Advertisement
ಚೂರಿಪಳ್ಳ ಬದ್ರಿಯ ಮಂಜಿಲ್ ನಿವಾಸಿ ದಿ| ಬೀರಾನ್ ಹಾಜಿ ಅವರ ಮನೆಗೆ ಮುಂಜಾನೆ ಕಳ್ಳ ನುಗ್ಗಿದ್ದು, ಚಿನ್ನಾಭರಣ ಕೊಡಲು ನಿರಾಕರಿಸಿದ ಬೀರಾನ್ ಹಾಜಿ ಅವರ ಪತ್ನಿ ಆಮಿನಾ (52) ಮತ್ತು ಕೊಲ್ಲಿಯಲ್ಲಿರುವ ಪುತ್ರ ಆಫಿಸ್ ಅವರ ಪತ್ನಿ ಮರಿಯಾಂಬಿ (25) ಅವರಿಗೆ ಇರಿ ದ ದ್ದಲ್ಲದೆ, ಈಕೆಯ ಪುತ್ರ ಮೊಹಮ್ಮದ್ ಆದಿ (2)ಯನ್ನೂ ಗಾಯ ಗೊಳಿಸಿದ್ದಾನೆ.
ಬುಧವಾರ ಮುಂಜಾನೆ ಮನೆಯ ಹಿಂಬದಿಯ ಕಿಟಿಕಿಯ ಸರಳು ಮುರಿದು ಕಳ್ಳ ಒಳಗೆ ನುಗ್ಗಿ ಅಲ್ಲಿದ್ದ ವಸ್ತುಗಳನ್ನು ತಡಕಾಡಿದಾಗ ಶಬ್ದ ಕೇಳಿ ಆಮಿನಾ ಎಚ್ಚೆತ್ತರು. ಅವರು ಬೆಳಕು ಹಾಯಿಸಿ ನೋಡಿದಾಗ ಕಳ್ಳ ಅವರ ಕಣ್ಣಿಗೆ ಮೆಣಸಿನಹುಡಿ ಎರಚಲು ಯತ್ನಿಸಿ ಅವರ ಕುತ್ತಿಗೆಗೆ ಚಾಕು ಇರಿಸಿ ಕೊಲೆಗೈಯುವುದಾಗಿ ಬೆದರಿಕೆ ಯೊಡ್ಡಿದನು. ಆಮಿನಾರ ಬೊಬ್ಬೆ ಕೇಳಿ ಮರಿಯಾಂಬಿ ಎದ್ದು ಅಲ್ಲಿಗೆ ಬಂದಿದ್ದು, ಅವರಿಗೂ ಇರಿಯಲು ಯತ್ನಿಸಿದ. ಬಳಿಕ ಕಳ್ಳನ ಕೈಯಿಂದ ತಪ್ಪಿಸಿ ಕೊಂಡ ಮಹಿಳೆಯರು ಕೊಠಡಿ ಯೊಳಗೆ ನುಗ್ಗಿ ಬಾಗಿಲಿನ ಚಿಲಕ ಹಾಕಿದರು. ಮಲಯಾಳ ಮಾತನಾಡಿದ ಕಳ್ಳ
ಮನೆಗೆ ನುಗ್ಗಿದ ಕಳ್ಳ ಮಲಯಾಳ ಭಾಷೆಯಲ್ಲಿ ಮಾತನಾಡಿದ್ದಾನೆ. ಮನೆ ಯಲ್ಲಿದ್ದ ಮಹಿಳೆಯರು ಮಕ್ಕಳನ್ನು ಬಿಟ್ಟುಬಿಡುವಂತೆ ವಿನಂತಿಸಿದಾಗ ತನಗೆ ಕೆಲಸವಿಲ್ಲ, ಆದ್ದರಿಂದ ಚಿನ್ನಾ ಭರಣ ನೀಡಬೇಕು’ ಎಂದು ಹೇಳಿದ್ದ ಎಂದು ಗಾಯಗೊಂಡ ಮಹಿಳೆ ತಿಳಿಸಿ ದ್ದಾರೆ. ಈತ ಮುಖವಾಡ ಧರಿಸಿದ್ದು, ಕೈಗವಸುಗಳನ್ನು ಧರಿಸಿದ್ದ ಎಂದು ಮನೆಯವರು ತಿಳಿಸಿದ್ದಾರೆ.
