Advertisement
ಈ ಬಾರಿ ಕರ್ನಾಟಕದ ಸಂಸ್ಕೃತಿಯನ್ನು ಪರಿಚಯಿಸುವ ಸಲುವಾಗಿ ವಿವಿಧ ಸಾಂಪ್ರದಾಯಿಕ ಭರತನಾಟ್ಯ, ಡೋಲು ಕುಣಿತ,ಯಕ್ಷಗಾನ ನೃತ್ಯವನ್ನು ಪ್ರದರ್ಶಿಸಲಾಯಿತು. ಬಸ್ ಹಾಗೂ ಖಾಸಗೀ ಪ್ರವಾಸಿ ಕಾರುಗಳಲ್ಲಿ ತೆರಳಿದ ಪ್ರವಾಸಿಗರು ಸೈಂಟ್ ಎಲೋಶಿಯಸ್ ಚಾಪೆಲ್, ಕದ್ರಿ, ಮಾರ್ಕೆಟ್, ಕುದ್ರೋಳಿ ದೇವಸ್ಥಾನ ಸಹಿತ ಆಕರ್ಷಕ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಿದರು. ಭಾರತೀಯ ಆಯುಷ್ ಆರೋಗ್ಯ ಚಿಕಿತ್ಸೆ, ಯೋಗವನ್ನು ಪ್ರವಾಸಿಗರಿಗೆ ಪರಿಚಯಿಸಲಾಯಿತು.
ದಿ ವರ್ಲ್ಡ್ ಐಷಾರಾಮಿ ಮನೆಗಳುಳ್ಳ ಹಡಗಾಗಿದ್ದು, ಇದರಲ್ಲಿ ಹಲವಾರು ಶ್ರೀಮಂತರು ಮನೆಗಳನ್ನು ಖರೀದಿಸಿ ಪ್ರಯಾಣದ ಸಂದರ್ಭ ಆಗಮಿಸಿ ದೀರ್ಘಾವಧಿ ಉಳಿದುಕೊಳ್ಳುತ್ತಾರೆ. ಇನ್ನು ಹಲವರು ಈ ಹಡಗಿನಲ್ಲಿಯೇ ವಾಸ ಮಾಡುತ್ತಾರೆ. 196 ಮೀ ಉದ್ದ, 7.05 ಮೀಟರ್ ಆಳ, 43,188 ಟನ್ ಭಾರವಿದೆ. ದುಬಾೖಯಿಂದ ಆಗಮಿಸಿದ ಈ ಹಡಗು ಕೊಚ್ಚಿನ್‌ಗೆ ಹೋಗಲಿದೆ.