Advertisement

ಬಿಳಿ ಉಂಡೆಗಳೆಲ್ಲ ವಿಭೂತಿಯಲ್ಲ

12:34 PM Jan 14, 2017 | |

ವಾಡಿ: ಹಣೆಗೆ ಹಚ್ಚಲು ಉಪಯೋಗಿಸುವ ಬೆಳ್ಳಗಿನ ಉಂಡೆಗಳೆಲ್ಲವೂ ವಿಭೂತಿಯಲ್ಲ. ಗೋವಿನ ಸಗಣಿ ಭಸ್ಮದಿಂದ ಸಿದ್ಧಗೊಳ್ಳುವ ವಿಭೂತಿ ಉಂಡೆಗಳಿಗೆ ಮಾತ್ರ ಆತ್ಮದ ರೋಗಗಳನ್ನು ಕಳೆಯಬಲ್ಲ ಶಕ್ತಿಯಿದೆ ಎಂದು ಹೊನ್ನಕಿರಣಗಿಯ ರಾಚೋಟೇಶ್ವರ ಸಂಸ್ಥಾನ ಮಠದ ಶ್ರೀ ಚಂದ್ರಗುಂಡ ಶಿವಾಚಾರ್ಯ ಸ್ವಾಮೀಜಿ ನುಡಿದರು. 

Advertisement

ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಏರ್ಪಡಿಸಲಾಗಿದ್ದ ಧರ್ಮ ಜಾಗೃತಿ ಅಭಿಯಾನ ಸಮಾರಂಭ ಉದ್ಘಾಟಿಸಿ ಶ್ರೀಗಳು ಮಾತನಾಡಿದರು. ಆಕಳು ನಡೆದಾಡುವ ಆಸ್ಪತ್ರೆಯಿದ್ದಂತೆ. ಅದು ಉಸಿರು ಬಿಟ್ಟರೆ ಮನುಷ್ಯನ ನೂರು ರೋಗಗಳು ನಿವಾರಣೆಯಾಗುತ್ತವೆ. ಅಂಗವಿಕಲತೆ ಮತ್ತು ಬುದ್ಧಿಮಾಂದ್ಯ ಮಕ್ಕಳ ಜನನಕ್ಕೆ ಗೋವಿನ ಉತ್ಪನ್ನಗಳ ಸೇವನೆ ಕೊರತೆಯೂ ಕಾರಣವಾಗಿದೆ ಎಂದರು. 

ರಾಸಾಯನಿಕ ದ್ರವ್ಯಗಳ ಮಿಶ್ರಣದ ವಿಭೂತಿಗಳು ಮಾರುಕಟ್ಟೆಯಲ್ಲಿ  ಸಿಗುತ್ತಿವೆ. ಅವುಗಳ ಬಳಕೆಯಿಂದ ಚರ್ಮಕ್ಕೆ ತೊಂದರೆಯಿದೆ. ನೈಜ ವಿಭೂತಿಗಳ ಲಭ್ಯ ವಿರಳ. ಪರಿಣಾಮ ಕಿರಣಗಿಯ ರಾಚೋಟೇಶ್ವರ ಮಠವು ವಿಭೂತಿ ಸಿದ್ಧತೆಗೆ ಮುಂದಾಗಿದೆ. ಅದಕ್ಕಾಗಿ ಜಿಲ್ಲೆಯಾದ್ಯಂತ ಧರ್ಮ ಜಾಗೃತಿ ಅಭಿಯಾನ ನಡೆಸಲಾಗುತ್ತಿದ್ದು, ಭಕ್ತರಿಂದ ಗೋವಿನ ಸಗಣಿ ಸಂಗ್ರಹಿಸಲಾಗುತ್ತಿದೆ ಎಂದರು. 

ಫೆ.1 ರಂದು ಕಿರಣಗಿಯಲ್ಲಿ ನಡೆಯಲಿರುವ ಚಂಡಿಯಾಗದಲ್ಲಿ ಪಾಲ್ಗೊಳ್ಳುವವರು ದವಸ ಧಾನ್ಯದ ಜತೆಗೆ ಮಠಕ್ಕೆ ಗೋವಿನ ಸಗಣಿಯನ್ನು ದಾನವಾಗಿ ನೀಡಬೇಕು ಎಂದು ಹೇಳಿದರು. ಮಲ್ಲಿಕಾರ್ಜುನ ದೇವಸ್ಥಾನ ಸಮಿತಿ ಅಧ್ಯಕ್ಷ  ಶಾಂತಪ್ಪ ಶೆಳ್ಳಗಿ, ವೀರಶೈವ ಸಮಾಜದ ಅಧ್ಯಕ್ಷ ಸಿದ್ದಣ್ಣ ಕಲಶೆಟ್ಟಿ, ಸಮಾಜದ ಮುಖಂಡರಾದ ಕಲ್ಯಾಣರಾವ ಶೆಳ್ಳಗಿ, ಅಣ್ಣಾರಾವ ಪಸಾರೆ, ಶರಣಗೌಡ ಚಾಮನೂರ, 

ಚಂದ್ರಶೇಖರ ಹಾವೇರಿ, ಮಲ್ಲಣ್ಣಗೌಡ ಗೌಡಪ್ಪನೋರ, ಪರಮೇಶ್ವರ ಬಿಲಗುಂದಿ, ಸಂಗಣ್ಣ ಮೇಲಶೆಟ್ಟಿ, ಬಸವರಾಜ ಕೀರಣಗಿ, ಗುರಣ್ಣ ಸೊಡ್ಡೆ, ನಿಂಗಣ್ಣ  ದೊಡ್ಡಮನಿ, ಪರುತಪ್ಪ ಕರದಳ್ಳಿ, ವೀರಣ್ಣ ಯಾರಿ, ಮಲ್ಲಯ್ಯಸ್ವಾಮಿ, ಕಾಶೀನಾಥ ಶೆಟಗಾರ, ಮಲ್ಲೇಶ ನಾಟೀಕಾರ, ಸಂಗಣ್ಣ ಇಂಡಿ, ಶರಣಗೌಡ ಬಿರಾದಾರ ಪಾಲ್ಗೊಂಡಿದ್ದರು. ಸಿದ್ದಯ್ಯಶಾಸ್ತ್ರೀ ನಂದೂರಮಠ ನಿರೂಪಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next