Advertisement

ರಸ್ತೆ  ಬದಿ ಮಹಿಳಾ ವ್ಯಾಪಾರಿಗಳಿಗೆ “ಸಮೃದ್ಧಿ’ಯೋಜನೆ

03:45 AM Jan 15, 2017 | Harsha Rao |

ಮಂಡ್ಯ: ನಗರ ಮತ್ತು ಗ್ರಾಮೀಣ ಪ್ರದೇಶದ ರಸ್ತೆ ಬದಿಯ ಮಹಿಳಾ ವ್ಯಾಪಾರಿಗಳ ಆರ್ಥಿಕ ಸಬಲೀಕರಣ ಮತ್ತು ನಿರುದ್ಯೋಗ ಸಮಸ್ಯೆ ನಿವಾರಿಸುವ ಉದ್ದೇಶದಿಂದ “ಸಮೃದ್ಧಿ’ ಪುನರ್ವಸತಿ ಯೋಜನೆಯನ್ನು ರಾಜ್ಯಸರ್ಕಾರ ಜಾರಿಗೊಳಿಸಿದೆ. ಇದರಡಿ ಬೀದಿ ಬದಿ ಮಹಿಳಾ ವ್ಯಾಪಾರಿಗಳಿಗೆ 10,000 ರೂ. ಪ್ರೋತ್ಸಾಹಧನ ಲಭಿಸಲಿದೆ.

Advertisement

ಮಹಿಳಾ ವ್ಯಾಪಾರಿಗಳು ಹಚ್ಚಿನ ಬಡ್ಡಿಗೆ ಸಾಲ ಪಡೆಯುವುದನ್ನು ತಡೆಗಟ್ಟಿ ಶೋಷಣೆಯಿಂದ ಮುಕ್ತಿಗೊಳಿಸುವುದು. ಮಹಿಳೆಯರ ನಿರುದ್ಯೋಗ ಸಮಸ್ಯೆಯನ್ನು ನಿವಾರಣೆ ಮಾಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಆಯಾ
ಕ್ಷೇತ್ರದ ವಿಧಾನಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ಫ‌ಲಾನುಭವಿಗಳ ಆಯ್ಕೆ ಸಮಿತಿ ಇದ್ದು, ಆ ಸಮಿತಿ ಫ‌ಲಾನುಭವಿಗಳನ್ನು ಆಯ್ಕೆ ಮಾಡಲಿದೆ.

ಫ‌ಲಾನುಭವಿಗಳ ಅರ್ಹತೆ: ರಸ್ತೆ ಬದಿಯ ಮಹಿಳಾ ವ್ಯಾಪಾರಿಗಳು 18ರಿಂದ 60 ವರ್ಷ ವಯೋಮಿತಿಯಲ್ಲಿರಬೇಕು. ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಪೌರಾಡಳಿತ ಇಲಾಖೆಯಿಂದ ಬೀದಿಬದಿ ವ್ಯಾಪಾರಿ ಎಂದು ನೋಂದಣಿ ಮಾಡಿಸಿರುವ ಗುರುತಿನ ಚೀಟಿ, ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿರುವವರು ಪಿಡಿಒಯಿಂದ ಬೀದಿಬದಿ ವ್ಯಾಪಾರಿ ಎಂದು ದೃಢೀಕರಿಸಿದ ದಾಖಲೆ ಪಡೆದಿರಬೇಕು. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ
ಕಡ್ಡಾಯವಾಗಿ ಖಾತೆ ಹೊಂದಿರಬೇಕು.

