Advertisement

ಕಾರಜೋಳ ಹೇಳಿಕೆಗೆ ನೇಕಾರರ ಆಕ್ರೋಶ

08:08 PM Apr 09, 2021 | Team Udayavani |

ಮಹಾಲಿಂಗಪುರ : ನೇಕಾರರ ಸಮಸ್ಯೆಗಳೇ ಇಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿಕೆಗೆ ಸ್ಥಳೀಯ ನೇಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಸ್ಥಳೀಯ ಜಿ ಎಲ್‌ ಬಿ ಸಿ ಅತಿಥಿಗೃಹದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನೇಕಾರ ಮುಖಂಡ ಮಲ್ಲಪ್ಪ ಭಾಂವಿಕಟ್ಟಿ, ಶಂಕರ ಸೊನ್ನದ, ಶಿವಾ ಟಿರ್ಕಿ, ತೇರದಾಳ ಮತಕೇತ್ರದ ಶಾಸಕ ಸಿದ್ದು ಸವದಿ ದಿನಪೂರ್ತಿ ಸದನದಲ್ಲಿ ನೇಕಾರರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಎಚ್‌. ಕೆ.ಪಾಟೀಲ, ಲಕ್ಷ್ಮೀ ಹೆಬ್ಟಾಳಕರ ಸೇರಿದಂತೆ ಅನೇಕ ಶಾಸಕರು, ಸಚಿವರು ಇದಕ್ಕೆ ದನಿಗೂಡಿಸಿದ್ದಾರೆ. ಆದರೆ, ಕಾರಜೋಳ ನೇಕಾರರಿಗೆ ಸರ್ಕಾರದ ಎಲ್ಲ ಸೌಲಭ್ಯಗಳು ದೊರೆತಿವೆ. ಅವರಿಗೆ ಸಮಸ್ಯೆಗಳು ಇಲ್ಲ ಎಂಬ ಹೇಳಿಕೆ ನೀಡಿದ್ದು, ನೇಕಾರರಿಗೆ ಅಪಮಾನ ಮಾಡಿದಂತೆ. ಅವರ ಹೇಳಿಕೆ ಸಮಂಜಸವಲ್ಲ ಎಂದರು.

ನೇಕಾರರ ಪರಿಸ್ಥಿತಿ ಶೋಚನೀಯವಾಗಿದೆ. ನೇಕಾರ ಸಮ್ಮಾನ್‌ ಯೋಜನೆಯ 2 ಸಾವಿರ ರೂ. ಇನ್ನೂ ಶೇ. 40ರಷ್ಟು ನೇಕಾರರಿಗೆ ತಲುಪಿಲ್ಲ. ರೈತರಿಗೆ 10 ಸಾವಿರ ರೂ.ನೀಡಲಾಗುತ್ತಿದ್ದು, ನೇಕಾರರಿಗೂ 10 ಸಾವಿರ ನೀಡಬೇಕು.

ಕಳೆದ ಎರಡು ವರ್ಷಗಳಿಂದ ಪಟ್ಟಣದ 125 ಮನೆಗಳಿಗೆ ಪ್ರಧಾನಮಂತ್ರಿ ಆವಾಸ್‌ ಯೋಜನೆಯ ಹಣ ಜಮೆ ಆಗಿಲ್ಲ. ನೇಕಾರರಿಗೆ ಆರೋಗ್ಯ ಭದ್ರತೆ ಇಲ್ಲ. ಸರ್ಕಾರದಿಂದ ಸೀರೆ ಖರೀದಿ ಮಾಡುವ ಕುರಿತು ಯಾವುದೇ ಚಿಂತನೆ ಇಲ್ಲ, ಬಜೆಟ್‌ನಲ್ಲಿ ಗುಳೇದಗುಡ್ಡಕ್ಕೆ ಜವಳಿ ಪಾರ್ಕ್‌ ಘೋಷಿಸಲಾಗಿದೆ. ಹೊರತು ನಿದಿ ìಷ್ಟ ಅನುದಾನ ಘೋಷಿಸಿಲ್ಲ.

ಈ ರೀತಿಯಾಗಿ ಹತ್ತು ಹಲವು ಸಮಸ್ಯೆಗಳ ಮಧ್ಯೆ ನೇಕಾರರು ಬದುಕಲು ಪರದಾಡುತ್ತಿದ್ದಾರೆ ಎಂದು ನೇಕಾರ ಮುಖಂಡರು ನೇಕಾರ ಸಂಕಷ್ಟ ತೋಡಿಕೊಂಡರು. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರಗಳಿವೆ. ನೇಕಾರರಿಗೆ ಸ್ವರ್ಗ ಸೃಷ್ಟಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಹಿಂದೆ ಹೇಳಿದ್ದರು.

Advertisement

ಆದರೆ, ಉಪಮುಖ್ಯಮಂತ್ರಿಗಳು ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡುತ್ತಿದ್ದಾರೆ. ಉಪಮುಖ್ಯಮಂತ್ರಿಗಳು ಪ್ರತಿ ತಿಂಗಳು ಎರಡು ದಿನ ನೇಕಾರರ ಮನೆಯಲ್ಲಿ ವಾಸ್ತವ್ಯ ಮಾಡಿದಾಗ ಅವರಿಗೆ ನೇಕಾರರ ಶೋಚನೀಯ ಪರಿಸ್ಥಿತಿ ಅರಿವಾಗುತ್ತದೆ ಎಂದರು.

ನೇಕಾರ ಮುಖಂಡರಾದ ಮಹಾದೇವಪ್ಪ ಬರಗಿ, ಹೊಳೆಪ್ಪ ಬಾಡಗಿ, ಬಸಪ್ಪ ಹೊಸಕೋಟಿ, ಈಶ್ವರ ಚಮಕೇರಿ ,ಶಂಕರ ಸೊನ್ನದ, ಸಂಗಪ್ಪ ಮುಂಡಗನೂರ, ರಾಜು ಮೂಡಲಗಿ, ರಾಜೇಂದ್ರ ಮಿರ್ಜಿ, ಶಿವಾನಂದ ನಾಗರಾಳ, ಸಿದ್ದು ಬೇನೂರ, ಮಹೇಶ ಚಂಡೋಲ, ಬಂದೇನವಾಜ ಯಾದವಾಡ, ಶ್ರೀಶೈಲ ಚಿಂಚಖಂಡಿ, ಶಂಭು ಕೈಸೊಲಗಿ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next