Advertisement

ಕಳೆದು ಹೋಗಿದ್ದ ಬ್ರಾಸ್‌ಲೇಟ್‌ ಹುಡುಕಿಕೊಟ್ಟ ವಾಟ್ಸಪ್‌ ಗ್ರೂಪ್‌

10:22 AM May 31, 2018 | Harsha Rao |

ಬಂಟ್ವಾಳ: ಮಹಿಳೆಯೊಬ್ಬರು ಕಳೆದುಕೊಂಡಿದ್ದ ಚಿನ್ನದ ಬ್ರಾಸ್‌ಲೇಟೊಂದು ವಾಟ್ಸಪ್‌ ಗ್ರೂಪ್‌ ಸಹಾಯದಿಂದ  ಸಿಕ್ಕಿದೆ.

Advertisement

ಮೇ 25ರಂದು ಉಪ್ಪಿನಂಗಡಿಯ ಪಾವನ ಕುಮಾರಿ ಅವರು ಮಂಗಳೂರಿಂದ ಪುತ್ತೂರಿಗೆ ಸಂಚರಿಸುವ ಬಸ್ಸಿನಲ್ಲಿ ಬ್ರಾಸ್‌ಲೇಟ್‌ ಕಳೆದುಕೊಂಡಿದ್ದರು.

ಇದು 6 ಗ್ರಾಂ ತೂಕ ಹೊಂದಿದ್ದು, 20 ಸಾ.ರೂ. ಮೌಲ್ಯ ಹೊಂದಿತ್ತು. ಇದರ ಬಗ್ಗೆ ಮಹಿಳೆಯು ವಾಟ್ಸಪ್‌ ಗ್ರೂಪ್‌ನಲ್ಲಿ ಹಾಕಿ ಹುಡುಕಾಟ ನಡೆಸಿದ್ದರು. ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಬಂಟ್ವಾಳ ಪಲ್ಲಮಜಲು ನಿವಾಸಿ ವ್ಯಾಪಾರಿ ಇಬ್ರಾಹಿಂ ಅವರಿಗೆ ಈ ಬ್ರಾಸ್‌ಲೇಟ್‌ ಸಿಕ್ಕಿತ್ತು. ಅವರು ತನ್ನ ಸ್ನೇಹಿತರ ವಾಟ್ಸಪ್‌ ಗ್ರೂಪಲ್ಲಿ ಕಳೆದು ಹೋಗಿರುವ ಬ್ರಾಸ್‌ಲೇಟ್‌ ಬಗ್ಗೆ ಹಾಕಿರುವ ಮಾಹಿತಿಯನ್ನು ಪಡೆದು ಮೂಲ ಮಾಲಕರನ್ನು ಫೋನ್‌ ಮೂಲಕ ಸಂಪರ್ಕಿಸಿದ್ದರು.

ಬಂಟ್ವಾಳ ನಗರ ಠಾಣೆಗೆ ಅವರನ್ನು ಕರೆಸಿ ಅಪರಾಧ ವಿಭಾಗ ಎಸ್‌.ಐ ಹರೀಶ್‌ ಸಮ್ಮುಖದಲ್ಲಿ ಬುಧವಾರ ಹಸ್ತಾಂತರಿಸಿದರು. ಇಬ್ರಾಹಿಂ ಪ್ರಾಮಾಣಿಕತೆಯನ್ನು ಪಾವನಾ ಮತ್ತು ಸಾರ್ವಜನಿಕರು ಅಭಿನಂದಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next