Advertisement

Halasur: ಹಲಸೂರಿನಲ್ಲಿ ವೈಟ್ ಟಾಪಿಂಗ್‌ ರಸ್ತೆ ದಿಢೀರ್‌ ಕುಸಿತ!

03:52 PM Dec 13, 2023 | Team Udayavani |

ಬೆಂಗಳೂರು: ಬ್ರ್ಯಾಂಡ್‌ ಬೆಂಗಳೂರಿಗೆ ಪಣತೊಟ್ಟಿರುವ ಸರ್ಕಾರ ಇದಕ್ಕಾಗಿಯೇ ಹಲವು ಯೋಜನೆಗಳನ್ನು ರೂಪಿಸಿದೆ. ತಜ್ಞರೊಂದಿಗೆ ಆಗಾಗ ಸಮಾಲೋಚಿಸಿ ಸಲಹೆಗಳನ್ನು ಪಡೆ ಯುತ್ತಲೇ ಇದೆ. ಆದರೆ, ಕಳಪೆ ಕಾಮಗಾರಿಗಳು ಇದಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿವೆ.

Advertisement

ಹಲಸೂರು ಕೆರೆಯ ಸಮೀಪ ಇತ್ತೀಚೆಗಷ್ಟೇ ಪೂರ್ಣಗೊಂಡಿದ್ದ ವೈಟ್‌ ಟಾಪಿಂಗ್‌ ರಸ್ತೆ ದಿಢೀರ್‌ನೇ ಸುಮಾರು 4ರಿಂದ 5 ಅಡಿ ಆಳ ಕುಸಿದು ದೊಡ್ಡ ಪ್ರಮಾಣದ ಹೊಂಡ ಸೃಷ್ಟಿಸಿದೆ. ಸಾರ್ವಜನಿಕರಲ್ಲಿ ಬೆಂಗಳೂರು ರಸ್ತೆಯ ಗುಣಮಟ್ಟದ ಬಗ್ಗೆ ಭಯ ಆರಂಭವಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರ್ಮಾಣ ವಾಗಿರುವ ವೈಟ್‌ ಟಾಪಿಂಗ್‌ ರಸ್ತೆಗಳ ಗುಣಮಟ್ಟದ ಬಗ್ಗೆ ಜನರಲ್ಲಿ ಅನುಮಾನಗಳು ಶುರುವಾಗಿದ್ದು, ಎಲ್ಲಿ ಯಾವಾಗ ಗುಂಡಿಯಾಗುತ್ತದೆಯೋ, ಏನು ಅನಾಹುತ ಕಾದಿದಿಯೋ ಎಂಬ ಆಂತಕದಲ್ಲಿ ಬದುಕು ಕಳೆಯುವಂತಾಗಿದೆ.

ಹಲಸೂರು ಕೆರೆ ಸಮೀಪದ ಡಿ. ಭಾಸ್ಕರನ್‌ ರಸ್ತೆಯಲ್ಲಿ ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ನಾಲ್ಕೈದು ಅಡಿಯಷ್ಟು ಆಳದಲ್ಲಿ ವೈಟ್‌ಟಾಪಿಂಗ್‌ ರಸ್ತೆ ಕುಸಿದು, ದೊಡ್ಡ ಪ್ರಮಾಣದ ಹೊಂಡ ನಿರ್ಮಾಣವಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಸಂಚಾರ ಮಾಡುವ ರಸ್ತೆಯಲ್ಲಿ ಬೃಹತ್‌ ಕಂದಕ ಬಿದ್ದಿದೆ. ಒಂದು ವೇಳೆ ವಾಹನ ಸವಾರರು ವೇಗವಾಗಿ ವಾಹನ ಚಾಲನೆ ಮಾಡಿ ಅಪ್ಪಿತಪ್ಪಿ ಗುಂಡಿಯಲ್ಲಿ ಬಿದ್ದಿದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ರಸ್ತೆ ಮಧ್ಯೆಗುಂಡಿ ಬಿದ್ದಿರುವ ವಿಷಯ ಅರಿತು ಸ್ಥಳಕ್ಕೆ ಆಗಮಿಸಿದ ಹಲಸೂರು ಪೊಲೀಸರು ಗುಂಡಿ ಬಿದ್ದ ಜಾಗದಲ್ಲಿ ಬ್ಯಾರಿಕೇಡ್‌ಅಳವಡಿಕೆ ಜನರಲ್ಲಿ ಗುಂಡಿ ಬಿದ್ದಿರುವ ಬಗ್ಗೆ ಮಾಹಿತಿ ನೀಡಿದರು.

