Advertisement

ಅಧಿಕಾರವಧಿಯಲ್ಲಿನ ಕಾರ್ಯವೇ ಶಾಶ್ವತ

10:27 AM Sep 16, 2017 | |

ಶಹಾಬಾದ: ರಾಜಕೀಯ ಜೀವನದಲ್ಲಿ ಅಧಿಕಾರ ಶಾಶ್ವತವಲ್ಲ. ನಾವು ಮಾಡಿದ ಕಾರ್ಯವೇ ಶಾಶ್ವತ. ಇದಕ್ಕೆ ಕಾರ್ಮಿಕ ಸಚಿವರಾದ ಸಮಯದಲ್ಲಿ ದಿ| ಸಿ.ಗುರುನಾಥ ಮಾಡಿದ ಕೆಲಸವೇ ಇಂದು ಮೂರ್ತಿ ಅನಾವರಣ ಆಗಿರುವುದಕ್ಕೆ ಸಾಕ್ಷಿ ಎಂದು ಮಾಜಿ ಸಚಿವ ರೇವುನಾಯಕ ಬೆಳಮಗಿ ಹೇಳಿದರು.

Advertisement

ಶುಕ್ರವಾರ ನಗರದ ಮಡ್ಡಿ ಬಡಾವಣೆ ಅಂಬೇಡ್ಕರ್‌ ಭವನದಲ್ಲಿ ಮಾಜಿ ಕಾರ್ಮಿಕ ಸಚಿವ ದಿ| ಸಿ.ಗುರುನಾಥ ಅವರ ಮೂರ್ತಿ
ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ಸಮಸ್ಯೆಗಳನ್ನು ಹೊತ್ತು ಬಂದ ಕಾರ್ಮಿಕರಿಗೆ, ನೊಂದ ಜನರಿಗೆ ನ್ಯಾಯ ಒದಗಿಸುವ ನಾಯಕರಾಗಿದ್ದರು ಗುರುನಾಥ.

ಯಾವತ್ತಿಗೂ ಸುಳ್ಳು ಹೇಳಿದವರಲ್ಲ. ಕಾರ್ಮಿಕರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ದಿಟ್ಟವಾಗಿ ಮಾತನಾಡುವ ಎದೆಗಾರಿಕೆ ಅವರಲ್ಲಿತ್ತು. ಇಂದು ಮೂರ್ತಿ ಅನಾವರಣವಗಿದೆ ಎಂದರೆ ಅವರು ಮಾಡಿದ ಸಮಾಜಪರವಾದ ಕೆಲಸವೇ ಕಾರಣ ಎಂದರು.

ಮುಗುಳನಾಗಾವಿಯ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿ, ಬಡತನ ಬಂದಾಗ ಧ್ಯಾನ ಮಾಡಬೇಕು. ಸಿರಿತನ ಬಂದಾಗ ದಾನ ಮಾಡಬೇಕು. ಅಧಿಕಾರ ಬಂದಾಗ ಸೇವೆ ಮಾಡಬೇಕು. ಈ ನಿಟ್ಟಿನಲ್ಲಿ ಗುರುನಾಥ ತಮ್ಮ ಅಧಿಕಾರದ ಅವಧಿಯಲ್ಲಿ ನೊಂದವರಿಗೆ ನಂದಾ ದೀಪ, ದೀನದಲಿತರ, ದುಃಖೀತರ, ಶೋಷಿತರ ಸೇವೆ ಮಾಡಿದ್ದರು ಎಂದು ನುಡಿದರು.

ಗುರುನಾಥ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಗುಡಿಗುಂಡಾರ ನಿರ್ಮಿಸಲು ಅನೇಕ ಕಡೆಗಳಲ್ಲಿನ ಗ್ರಾಮಸ್ಥರು
ಮನವಿ ಮಾಡಿದ್ದಾಗ ಮುಲಾಜಿಲ್ಲದೇ ನಿರಾಕರಿಸಿದ್ದರು. ಅದರ ಬದಲು ಶಾಲಾ ಕಟ್ಟಡಗಳನ್ನು ಕಟ್ಟಿಸಿದರು. ಅವರು ವೈಚಾರಿಕತೆ ನೆಲೆಗಟ್ಟಿನ ಮೇಲೆ ತಮ್ಮ ಬದುಕು ಕಟ್ಟಿಕೊಂಡಿದ್ದರು ಎಂದರು.

