Advertisement

ಇಟಲಿಯಲ್ಲಿ ಸುಧಾರಣೆಯ ಗಾಳಿ: ಸೋಂಕಿತರ ಸಂಖ್ಯೆ ಇಳಿಮುಖ

09:27 AM Apr 06, 2020 | mahesh |

ಟುರಿನ್‌ (ಇಟಲಿ): ಕೆಟ್ಟ ಮೇಲೆ ಬುದ್ಧಿ ಬಂದಿತು ಎನ್ನುವುದು ಕನ್ನಡದಲ್ಲಿ ಬಳಸುವ ನಾಣ್ಣುಡಿ. ಅದರಂತೆಯೆ ಇಟಲಿಯ ಕಥೆ. ಕೋವಿಡ್ 19 ಕಾಟದಿಂದ ಇಟಲಿ ಬಳಲಿರುವುದು ಹೊಸ ಸುದ್ದಿಯಲ್ಲ. ಆದರೆ ಹೊಸ ಸುದ್ದಿಯೆಂದರೆ, ಒಂದು ವಾರದಿಂದ ಇಟಲಿಯಲ್ಲಿ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆಯಲ್ಲಿ ಇಳಿಕೆ ಕಾಣಲು ಆರಂಭಿಸಿದೆ. ಇದು ವರೆಗೆ ಚೀನಕ್ಕಿಂತ ಹೆಚ್ಚು ಮಂದಿ ಇಟಲಿಯಲ್ಲಿ ಸತ್ತಿರುವುದು ನಿಜ. ಆದರೆ ಸದ್ಯ ಬಿಕ್ಕಟ್ಟನ್ನು ಪರಿಹಾರಿಸುವಲ್ಲಿ ಇಟಲಿ ತಕ್ಕ ಮಟ್ಟಿನ ಯಶಸ್ಸು ಕಾಣುತ್ತಿದ್ದು, ಪ್ರಾಥಮಿಕ ಹಂತದ ಸುಧಾರಣೆ ಕಾಣುತ್ತಿದೆ ಎಂದು ಆಲ್‌ ಜಜಿರಾ ವರದಿ ಮಾಡಿದೆ.

Advertisement

ಫಲಕೊಡುತ್ತಿದೆ ಲಾಕ್‌ಡೌನ್‌
ಇಟಲಿಯಲ್ಲಿ ಸೋಂಕು ಹರಡುವಿಕೆ ತಕ್ಕ ಮಟ್ಟಿಗೆ ನಿಯಂತ್ರಣಗೊಂಡಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಇಳಿಕೆಯಾಗಲಿದೆ ಎಂದು ಅಲ್ಲಿನ ವೈದ್ಯಕೀಯ ಅಧಿಕಾರಿಗಳು ಹೇಳಿದ್ದಾರೆ. ಮಾ.10ರಂದು ಜಾರಿ ಮಾಡಿದ ಲಾಕ್‌ಡೌನ್‌ ನಿಯಮ ಇಂದು ಫಲ ಕೊಡುತ್ತಿದ್ದು, ನಾವು ಮೊದಲೇ ಎಚ್ಚೆತ್ತುಕೊಂಡಿದ್ದರೆ ಮತ್ತಷ್ಟು ಜನ ರನ್ನು ಉಳಿಸಿಕೊಳ್ಳಬಹುದಿತ್ತು ಎಂದು ಅಧಿ ಕಾರಿಗಳು ಪಶ್ಚಾತ್ತಾಪ ಪಡುತ್ತಿದ್ದಾರೆ.

ಗುರುವಾರ ಒಂದೇ ದಿನ 760 ಮಂದಿ ಸತ್ತಿದ್ದು, ಒಟ್ಟಾರೆ ಸಾವಿನ ಪ್ರಮಾಣ 13,915ಕ್ಕೆ ತಲುಪಿತ್ತು. ಕಳೆದ 5 ದಿನಗಳಲ್ಲಿ ದಾಖಲಾದ ಪ್ರಕರಣ ಗಳಿಗೆ ಹೋಲಿಸಿದರೆ ಗುರುವಾರ 4,668 ಜನರಲ್ಲಿ ಸೋಂಕು ಪತ್ತೆಯಾಗಿತ್ತು. ಬುಧವಾರ ದಾಖಲಾದ ಪ್ರಕರಣಗಳ (4,782) ಸಂಖ್ಯೆಗೆ ಹೋಲಿಸಿದ್ದರೆ ಪೀಡಿತರ ಸಂಖ್ಯೆಯಲ್ಲಿ ಇಳಿಕೆ ಯಾಗಿದೆ. ಈ ಮೂಲಕ ಸೋಂಕು ಪೀಡಿತರ ಪ್ರಮಾಣ ಸ್ಥಿರತೆ ಕಾಣುತ್ತಿದೆ ಎಂದು ವರದಿಯಾಗಿದ್ದು, ಶೇ.5.6ರಷ್ಟಿದ ಸೋಂಕು ಹರಡುವಿಕೆಯ ಪ್ರಮಾಣ ಕನಿಷ್ಠ ಶೇ.4ರಷ್ಟಕ್ಕೆ ಇಳಿದೆ.

ತುಸು ಇಳಿಕೆ
ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹೆಲ್ತ್‌ನ ಅಧ್ಯಕ್ಷ ಸಿಲ್ವಿಯೊ ಬ್ರೂಸಾಫೆರೊ ಈ ಕುರಿತು ಅಭಿಪ್ರಾಯವನ್ನು ಹಂಚಿಕೊಂಡಿದ್ದು, ದೇಶದಲ್ಲಿ ಹೇರಿದ ನಿರ್ಬಂಧಗಳು ಉತ್ತಮ ಫಲಕೊಡುತ್ತಿವೆ. ಮಾರ್ಚ್‌ 21 ರ ನಂತರ ಪ್ರಕರಣಗಳಲ್ಲಿ ಇಳಿಕೆ ಯಾಗಿದ್ದು, ಮತ್ತಷ್ಟು ಸಕಾರಾತ್ಮಕ ಬೆಳವಣಿಗೆಗೆ ನಾವು ಸಾಕ್ಷಿಯಾಗಲಿದ್ದೇವೆ ಎಂದಿದ್ದಾರೆ.

ಹೊಸ ಪ್ರಕರಣಗಳಿಲ್ಲ
ಮೂರು ವಾರ ಶ್ಮಶಾನ ಮೌನ ಮನೆ ಮಾಡಿದ ಇಟಲಿ ನಿಧಾನವಾಗಿ ಸಹಜ ಸ್ಥಿತಿಗೆ ಬರಲಿದೆ ಎಂಬ ಆಶಾವಾದ ಸ್ಥಳೀಯರದ್ದು. ಈ ಒಂದು ವಾರದಲ್ಲಿ ಕೆಲವು ಪ್ರದೇಶಗಳಲ್ಲಿ ತೀವ್ರ ನಿಗಾ ಘಟಕದಲ್ಲಿಯೂ ಸೋಂಕು ಪೀಡಿತರ ಸಂಖ್ಯೆ ಕಡಿಮೆಯಾಗಿದೆ. ಹೊಸ ಪ್ರಕರಣಗಳಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next