Advertisement

ಓಕುಳಿಯಾಡಿ ಸ್ನಾನಕ್ಕೆ ತೆರಳಿದ್ದ ಯುವಕರಿಬ್ಬರು ನೀರು ಪಾಲು

11:14 PM Mar 10, 2020 | Lakshmi GovindaRaj |

ಗಂಗಾವತಿ/ಕೊಪ್ಪಳ: ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ದುರ್ಘ‌ಟನೆಗಳಲ್ಲಿ ಹೋಳಿ ಹುಣ್ಣಿಮೆ ಪ್ರಯುಕ್ತ ಓಕುಳಿ ಆಟವಾಡಿ, ಸ್ನಾನಕ್ಕೆ ತೆರಳಿದ್ದ ಯುವಕರಿಬ್ಬರು ನೀರು ಪಾಲಾಗಿದ್ದಾರೆ. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕು ಹೆರಕಲ್‌ ಗ್ರಾಮದ ನಸರುದ್ದೀನ್‌ ಹೆರಕೇರ, ಹೋಳಿ ಹುಣ್ಣಿಮೆ ಪ್ರಯುಕ್ತ ಮಂಗಳವಾರ ಮಧ್ಯಾಹ್ನ 12ರ ಸುಮಾರಿಗೆ ಓಕುಳಿ ಆಟವಾಡಿ, ಸ್ನೇಹಿತರ ಜತೆಗೆ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಸ್ನಾನಕ್ಕೆ ತೆರಳಿದ್ದ. ನೀರಿನಲ್ಲಿ ಜಿಗಿದ ಈತ ಮೇಲೆ ಬರಲೇ ಇಲ್ಲ.

Advertisement

ಸ್ನೇಹಿತರು ಅರ್ಧ ಗಂಟೆಗಳ ಕಾಲ ