Advertisement

Raichur: ಗೇಟ್ ಹಾರಿ ಕಳವು ಮಾಡಿದ ಮಹಿಳೆ; ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

11:32 AM May 21, 2024 | Team Udayavani |

ರಾಯಚೂರು: ಇಲ್ಲಿನ ಸ್ಟೇಶನ್ ರಸ್ತೆಯ ಉದಯನಗರದ ಮನೆಯೊಂದರಲ್ಲಿ ಮಹಿಳೆಯೊಬ್ಬರು ಗೇಟ್ ಹಾರಿ ವಸ್ತುಗಳನ್ನು ಕಳವು ಮಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Advertisement

ವಾಣಿಜ್ಯೋದ್ಯಮಿ ಸಂಘದ ಜಿಲ್ಲಾಧ್ಯಕ್ಷ ಕಮಲ ಕುಮಾರ್ ಜೈನ್ ಅವರ ಹಳೇ ಮನೆ ಗೇಟ್ ಬೀಗ ಹಾಕಿತ್ತು. ಅಲ್ಲಿ ಕೆಲಸ ಮಾಡುವವರು ಇಂದು ಕೆಲಸಕ್ಕೆ ಬಂದಿರಲಿಲ್ಲ. ಇದನ್ನು ಗಮನಿಸಿದ ಮಹಿಳೆ ಗೇಟ್ ಹಾರಿ ಅಲ್ಲಿದ್ದ ಡ್ರೈನೇಜ್ ಕವರ್, ಸಾಗುವಾನಿ ಕಟ್ಟಿಗೆಗಳನ್ನು ಎತ್ತಿಕೊಂಡು ಹೋಗಿದ್ದಾರೆ. ಆಕೆಗೆ ಹೊರಗಡೆಯಿಂದ ಇನ್ನಿಬ್ಬರು ಮಹಿಳೆಯರು ಈ ಕೃತ್ಯಕ್ಕೆ ಸಹಕಾರ ನೀಡುತ್ತಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ.

ಈ ಹಿಂದೆ ಕೂಡ ಇದೇ ರೀತಿ ಕಳವಾಗಿತ್ತು ಎಂದು ಮನೆ ಮಾಲೀಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next