರು. ವೇದಿಕೆಯ ಮೇಲೆ ರಾಜು ನರೇಬೈಲ್, ದೇವರಾಜ ಗೊಂಡ ಭಟ್ಕಳ, ಇಬ್ರಾಹಿಂ ಗೌಡಳ್ಳಿ, ಭೀಮಶಿ ವಾಲ್ಮಿಕಿ, ನೇಹರು ನಾಯ್ಕ, ಎಮ್ ಆರ್ ನಾಯ್ಕ, ಮಹೇಂದ್ರ ನಾಯ್ಕ ಕತಗಾಲ, ಯಾಕೂಬ ಬೆಟ್ಕುಳಿ ಉಪಸ್ಥಿತರಿದ್ದರು.

ಸೀಟ್ ಕೇಳಿದರೆ, ದುಡ್ಡಿಲ್ಲ ಅಂದರು!
ಹಿಂದಿನ ಚುನಾವಣೆ ಸಂದರ್ಭದಲ್ಲಿ ನಿಮ್ಮ ಒತ್ತಾಯಕ್ಕೆ ಸ್ಪಂದಿಸಿ ನನ್ನ ಸಾಮರ್ಥ್ಯದ ಮೇಲೆ ಚುನಾವಣೆಯಲ್ಲಿ ಟೀಕೆಟ್ ಕೇಳಿದೆ. ಆದರೆ, ರವೀಂದ್ರ ನಾಯ್ಕ ಹತ್ತಿರ ದುಡ್ಡು ಇಲ್ಲ ಎಂದರು. ಹೌದು, ನನ್ನ ಹತ್ತಿರ ಚುನಾವಣೆ ಖರ್ಚು ಮಾಡುವಷ್ಟು ದುಡ್ಡು ಇಲ್ಲದಿರಬಹುದು. ಆದರೆ, ನೀವಿದ್ದೀರಿ. ದುಡ್ಡು ಇಲ್ಲವೆಂದು ಅಪಾದನೆ ಮಾಡಿದವರಿಗೆ, ಮುಂದಿನ ದಿನಗಳಲ್ಲಿ ಸೂಕ್ತ ಸಮಯ, ಸೂಕ್ತ ವೇದಿಕೆಯಲ್ಲಿ ಉತ್ತರಿಸುವೆ. -ರವೀಂದ್ರ ನಾಯ್ಕ ಹೋರಾಟಗಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next