Advertisement

ವಿಶ್ವಕಪ್‌ ಅರ್ಹತಾ ಪಂದ್ಯಾವಳಿ ಅಫ್ಘಾನಿಸ್ಥಾನ ತಂಡ ಪ್ರಕಟ

06:35 AM Feb 06, 2018 | Team Udayavani |

ಕಾಬೂಲ್‌: ಇನ್ನೊಂದು ವಾರದಲ್ಲಿ ಜಿಂಬಾಬ್ವೆಯಲ್ಲಿ ಆರಂಭವಾಗಲಿರುವ ಐಸಿಸಿ ವಿಶ್ವಕಪ್‌ ಕ್ರಿಕೆಟ್‌ ಅರ್ಹತಾ ಪಂದ್ಯಾವಳಿಗಾಗಿ ಅಫ್ಘಾನಿಸ್ಥಾನ ತಂಡವನ್ನು ಪ್ರಕಟಿಸಲಾಗಿದೆ. ಅಸYರ್‌ ಸ್ತಾನಿಕ್‌ಜಾಯ್‌ ತಂಡವನ್ನು ಮುನ್ನಡೆಸಲಿದ್ದಾರೆ.

Advertisement

ಮುಂದಿನ ವರ್ಷ ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ಐಸಿಸಿ ವಿಶ್ವಕಪ್‌ ಪಂದ್ಯಾವಳಿ ನಡೆಯಲಿದೆ. ಆತಿಥೇಯ ಇಂಗ್ಲೆಂಡ್‌ ಮತ್ತು ಐಸಿಸಿ ಏಕದಿನ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ 7 ತಂಡಗಳು ನೇರ ಅರ್ಹತೆ ಪಡೆದಿವೆ. ಉಳಿದೆರಡು ತಂಡಗಳನ್ನು ಅರ್ಹತಾ ಪಂದ್ಯಾವಳಿ ಮೂಲಕ ಆರಿಸಲಾಗುವುದು. ಇಲ್ಲಿ ಫೈನಲ್‌ ಪ್ರವೇಶಿಸಿದ ತಂಡಗಳು ವಿಶ್ವಕಪ್‌ನಲ್ಲಿ ಸೆಣಸಾಡುವ ಅದೃಷ್ಟ ಸಂಪಾದಿಸಲಿವೆ.

ಅಫ್ಘಾನಿಸ್ಥಾನ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸುತ್ತಿರುವ ಏಷ್ಯಾದ ಏಕೈಕ ತಂಡವಾಗಿದ್ದು, ನೆಚ್ಚಿನ ತಂಡವೂ ಆಗಿದೆ. 2 ಬಾರಿಯ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ ಕೂಡ ಈ ಬಾರಿ ಅರ್ಹತಾ ಪಂದ್ಯಾವಳಿಯನ್ನು ಆಡುವ ಮಟ್ಟಕ್ಕೆ ಇಳಿದದ್ದು ಕ್ರಿಕೆಟಿನ ವಿಪರ್ಯಾಸ. ವಿಂಡೀಸ್‌ ಜತೆ ಟೆಸ್ಟ್‌ ಮಾನ್ಯತೆ ಹೊಂದಿರುವ ಇನ್ನೊಂದು ತಂಡವಾದ ಜಿಂಬಾಬ್ವೆ ಕೂಡ ಇಲ್ಲಿ ಸೆಣಸಲಿದೆ.
ಅರ್ಹತಾ ಪಂದ್ಯಾವಳಿಯಲ್ಲಿ ಆಡಲಿರುವ ಉಳಿದ ತಂಡಗಳೆಂದರೆ ಅಯರ್‌ಲ್ಯಾಂಡ್‌, ಹಾಂಕಾಂಗ್‌, ಪಪುವಾ ನ್ಯೂ ಗಿನಿ, ಸ್ಕಾಟ್ಲೆಂಡ್‌ ಮತ್ತು ಹಾಲೆಂಡ್‌.

ಅಫ್ಘಾನಿಸ್ಥಾನ ತಂಡ: ಅಸರ್‌ ಸ್ತಾನಿಕ್‌ಜಾಯ್‌ (ನಾಯಕ), ಮೊಹಮ್ಮದ್‌ ಶೆಹಜಾದ್‌, ಇಶಾನುಲ್ಲ ಜನ್ನತ್‌, ರೆಹಮತ್‌ ಷಾ, ನಜಿಬುಲ್ಲ ಜದ್ರಾನ್‌, ಜಾವೇದ್‌ ಅಹ್ಮದಿ, ಸಮಿಯುಲ್ಲ ಶೇಣ್ವರಿ, ನಾಸಿರ್‌ ಜಮಾಲ್‌, ಮೊಹಮ್ಮದ್‌ ನಬಿ, ಗುಲ್ಬದಿನ್‌ ನೈಬ್‌, ರಶೀದ್‌ ಖಾನ್‌, ಮುಜೀಬ್‌ ಜದ್ರಾನ್‌, ಶರಾಫ‌ುದ್ದೀನ್‌ ಅಶ್ರಫ್, ದೌಲತ್‌ ಜದ್ರಾನ್‌, ಶಪೂರ್‌ ಜದ್ರಾನ್‌.

Advertisement

Udayavani is now on Telegram. Click here to join our channel and stay updated with the latest news.

Next