Advertisement

Women’s ವಿಶ್ವಕಪ್‌ ಫುಟ್‌ಬಾಲ್‌ ಆತಿಥ್ಯ ಬ್ರಝಿಲ್‌ಗೆ ಲಭಿಸಿತು

01:18 AM May 18, 2024 | Team Udayavani |

ರಿಯೋ ಡಿ ಜನೈರೊ: ಬ್ರಝಿಲ್‌ 2027ರ ವನಿತಾ ವಿಶ್ವಕಪ್‌ ಫುಟ್‌ಬಾಲ್‌ ಪಂದ್ಯಾವಳಿಯ ಆತಿಥ್ಯ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. ಶುಕ್ರವಾರದ ಫಿಫಾ ಕಾಂಗ್ರೆಸ್‌ ವೋಟಿಂಗ್‌ನಲ್ಲಿ ಬ್ರಝಿಲ್‌ ಅತ್ಯಧಿಕ ಮತ ಸಂಪಾದಿಸಿತು; ಬೆಲ್ಜಿಯಂ, ನೆದರ್ಲೆಂಡ್ಸ್‌, ಜರ್ಮನಿಯ ಜಂಟಿ ಆತಿಥ್ಯದ ವಿರುದ್ಧ ಮೇಲುಗೈ ಸಂಪಾದಿಸಿತು.

Advertisement

ಬ್ರಝಿಲ್‌ 119 ಅಸೋಸಿಯೇಟ್‌ ಸದಸ್ಯರ ಮತ ಪಡೆದರೆ, ಯುರೋಪಿಯನ್‌ ಜಂಟಿ ಆತಿಥ್ಯಕ್ಕೆ 78 ಮತ ಲಭಿಸಿತು. ಅಮೆರಿಕ ಮತ್ತು ಮೆಕ್ಸಿಕೊ ಕಳೆದ ತಿಂಗಳು ಜಂಟಿ ಆತಿಥ್ಯದಿಂದ ಹಿಂದೆ ಸರಿದಿದ್ದವು. ದಕ್ಷಿಣ ಆಫ್ರಿಕಾ ಕಳೆದ ನವೆಂಬರ್‌ನಲ್ಲೇ ದೂರ ಉಳಿಯಬಯಸಿತ್ತು. ಹೀಗಾಗಿ ಬ್ರಝಿಲ್‌ ಮತ್ತು ಯುರೋಪಿಯನ್‌ ಜಂಟಿ ದೇಶಗಳಷ್ಟೇ ಬಿಡ್ಡಿಂಗ್‌ ಕಣದಲ್ಲಿದ್ದವು.

ಫುಟ್‌ಬಾಲ್‌ ಫಿಕ್ಸಿಂಗ್‌: ಇಬ್ಬರು ಸೆರೆ
ಸಿಡ್ನಿ : ಆಸ್ಟ್ರೇಲಿಯದಲ್ಲಿ ನಡೆದ ಎ-ಲೀಗ್‌ ಫುಟ್‌ಬಾಲ್‌ ಪಂದ್ಯವೊಂದರಲ್ಲಿ ಮ್ಯಾಚ್‌ ಫಿಕ್ಸಿಂಗ್‌ ನಡೆಸಿದ ಆರೋಪದಡಿ ಯಲ್ಲಿ ಮೆಕಾರ್ಥರ್‌ ಎಫ್ಸಿ ನಾಯಕ ಉಲಿಸೆಸ್‌ ಡಾವಿಲ್ಲ, ಸಹ ಆಟಗಾರರಾದ ಕೀರಿನ್‌ ಬೇಕಸ್‌, ಕ್ಲೇಟನ್‌ ಲೂಯಿಸ್‌ರನ್ನು ಪೊಲೀಸರು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next