Advertisement
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ರಾಜಕೀಯ ಇರಬಾರದು. ಅರ್ಹರ ಆಯ್ಕೆಗಾಗಿ ಚುನಾವಣೆಯೇ ಹೊರತು ರಾಜಕೀಯ ಸ್ಪರ್ಧೆ ಗಾಗಿ ಪಂಚಾಯತ್ ಚುನಾವಣೆಯಲ್ಲ. ನಾನು 1960ರಿಂದ ಮೊದಲ 8 ವರ್ಷ ಮಂಡಲ ಪಂಚಾಯತ್ ಸದಸ್ಯನಾಗಿಯೂ ಅನಂತರದ 16 ವರ್ಷ (1984)ಅಧ್ಯಕ್ಷ ನಾಗಿಯೂ ಇದ್ದೆ. ಅನಂತರ ಶಾಸಕನಾದೆ. ಆಗ ಸ್ಥಳೀಯಾ ಡಳಿತಗಳಲ್ಲಿ ರಾಜಕೀಯ ಹಸ್ತ ಕ್ಷೇಪ ಇರಲಿಲ್ಲ. ಆದರೆ ಈಗ ಪಕ್ಷರಹಿತ ಚುನಾವಣೆ ಆಗಿ ಉಳಿ ದಿಲ್ಲ. ಎಲ್ಲ ಪಕ್ಷದವರೂ ತಮ್ಮ ಬೆಂಬಲಿಗರು ಎನ್ನುವ ಮೂಲಕ ಪಂಚಾಯತ್‌ಗೆ ರಾಜಕೀಯ ಪ್ರವೇಶಿಸುವಂತೆ ಮಾಡಿದ್ದಾರೆ.
ಇನ್ನು ಗ್ರಾಮ ಪಂಚಾಯತ್ ಅಧ್ಯಕ್ಷ-ಉಪಾ ಧ್ಯಕ್ಷರ ಮೀಸಲಾತಿ ಚುನಾವಣೆಗೆ ಮೊದಲೇ ಪ್ರಕಟವಾಗಬೇಕು. ಇಲ್ಲದೇ ಇದ್ದರೆ ರಾಜ ಕೀಯ ಲಾಭಕ್ಕಾಗಿ ಮೀಸಲಾತಿ ಬಂದು ನಿಜ ವಾದ ಸೇವಾಕಾಂಕ್ಷಿಗಳು ಅವಕಾಶ ವಂಚಿತರಾಗ ಬೇಕಾಗುತ್ತದೆ. ಚುನಾವಣೆ ಬಳಿಕ ಅಧ್ಯಕ್ಷ ಮೀಸ ಲಾತಿ ಪ್ರಕಟ ಮಾಡುವುದು ಒಳ್ಳೆಯ ವ್ಯವಸ್ಥೆ ಅಲ್ಲ. ಪಂಚಾಯತ್ ಅಧ್ಯಕ್ಷನಿಗೆ ಊರಿನ ಸಮಸ್ತ ಪರಿಚಯ ಇರಬೇಕು. ಭೌಗೋಳಿಕ ಪರಿಚಯ ಹಾಗೂ ಪ್ರಮುಖ ಸಮುದಾಯಗಳ ಕುರಿತು ತಿಳಿದಿರಬೇಕಾದುದು ಅತೀ ಮುಖ್ಯ.
Related Articles
Advertisement
ನಾನು ಮಂಡಲ ಪಂಚಾಯತ್‌ನಲ್ಲಿದ್ದಾಗ ಗ್ರಾಮ ಕರಣಿಕರೇ ಪಂಚಾಯತ್ ಕಾರ್ಯ ದರ್ಶಿಯಾಗಿದ್ದರು. ಭೂಕಂದಾಯದ ಮೂರನೇ ಒಂದಂಶ ಅನುದಾನವಾಗಿ ದೊರೆಯುತ್ತಿತ್ತು. ಊರಿನಲ್ಲಿ ಅಭಿವೃದ್ಧಿ ಕೆಲಸಗಳು ಹೆಚ್ಚಾದರೆ ವಿಭಾಗೀಯ ಕಮಿಷನರ್ ಹೆಚ್ಚು ಸಹಾಯಧನ ನೀಡುತ್ತಿದ್ದರು. ಅಷ್ಟಲ್ಲದೇ ಕಟ್ಟಡ ಮೊದಲಾದ ಅಭಿವೃದ್ಧಿ ಕಾರ್ಯಗಳಿಗೆ ಸಾಲ ರೂಪದಲ್ಲಿ ಹಣ ದೊರೆಯುತ್ತಿತ್ತು. 20 ವರ್ಷಗಳಲ್ಲಿ ಸಂದಾಯ ಮಾಡಬೇಕಿತ್ತು. ಆಗ ಹೆಚ್ಚಿನ ಕಡೆ ಅಭಿವೃದ್ಧಿಯಾಗಿದೆ. ಕೆಲವೆಡೆ ಅಭಿವೃದ್ಧಿಯಾಗದೇ ಇದ್ದರೂ ಹಣ ಪೋಲಾಗಲಿಲ್ಲ. ಈಗ ಅಂತಹ ನಿಯಂತ್ರಣ ಇಲ್ಲದೇ ಅನುದಾನ ಬರುವ ಕಾರಣ ಸದ್ಬಳಕೆ ಕಡಿಮೆಯಾಗುತ್ತದೆ. ಕೆಲವೆಡೆ ಅನುದಾನದಲ್ಲೂ ಭ್ರಷ್ಟಾಚಾರದ ಆರೋಪವಿದೆ. ಜನಸೇವೆಯಲ್ಲಿ ಇದು ಸರಿಯಲ್ಲ.
