Advertisement

ಜಗತ್ತೇ ಅಳಿದರೂ ಉಳಿವ ಪ್ರಾಣಿ!

10:19 AM Jul 18, 2017 | Team Udayavani |

ನವದೆಹಲಿ: ಮೈನಸ್‌ 272 ಡಿಗ್ರಿ ಸೆಲ್ಸಿಯಸ್‌ನಷ್ಟು ಅತ್ಯಂತ ಕನಿಷ್ಠ ತಾಪಮಾನವನ್ನು ಎದುರಿಸಿ ಬದುಕಬಲ್ಲ ಸಾಮರ್ಥ್ಯ ಹೊಂದಿರುವ ಟಾರ್ಡಿಗ್ರೇಡ್‌ ಎಂಬ ವಿಶಿಷ್ಟ ಜೀವಿ, ಭೂಮಿ ಮೇಲಿನ ಅತ್ಯಂತ ಗಟ್ಟಿ ಮುಟ್ಟಾದ ಪ್ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಗತ್ತೇ ವಿನಾಶವಾದರೂ ಬದುಕುಳಿ ಯಬಲ್ಲ ಸಾಮರ್ಥ್ಯ ಈ ಪ್ರಾಣಿಗಿದೆ ಎಂದು ಭೌತಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

Advertisement

ಯುರೋಪಿಯನ್‌ ಬಾಹ್ಯಾಕಾಶ ಸಂಸ್ಥೆಯು 2007ರಲ್ಲಿ 3,000 ಪ್ರಾಣಿಗಳನ್ನು ಭೂ ಕಕ್ಷೆಗೆ ಕಳುಹಿಸಿತ್ತು. ಈ ಪೈಕಿ ಟಾರ್ಡಿ ಗ್ರೇಡ್‌ಗಳು ಮಾತ್ರ ಕ್ಯಾಪ್ಸೂಲ್‌ನಿಂದ ಹೊರಗಿದ್ದುಕೋಂಡೇ 12 ದಿನಗಳ ಕಾಲ ಜೀವಂತವಾಗಿದ್ದವು. ಭೌತಶಾಸ್ತ್ರಜ್ಞರ ತಂಡವೊಂದು ಹೇಳುವಂತೆ, “ಟಾರ್ಡಿಗ್ರೇಡ್‌ಗಳು ಸುಮಾರು 520 ದಶಲಕ್ಷ ವರ್ಷಗಳ ಹಿಂದಿನಿಂದಲೂ ಅಸ್ತಿತ್ವದಲ್ಲಿವೆ. ಅಲ್ಲದೆ ಭೂಮಿ ಮೇಲೆ ಕಡೆವರೆಗೂ ಉಳಿಯಬಲ್ಲ ಜೀವ ಸಂಕುಲ ಇದಾಗಿದೆ. ಒಂದೊಮ್ಮೆ ಸೂರ್ಯ ಬೆಳಗುವುದನ್ನು ನಿಲ್ಲಿಸಿದರೆ ಮಾತ್ರ ಈ ಪ್ರಾಣಿಗಳಿಗೆ ವಿನಾಶ ಕಾಲ ಬರಬಹುದು.

ಕುದಿಯುವ ನೀರಿಗೆ ಹಾಕಿದಾಗ ಅಥವಾ ಶೂನ್ಯ ಡಿಗ್ರಿಯಷ್ಟು ಕೊರೆಯುವ ತಾಪಮಾ ನದಲ್ಲಿ ಇರಿಸಿದಾಗಲೂ ಟಾರ್ಡಿಗ್ರೇಡ್‌ಗಳಿಗೆ ಏನೂ ಆಗದು. ಹನಿ ನೀರಿಲ್ಲದಿದ್ದರೂ ಇವು ದಶಕಗಳ ಕಾಲ ಬದುಕಬಲ್ಲವು. 2014ರಲ್ಲಿ ಜಪಾನ್‌ನ ಸಂಶೋಧಕರ ತಂಡವೊಂದು ಸುಮಾರು 30 ವರ್ಷಗಳ ಕಾಲ ಟಾರ್ಡಿಗ್ರೇಡ್‌ಗಳನ್ನು ಶೈತಾಗಾರದಲ್ಲಿರಿಸಿದ್ದರು. ಅಚ್ಚರಿ ಎಂದರೆ ಅವು ಬದುಕುಳಿದಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next