Advertisement
ನೀರ್ಚಾಲು: ಯಕ್ಷಗಾನ ಗಂಡುಮೆಟ್ಟಿದ ಕಲೆ. ಎಲ್ಲ ಕಲೆಗಳಿಗಿಂತಲೂ ಭಿನ್ನ. ಈಗಿನ ಕಾಲಘಟ್ಟದಲ್ಲಿ ಯಕ್ಷಗಾನ ಕಲೆ ಯುವ ಜನತೆಯನ್ನು ಆಕರ್ಷಿಸುವುದಲ್ಲದೆ ವೈವಿಧ್ಯದ ಮೆರುಗನ್ನು ಚೆಲ್ಲುತ್ತಿದೆ. ಯಕ್ಷಗಾನ ಕಲೆ ಕೇವಲ ಮನೋರಂಜನೆಗಷ್ಟೇ ಸೀಮಿತವಾದುದಲ್ಲ. ಸಾಮಾಜಿಕ ಕಳಕಳಿಯನ್ನೂ ತೋರುತ್ತದೆ ಎನ್ನುವುದಕ್ಕೆ ಪ್ರಕಾಶ್ ನಾಯಕ್ ನಿರ್ಚಾಲು ಅವರ ಸಂಯೋಜಕತ್ವದಲ್ಲಿ ಪ್ರಸಿದ್ಧ ಯಕ್ಷಗಾನ ಮೇಳಗಳಲ್ಲೊಂದಾದ ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಮಂಡಳಿ 2ನೇ ಮೇಳದ ಕಲಾವಿದರಿಂದ ಎ. 25ರಂದು ನೀರ್ಚಾಲು ಶಾಲಾ ವಠಾರದಲ್ಲಿ ನಡೆಯುವ ಯಕ್ಷಗಾನ ಪ್ರದರ್ಶನವೊಂದು ನಿದರ್ಶನ.
ಕೂಲಿ ಕೆಲಸ ಮಾಡುತ್ತಿದ್ದ ನಾರಾಯಣ ನಾಯಕ್ ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಕೆಲಸ ನಿರ್ವಹಿಸಲು ಸಾಧ್ಯವಾಗದ ಸ್ಥಿತಿಯುಂಟಾಗಿದೆ. ನಾರಾಯಣ ನಾಯಕ್ ಅವರ ಪತ್ನಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದು ಅದರಿಂದ ಲಭಿಸುವ ನಾಮ ಮಾತ್ರ ಮೊತ್ತದಿಂದ ಜೀವನ ಸಾಗಿಸಬೇಕಾದ ದುಸ್ಥಿತಿ ಬಂದೊದಗಿದೆ. 20 ವರ್ಷಗಳ ಹಿಂದೆ ಸರಕಾರದಿಂದ ಲಭಿಸಿದ 20 ಸೆಂಟ್ ಸ್ಥಳ ದಲ್ಲಿ ಈ ಕುಟುಂಬ ವಾಸಿಸುತ್ತಿದೆ. ಅಂದು ಅಲ್ಲಿ ಹುಲ್ಲು ಹಾಸಿದ ಸಣ್ಣ ಗುಡಿಸಲೊಂದನ್ನು ನಿರ್ಮಿಸಿ ವಾಸವಾಗಿದ್ದರು. ಆರ್ಥಿಕ ಸಂದಿಗ್ಧತೆ ಯಲ್ಲಿ ಗುಡಿಸಲನ್ನು ಉತ್ತಮಗೊಳಿಸಲು ಸಾಧ್ಯವಾಗಲಿಲ್ಲ.
Related Articles
Advertisement
ಯಕ್ಷಗಾನ ಕಲೆ – ಕಲಾವಿದರ ಸಮಾಜ ಸೇವೆಯ ಮೂಲಕ ಜನಪ್ರತಿನಿಧಿಗಳು ಕಲಿಯುವುದು ತುಂಬಾ ಇದೆ. ಏನೇ ಆಗಲಿ ಯಕ್ಷಗಾನ ಕಲೆಯ ಮೂಲಕ ಇಂತಹ ಸಾಮಾಜಿಕ ಕಳಕಳಿಯ ಕಾರ್ಯ ಯಶಸ್ವಿಯಾಗಲಿ. ನಾರಾಯಣ ನಾಯಕರ ಕುಟುಂಬದ ವಸತಿ ನಿರ್ಮಾಣ ಕಾರ್ಯ ನಿಶ್ಚಿಂತೆಯಿಂದ ನೆರವೇರಲೆಂದು ಶುಭಹಾರೈಸೋಣ.
ಹಿಡಿಂಬಾ ವಿವಾಹ, ಕೀಚಕ ವಧೆಶ್ರೀ ಗೋಪಾಲಕೃಷ್ಣ ಕೃಪಾಪೋಶಿತ ಯಕ್ಷಗಾನ ಮಂಡಳಿ ಯವರಿಂದ ನಾರಾಯಣ ನಾಯಕ್-ಪ್ರೇಮಾ ದಂಪತಿಗೆ ಸೂರು ನಿರ್ಮಿಸಲು ಎ. 25ರಂದು ಸಂಜೆ 6.30ರಿಂದ ಹಿಡಿಂಬಾ ವಿವಾಹ, ಕೀಚಕ ವಧೆ, ಉತ್ತರನ ಪೌರುಷಗಳೆಂಬ ಕಥಾನಕಗಳ ಯಕ್ಷಗಾನ ಆಖ್ಯಾನಗಳು ಪ್ರದರ್ಶನಗೊಳ್ಳಲಿವೆ. -ಮಣಿರಾಜ್ ವಾಂತಿಚ್ಚಾಲ್