Advertisement

ದೇಸಾಯಿ ಮಠ ಶ್ರೀಗಳ ಕಾರ್ಯ ಶ್ಲಾಘನೀಯ 

03:38 PM May 25, 2022 | Team Udayavani |

ಬಂಕಾಪುರ: ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ದೇಸಾಯಿ ಮಠದ ಶ್ರೀ ಮಹಾಂತ ಸ್ವಾಮಿಗಳ ಅಮೃತ ಮಹೋತ್ಸವದ ಅಂಗವಾಗಿ ಶ್ರೀ ಮಠದ ಸ್ವಾಮಿಜೀಗಳು ಮಠದ ಆವರಣದಲಿ ಕ್ಯಾನ್ಸರ್‌, ಪಾರ್ಶ್ವವಾಯು ರೋಗಿಗಳ ಶುಶ್ರೂಷಾ ಕೇಂದ್ರ ಸ್ಥಾಪಿಸುತ್ತಿರುವುದು ಅವರ ಸಮಾಜ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹುಬ್ಬಳ್ಳಿಯ ನಿವೃತ್ತ ಪ್ರಾಚಾರ್ಯ ಕೆ.ಎಸ್‌.ಕೌಜಲಗಿ ಹೇಳಿದರು.

Advertisement

ಪಟ್ಟಣದ ದೇಸಾಯಿ ಮಠದ ಆವರಣದಲ್ಲಿ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ದೇಸಾಯಿ ಮಠದ ಶ್ರೀ ಮಹಾಂತ ಸ್ವಾಮಿಗಳವರ ಅಮೃತ ಮಹೋತ್ಸವದ ಅಂಗವಾಗಿ ವಿವಿಧ ರಂಗಗಳ ಸಾಧಕರಿಗೆ ಸನ್ಮಾನ ಹಾಗೂ 187ನೇ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀಗಳು ವೈಚಾರಿಕ ಮನೋಭಾವನೆ ಹೊಂದಿದವರಾಗಿದ್ದು, ಮೌಡ್ಯ ತೊಲಗಿಸಲು ಶ್ರಮಿಸುತ್ತಿದ್ದಾರೆಂದು ಹೇಳಿದರು.

ಡಾ|ಆರ್‌.ಎಸ್‌.ಅರಳೆಲೆಮಠ ಮಾತನಾಡಿ, ಬಸವ ತತ್ವ ಮೈಗೂಡಸಿಕೊಂಡ ಶ್ರೀಗಳು ಸಮಾಜದ ಏಳ್ಗೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಇಳಿ ವಯಸ್ಸಿನಲ್ಲೂ ಏಳೆಯರಾಗಿ ಅವರ 75ನೇ ಅಮೃತ ಮಹೋತ್ಸವದ ಅಂಗವಾಗಿ ವರ್ಷವಿಡೀ ಸಾಧನೆಗೈದ ವಿದ್ಯಾರ್ಥಿಗಳಿಗೆ ತುಲಾಭಾರ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಧಾರವಾಡ ಮುರಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ದೇಸಾಯಿಮಠದ ಶ್ರೀಗಳು ಎಂ.ಎ.ಪದವೀಧರ ರಾಗಿದ್ದು, ಬಸವಣ್ಣನವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಜಾತೀಯತೆ ಮೇಟ್ಟಿ ಸರ್ವ ಜನಾಂಗದವರ ಒಳಿತಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದ ಶ್ರೀಮಠದ ಪೀಠಾಧಿಪತಿ ಶ್ರೀ ಮಹಾಂತ ಸ್ವಾಮಿಗಳು, ಸಮಾಜ ನಮಗೇನು ನೀಡಿದೆ ಎಂಬುದು ಮುಖ್ಯವಲ್ಲ. ಸಮಾಜಕ್ಕಾಗಿ ನಾವು ಏನು ಮಾಡಿದ್ದೇವೆ ಎಂಬುದು ಮುಖ್ಯವಾಗಿದೆ. ನಾವು ದುಡಿದು ನಮಗಾಗಿ, ನಮ್ಮ ಹೆಂಡತಿ ಮಕ್ಕಳಿಗಾಗಿ ಖರ್ಚು ಮಾಡಿದರೆ ಸಾಲದು. ಅದರ ಜೊತೆಗೆ ನಾವು ಉಳಿಸಿದ ಹಣದಲ್ಲಿ ಸ್ವಲ್ಪ ಹಣವನ್ನು ಸಮಾಜ ಸೇವೆಗೆ ಮೀಸಲಿರಿಸಿದಾಗ ಮಾತ್ರ ಮಾನವ ಜನ್ಮ ಸಾರ್ಥಕತೆ ಹೊಂದಲಿದೆ. ನಮ್ಮ 75ನೇ ಅಮೃತ ಮಹೋತ್ಸವದ ಅಂಗವಾಗಿ ವರ್ಷವಿಡೀ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಐದು ಜನ ಕ್ಯಾನ್ಸರ್‌ ಪೀಡಿತರಿಗೆ ನಮ್ಮ ಮಠದಲ್ಲಿ ಶುಶ್ರೂಷೆ ನೀಡುವುದರ ಜೊತೆಗೆ, ವಿದ್ಯಾರ್ಥಿಗಳ ತುಲಾಭಾರ, ಗರ್ಭಿಣಿಯರಿಗೆ ಸಹಾಯ ಹಸ್ತ ಸೇರಿದಂತೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

Advertisement

ಕಂಪ್ಲಿ ಶ್ರೀ ಅಭಿನವ ಸ್ವಾಮೀಜಿ ಮಾತನಾಡಿದರು. ಸಭೆಯಲ್ಲಿ ನಿವೃತ್ತ ಶಿಕ್ಷಕರು, ವಿವಿಧ ಕ್ಷೇತ್ರಗಳ ಸಾಧಕರು, ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ರಾಚೋಟೇಶ್ವರ ದೇಸಾಯಿಮಠ, ಬಸವಂತರಾವ್‌ ದೇಸಾಯಿ, ಮೋಹನ ಮೆಣಸಿನಕಾಯಿ, ಅನೀಲಕುಮಾರ ದೇಸಾಯಿ, ಗಿರಿರಾಜ ದೇಸಾಯಿ, ಶೋಭಾ ಹಾವಣಗಿ, ಸತೀಶ ಆಲದಕಟ್ಟಿ, ಡಿ.ಎನ್‌.ಕುಡಲ, ನೀಲಪ್ಪ ಕುರಿ, ಆನಂದ ಮತ್ತಿಗಟ್ಟಿ, ಸಿ.ಆರ್‌.ದೇಸಾಯಿ ಇತರರಿದ್ದರು. ಗಂಗೂಬಾಯಿ ದೇಸಾಯಿ, ಬಿ.ಎಸ್‌.ಗಿಡ್ಡಣ್ಣವರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next