Advertisement

ವರಜ್ಯೋತಿ ಭಂತೇಜಿ ಮಾತನಾಡಿ, ದುಡಿಮೆಯೇ ಧರ್ಮ ಎಂದು ಗುರುನಾಥ ನಂಬಿದ್ದರು. ಹಂಚಿಕೊಂಡು ತಿನ್ನುವ ಗುಣ ಅವರಲ್ಲಿತ್ತು. ಕಾರ್ಮಿಕ ಸಚಿವರಾದಾಗ ಅಸಂಘಟಿತ ಕಾರ್ಮಿಕರ ಕೂಲಿ ನಿಗದಿ, ಕಾನೂನುಗಳನ್ನು ರಚನೆ ಮಾಡಿ ತೋರಿಸಿದವರಲ್ಲಿ ಪ್ರಥಮರಾಗಿದ್ದರು. ಅವರು ತಮ್ಮ ಜೀವನದ ಕೊನೆ ಗಳಿಗೆಯವರೆಗೂ ಕಾರ್ಮಿಕರ ಹಿತಾಸಕ್ತಿಗಾಗಿ ಬದುಕಿದ್ದರು ಎಂದು ಹೇಳಿದರು.

ತೊನಸನಹಳ್ಳಿ(ಎಸ್‌)ನ ಮಲ್ಲಣಪ್ಪ ಸ್ವಾಮೀಜಿ, ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ, ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ, ಉದ್ಯಮಿ ಲಿಂಗಾರೆಡ್ಡಿ ಬಾಸರೆಡ್ಡಿ ಮಾತನಾಡಿದರು. ಮುಗುಳನಾಗಾವಿ ಜೇಮಸಿಂಗ್‌ ಮಹಾರಾಜರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಚಂದ್ರಿಕಾ ಪರಮೇಶ್ವರ, ಮಾಜಿ ಶಾಸಕ ವಾಲ್ಮೀಕಿ ನಾಯಕ, ಗೌತಮ ವೈಜನಾಥ ಪಾಟೀಲ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಡಾ| ಎಂ.ಎ. ರಶೀದ, ಜೆಡಿಎಸ್‌ ಗ್ರಾಮೀಣ ಕ್ಷೇತ್ರ ಅಧ್ಯಕ್ಷ ನಾಗರಾಜ ಸಿಂಗ್, ಉದ್ಯಮದಾರರಾದ ಅಣವೀರ ಇಂಗಿನಶೆಟ್ಟಿ, ಶಿವಕುಮಾರ ಇಂಗಿನಶೆಟ್ಟಿ, ನಗರಸಭೆ ಅಧ್ಯಕ್ಷೆ ಗೀತಾಸಾಹೇಬಗೌಡ ಬೋಗುಂಡಿ, ಉಪಾಧ್ಯಕ್ಷೆ  ಲಕ್ಷ್ಮೀಬಾಯಿ
ಕುಸಾಳೆ, ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರ ಚವ್ಹಾಣ, ಬಿಜೆಪಿ ಅಧ್ಯಕ್ಷ ಸುಭಾಷ ಜಾಪೂರ, ಜೆಡಿಎಸ್‌ ಅಧ್ಯಕ್ಷ ರಾಜಮಹ್ಮದ್‌ ರಾಜಾ, ಮೂರ್ತಿ ಅನಾವರಣ ಸಮಿತಿ ಗೌರಾವಾಧ್ಯಕ್ಷ ಸುರೇಶ ಮೆಂಗನ್‌, ಅಧ್ಯಕ್ಷ ನಿಂಗಣ್ಣ ಹುಳಗೋಳಕರ್‌ ಹಾಗೂ ಮತ್ತಿತರರು ಇದ್ದರು.

ಸಿ.ಗುರುನಾಥ ಅಭಿಮಾನಿಗಳ ಸಂಘದ ಅಧ್ಯಕ್ಷ ಗಿರೀಶ ಕಂಬಾನೂರ ಅಧ್ಯಕ್ಷತೆ ವಹಿಸಿದ್ದರು. ವಿಶ್ವನಾಥ ಹಡಪದ, ಗಿರಿಮಲ್ಲಪ್ಪ ವಳಸಂಗ ನಿರೂಪಿಸಿದರು, ರಾಜು ಕೋಬಾಳ ಮತ್ತು ಕೀರ್ತಿ ಪ್ರಾರ್ಥಿಸಿದರು, ಸುರೇಶ ಮೆಂಗನ ಪ್ರಾಸ್ತಾವಿಕ ಮಾತನಾಡಿದರು, ಲೋಹಿತ್‌ ಕಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next