ಬ್ಯಾಂಕ್‌ ಖಾತೆಯ ಪುಸ್ತಕದ ನಕಲು ಪ್ರತಿ, ಬ್ಯಾಂಕಿನ ಹೆಸರು, ಶಾಖೆಯ ಹೆಸರು. ಅದರ ಐಎಫ್ಎಸ್‌ ಕೋಡ್‌, ಅರ್ಜಿದಾರಳ ವಯಸ್ಸನ್ನು ದೃಢೀಕರಿಸುವ ದಾಖಲೆ, ಕುಟುಂಬದ ಬಿಪಿಎಲ್‌ ಕಾರ್ಡ್‌ ನಕಲು, ಆಧಾರ್‌ ಕಾರ್ಡ್‌ ನಕಲು,
ಬೀದಿಬದಿ ವ್ಯಾಪಾರಿ ಎಂದು ದೃಢೀಕರಿಸಿ ನೀಡಿರುವ ಪತ್ರ, ಫ‌ಲಾನುಭವಿ ಒಳಗೊಂಡಂತೆ ಬೀದಿಬದಿ ವ್ಯಾಪಾರ ಮಾಡುತ್ತಿರುವ ಚಿತ್ರ ಇವೆಲ್ಲಾ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ನಿಖರತೆಯಿಲ್ಲ: ಇದುವರೆಗೆ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ, ಪರ್ಯಾಯ ಸ್ಥಳ ವ್ಯವಸ್ಥೆ ಕಲ್ಪಿಸುವ ಹಲವು ಪ್ರಕ್ರಿಯೆಗಳು ನಡೆದಾಗ ಗೊಂದಲಗಳು ಉಂಟಾಗಿವೆ. ಈ ಸಂದರ್ಭದಲ್ಲಿ ಸ್ಥಳೀಯ ಆಡಳಿತವನ್ನು ಬಲವಾಗಿ
ಕಾಡಿದ ಪ್ರಶ್ನೆ ಎಂದರೆ ಯಾರನ್ನು ಬೀದಿ ಬದಿ ವ್ಯಾಪಾರಿಗಳೆಂದು ಗುರುತಿಸುವುದು? ಹಲವರು ಬಹುಕಾಲದಿಂದ ಬೀದಿಬದಿಯ ವ್ಯಾಪಾರವನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಇನ್ನು ಕೆಲವು ತಮಗೆ ಮಂಜೂರಾಗಿರುವ ಜಾಗವನ್ನು ಬೇರೆಯವರಿಗೆ ಬಾಡಿಗೆ ಕೊಟ್ಟು ಬೀದಿಬದಿ ವ್ಯಾಪಾರಿಗಳ ಗುರುತಿನ ಚೀಟಿ ಪಡೆದಿದ್ದಾರೆ. ಮತ್ತೆ ಕೆಲವು ಹೊರಗಿನ ವ್ಯಾಪಾರಿಗಳು ಸಾಂದರ್ಭಿಕವಾಗಿ ಬೀದಿ ಬದಿಯಲ್ಲಿ ವ್ಯಾಪಾರ ನಡೆಸಿ ಹೋಗುತ್ತಿದ್ದಾರೆ.

Advertisement

ಇವರ ಜೊತೆಗೆ ಒಂದೇ ಕುಟುಂಬದ ನಾಲ್ಕೈದು ಮಂದಿ ವ್ಯಾಪಾರಿಗಳು ಎಂಬ ಗುರುತಿನ ಚೀಟಿ ಪಡೆದುಕೊಂಡಿದ್ದಾರೆ ಎಂಬ ಆರೋಪಗಳಿವೆ. 4 ಬಗೆಯ ವ್ಯಾಪಾರಿಗಳಲ್ಲಿ ಯಾರನ್ನು ಅಧಿಕೃತ ರಸ್ತೆ ಬದಿಯ ವ್ಯಾಪಾರಿಗಳು, ಅವರಿಗೆ ಇರಬೇಕಾದ ಮಾನದಂಡಗಳೇನು ಎಂಬ ವಿಷಯದಲ್ಲಿ ಸ್ಪಷ್ಟತೆ ಇಲ್ಲದಿರುವುದು ವಿವಾದಕ್ಕೆ ಕಾರಣವಾಗಿದೆ.

ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯಿಂದ ಅಂಗೀಕೃತವಾದ ಅಧಿಕೃತ ಗುರುತಿನ ಚೀಟಿ ನೀಡಲು ಹಲವು ಗೊಂದಲಗಳಿಗೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next