ಒಂದು ವರ್ಷ ಆಗಿಲ್ಲ ಆಗಲೇ ಕುಸಿದು ಬಿದ್ದ ರಸ್ತೆ: ವೈಟ್‌ ಟಾಪಿಂಗ್‌ ರಸ್ತೆ ಕುಸಿತಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂದು ಸ್ಥಳೀಯರು ಮತ್ತು ವಾಹನ ಸವಾರರು ದೂರಿದ್ದಾರೆ. ಈ ರಸ್ತೆ ನಿರ್ಮಾಣವಾಗಿ 1 ವರ್ಷ ಕೂಡ ಪೂರ್ಣಗೊಂಡಿಲ್ಲ. ಆಗಲೇ ಕುಸಿದು ಬಿದ್ದಿದೆ. ಎಲ್ಲೊಂದರಲ್ಲಿ ರಸ್ತೆ ಗುಂಡಿಬಿದ್ದು ಅನಾಹುತ ಸಂಭವಿಸಿದರೆ ಯಾರು ಹೊಣೆ? ಗುಣಮಟ್ಟದ ರಸ್ತೆ ನಿರ್ಮಾಣ ಆಗದೇ ಇರುವುದೇ ಇದಕ್ಕೆಲ್ಲ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಲಸೂರು ರಸ್ತೆಯಷ್ಟೇ ಅಲ್ಲ ಬೆಂಗಳೂರಿನ ಎಲ್ಲ ರಸ್ತೆಗಳ ಕಥೆ ಕೂಡ ಇದೆ ಆಗಿದೆ. ಈ ಬಗ್ಗೆ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

Advertisement

ರಸ್ತೆ ಮಧ್ಯೆ ಪೈವ್‌ ಆಳವಸಿಸಲಾಗಿತ್ತು. ಆದರೆ ಆ ಬಗ್ಗೆ ಗಮನ ನೀಡದೆ ಅವಸರ ಅವಸರದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ವೈಟ್‌ ಟಾಪಿಂಗ್‌ ರಸ್ತೆ ಕುಸಿದಿದೆ ಎಂದು ದೂರಿದರು.

ಜಲಮಂಡಳಿ ಕಡೆಗೆ ಬೊಟು ಮಾಡಿದ ಪಾಲಿಕ್ಟೆ ಹಲಸೂರು ಕೆರೆ ಸಮೀಪ ವೈಟ್‌ ಟಾಪಿಂಗ್‌ ರಸ್ತೆಯಲ್ಲಿ ಹೊಂಡಬಿದ್ದಿರುವುದಕ್ಕೆ ಜಲಮಂಡಳಿ ಕಾರಣವಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಬೊಟ್ಟು ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪಾಲಿಕೆ ಮುಖ್ಯ ಎಂಜಿನಿಯರ್‌ ಪ್ರಹ್ಲಾದ್‌, ಆ ರಸ್ತೆಯಲ್ಲಿ ಜಲಮಂಡಳಿಯ ನೀರಿನ ಕೊಳವೆ ಹಾದು ಹೋಗಿದೆ. ಕೊಳವೆಯಲ್ಲಿ ನೀರಿನ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ಮಣ್ಣಿನ ಪಲ್ಲಟವಾಗಿದ್ದು, ಹೀಗಾಗಿ ವೈಟ್‌ ಟಾಪಿಂಗ್‌ ರಸ್ತೆಯ ಮಧ್ಯೆ ಕಂದಕ್ಕೆ ಬಿದ್ದಿದೆ ಎಂದು ಹೇಳಿದರು.

ಜಲಮಂಡಳಿಯ ನೀರಿನ ಪೈಪ್‌ ಸೋರಿಕೆಯೇ ಇದಕ್ಕೆಲ್ಲ ಕಾರಣವಾಗಿದೆ. ಡಾಂಬರು ರಸ್ತೆಗಳಾಗಲಿ, ಇಲ್ಲವೆ ವೈಟ್‌ ಟಾಪಿಂಗ್‌ ರಸ್ತೆಗಳಾಗಲಿ ರಸ್ತೆ ಮಧ್ಯೆ ನೀರು ಸೋರಿಕೆ ಆದರೆ ಎಲ್ಲ ರಸ್ತೆಗಳು ಹೀಗೆ ಹಾನಿಯಾಗುತ್ತವೆ. ಹಲಸೂರಿನಲ್ಲಿ ಕೂಡ ಇದೆ ಆಗಿದೆ. ಆಳವಾಗಿ ಗುಂಡಿಬಿದ್ದಿರುವ ರಸ್ತೆಯನ್ನು ಪಾಲಿಕೆವತಿಯಿಂದ ಸರಿಪಡಿಸಲಾಗುವುದು ಎಂದು ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next