ಜೆನೀವ : ಕೋವಿಡ್ ಸೋಂಕಿನ ಎರಡನೇ ಅಲೆಯಿಂದ ಚೇತರಿಕೆ ಕಾಣಿಸಿಕೊಳ್ಳುತ್ತಿರುವುದರ ನಡುವೆಯೇ, ವಿಶ್ವ ಆರೋಗ್ಯ ಸಂಸ್ಥೆ ಮತ್ತೊಂದು ಆತಂಕಕಾರಿ ವಿಷಯವನ್ನು ಬಹಿರಂಗ ಪಡಿಸಿದೆ.
ಜಗತ್ತಿನಾದ್ಯಂತಕೋವಿಡ್ ಸೋಂಕಿನ ಮೂರನೇ ಅಲೆ ವಿಸ್ತರಿಸುತ್ತಿದೆ ಎಂದು ಎಚ್ಚರಿಸಿದ್ದಲ್ಲದೇ, ಸೋಂಕಿನ “ಲಾಂಡಾ” ಎಂಬ ಹೊಸ ರೂಪಾಂತರಿ ವಿಶ್ವದ 29 ರಾಷ್ಟ್ರಗಳಲ್ಲಿ ಪತ್ತೆಯಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ : ರಾಜೀನಾಮೆ ನೀಡದೆ ಬಿಜೆಪಿಗೆ ಸೇರಿರುವ 10 ಶಾಸಕರನ್ನ ಪಕ್ಷಕ್ಕೆ ಸೇರಿಸಲ್ಲ : ಗುಂಡೂರಾವ್
ಈ ಬಗ್ಗೆ ಜಾಗೃತಿ ಮೂಡಿಸಿದ ವಿಶ್ವ ಆರೋಗ್ಯ ಸಂಸ‍್ಥೆ, ದಕ್ಷಿಣ ಅಮೇರಿಕದ ಪೆರುವಿನಲ್ಲಿ ‘ಲಾಂಡಾ’ರೂಪಾಂತರಿ ಮೊದಲ ಬಾರಿಗೆ ಪತ್ತೆಯಾಗಿದೆ ಎನ್ನಲಾಗಿದ್ದು, ಹರಡುವಿಕೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನಿಗಾ ವಹಿಸಬೇಕೆಂದು ಎಂದು ಹೇಳಿದೆ.
ಈ ಬಗ್ಗೆ ಮಾಹಿತಿ ನೀಡಿದ ತಜ್ಷರು, 2021 ಎಪ್ರಿಲ್ ನಿಂದ ಈವರೆಗೆ ಪೆರುವಿನಲ್ಲಿ ದಾಖಲಾದ ಶೇಕಡಾ 81 ರಷ್ಟು ಕೋವಿಡ್ ಪ್ರಕರಣಗಳು ಈ ಹೊಸ ರೂಪಾಂತರಿಯಿಂದಲೇ ಹರದಿದ್ದು ಎಂದು ಹೇಳಿದ್ದಾರೆ.
ಈ ಹೊಸ ರೂಪಾಂತರಿ ಈ ಹಿಂದೆ ಪತ್ತೆಯಾಗಿದ್ದ ರೂಪಾಂತರಿಗಳಿಗಿಂತ ಹೆಚ್ಚಿನ ಹರಡುವಿಕೆ ಶಕ್ತಿಯನ್ನು ಹೊಂದಿದ್ದು, ಆ್ಯಂಟಿ ಬಾಡಿಗಳೊಂದಿಗಿನ ಪ್ರತಿರೋಧವನ್ನು ಹೆಚ್ಚಿಸುವಂತಹ ಶಕ್ತಿ “ಲಾಂಡಾ”ಕ್ಕಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ : ನೀರಾವರಿ ಇಲಾಖೆ ಅವ್ಯವಹಾರಗಳ ತನಿಖೆಗೆ ಜಂಟಿ ಸದನ ಸಮಿತಿ ರಚನೆಗೆ ಡಿ.ಕೆ.ಶಿವಕುಮಾರ್ ಆಗ್ರಹ