Related Articles
ಲೂಟಿ ನಡೆದ ಮನೆಗೆ ಕಾಸರ ಗೋಡು ಡಿವೈಎಸ್‌ಪಿ ಎಂ.ವಿ. ಸುಕು ಮಾರನ್, ಬದಿಯಡ್ಕ ಎಸ್.ಐ. ಮೆಲ್ವಿನ್ ಜೋಸ್ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಈ ಮನೆಯ ಪೂರ್ತಿ ಮಾಹಿತಿ ತಿಳಿದವನೇ ಲೂಟಿ ನಡೆಸಿದ್ದಾನೆಂದು ಶಂಕಿಸಲಾಗಿದೆ.
Advertisement
ಮಕ್ಕಳನ್ನು ಒತ್ತೆ ಇರಿಸಿಕೊಂಡಕಳ್ಳನ ಕೈಯಿಂದ ಮಹಿಳೆಯರಿಬ್ಬರು ತಪ್ಪಿಸಿಕೊಂಡಾಗ ಆತ ಮತ್ತೂಂದು ಕೊಠಡಿಯತ್ತ ಧಾವಿಸಿದ. ಅಲ್ಲಿ ಮರಿಯಾಂಬಿಯ ಮಕ್ಕಳಾದ ಇಸಾ ಫಾತಿಮ (5), ಮೊಹಮ್ಮದ್ ಆದಿ (2) ನಿದ್ರಿಸುತ್ತಿದ್ದರು. ಇದನ್ನು ಗಮನಿಸಿದ ಕಳ್ಳ ಚಿನ್ನಾ ಭರಣ ನೀಡದಿದ್ದರೆ ಮಕ್ಕಳನ್ನು ಕೊಲೆಗೈಯುವುದಾಗಿ ಬೆದರಿಕೆ ಯೊಡ್ಡಿದನು. ಅಲ್ಲದೆ ಮಗು ಮೊಹಮ್ಮದ್ ಆದಿಗೆ ಇರಿದಿದ್ದು, ಇದರಿಂದ ಮಗುವಿನ ಕೈಗೆ ಗಾಯವಾಗಿದೆ. ಮಕ್ಕಳ ಆಕ್ರಂದನ ಕೇಳಿದ ಮಹಿಳೆಯರು ಕೋಣೆಯಿಂದ ಹೊರಬಂದು ಕಳ್ಳನಿಗೆ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ನೀಡಿದರು.
ಚಿನ್ನಾಭರಣ ಪಡೆದುಕೊಂಡ ಕಳ್ಳ ಒಳಗೆ ನುಗ್ಗಿದ ಕಿಟಿಕಿಯ ಮೂಲಕವೇ ಹೊರಹಾರಿ ಪರಾರಿಯಾದ. ಮಹಿಳೆಯರು ನೆರೆಮನೆ ಯವರಿಗೆ ವಿಷಯ ತಿಳಿಸಿದ್ದು, ಅವರು ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದರು. 10 ಪವನ್ ಚಿನ್ನ ಲೂಟಿ
ಮಹಿಳೆಯರು ಮತ್ತು ಮಗುವನ್ನು ಗಾಯಗೊಳಿಸಿದ ಕಳ್ಳ ಎರಡು ಚಿನ್ನದ ಸರ, ಒಂದು ಬಳೆ, ಎರಡೂವರೆ ಪವನ್‌ನ ಇನ್ನೊಂದು ಆಭರಣ ಕೊಂಡೊಯ್ದಿ ದ್ದಾನೆ. ಹತ್ತು ಪವನ್ ಚಿನ್ನಾಭರಣ ಕಳ್ಳ ಲೂಟಿ ಮಾಡಿದ್ದಾಗಿ ದೂರಲಾಗಿದೆ.