ಯೋಜನೆಗಳು ಸರಕಾರದ ಹಂತದಲ್ಲಿ ಮಂಜೂ ರಾಗಬೇಕಾದ ಕಾರಣ ಕಷ್ಟ. ಎಲ್ಲ ಪಂಚಾಯತ್‌ಗಳ ಭೌಗೋಳಿಕ, ಸಾಮಾಜಿಕ ಸ್ಥಿತಿ ಒಂದೇ ರೀತಿ ಇರುವುದಿಲ್ಲ. ರಾಜ್ಯಾದ್ಯಂತ ಏಕರೂಪದ ಯೋಜನೆ ಜಾರಿ ಕಷ್ಟ. ಗ್ರಾಮದ ವಿಸ್ತೀರ್ಣ, ಜನಸಂಖ್ಯೆ ಮೇಲೆ ಅನುದಾನ ವಿಂಗಡಿಸಿದರೂ ಅಭಿವೃದ್ಧಿಗೆ ತೊಡಕು.
ಏನಾದರೂ ಕೆಲಸ ಆಗಬೇಕಾದರೆ ಯುವ ಜನತೆಯಿಂದಲೇ ಅದು ಸಾಧ್ಯ. ಪಂಚಾಯತ್ ಚುನಾವಣೆಯನ್ನು ಅವರಿಗೇ ಬಿಟ್ಟುಬಿಡಿ. ಇದು ನಮ್ಮೂರಿನ ಚುನಾವಣೆ. ಇದರಲ್ಲಿ ನಾಚುವಂತಹ ರಾಜಕೀಯ ಬೇಡ. ದ್ವೇಷದಿಂದ ನೆರೆಮನೆಯವರನ್ನೇ ನೋಡುವಂತಾಗಬಾರದು. ರಾಜಕೀಯ ರಹಿತವಾಗಿ ಊರಿನ ಅಭಿವೃದ್ಧಿಗೆ ಯಾರು ಉತ್ತಮ ಎಂದು ತುಲನೆ ಮಾಡಿ ಆಯ್ಕೆ ಮಾಡಿ. ಆಗ ಗ್ರಾಮಗಳ ಅಭಿವೃದ್ಧಿ ಆಗುತ್ತದೆ.ಹಳಿ ತಪ್ಪಿದ ರೈಲನ್ನು ಮತ್ತೆ ಹಳಿಗೆ ತಂದು ಕೂರಿಸುವ ಕೆಲಸ ಆಗಬೇಕು. ಸಂವಿಧಾನ ನಮಗೆ ನೀಡಿದ ಹಕ್ಕುಗಳನ್ನು ಚಲಾಯಿಸುವ ಜತೆಗೇ ಸಂವಿಧಾನವೇ ನೀಡಿದ ಜವಾಬ್ದಾರಿ, ಹೊಣೆಗಾರಿಕೆಯನ್ನೂ ನಿಭಾಯಿಸಬೇಕು. ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧೆಗೆ ಮಾತ್ರ ಯುವಜನತೆಯನ್ನು ಸೀಮಿತಗೊಳಿಸದೇ ಗ್ರಾಮದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಕೈಗೆತ್ತಿಕೊಳ್ಳಲಾಗುವ ಯೋಜನೆಗಳ ರೂಪಣೆ, ಅನುಷ್ಠಾನದಲ್ಲೂ ಅವರನ್ನು ತೊಡಗಿಸಿಕೊಳ್ಳಲು ಅವಕಾಶ ನೀಡಬೇಕು. ಇದನ್ನು ಹಳ್ಳಿಯಿಂದ ದಿಲ್ಲಿವರೆಗೆ ಪಾಲಿಸಬೇಕು. ನಮ್ಮ ಹಳ್ಳಿ ಕಡೆ ಒಂದು ಮಾತಿದೆ; “ಮಕ್ಕಳು ಮಾಡಿದ ಕೆಲಸ ಗೊತ್ತಾಗುವುದಿಲ್ಲ, ಕೋಳಿ ತಿಂದದ್ದು ಗೊತ್ತಾಗುವುದಿಲ್ಲ’ ಎಂದು. ಹಾಗೆಯೇ ಯುವಜನತೆಯ ಶಕ್ತಿ. ಅದು ಪ್ರಕಟ ವಾಗುವುದಿಲ್ಲ. ಸೂಕ್ತ ಅವಕಾಶ ದೊರೆಯುವುದಿಲ್ಲ. ಯುವಜನತೆಯಲ್ಲಿ ಅದಮ್ಯವಾದ ಚೈತನ್ಯ ಇರುತ್ತದೆ. ಆದರೆ ಸದ್ಬಳಕೆಯೇ ಆಗುತ್ತಿಲ್ಲ. ಕೆಲವು ಕಡೆ ಪಟ್ಟಭದ್ರ ಹಿತಾಸಕ್ತಿಗಳು ಅವರದ್ದೇ ಯೋಚನೆಗಳನ್ನು ಇತರರ ಮೇಲೆ ಹೇರಿ ಒಪ್ಪುವಂತೆ ಪ್ರಭಾವ ಬೀರುತ್ತಾರೆ. ಇಂತಹ ವಾತಾವರಣ ಮರೆಯಾಗಬೇಕು. ಯುವಕರಿಗೆ ಆದ್ಯತೆ ದೊರೆಯಬೇಕು. ಯುವಜನತೆಗೆ ಅವಕಾಶ ನೀಡುವ ಮೂಲಕ ಅವರ ಶಕ್ತಿಯನ್ನು ಬಳಸಿಕೊಂಡು ಗ್ರಾಮದ ಏಳಿಗೆ ಮಾಡಬೇಕು.
ಬಿ. ಅಪ್ಪಣ್ಣ ಹೆಗ್ಡೆ ಬಸ್ರೂರು, ಕುಂದಾಪುರ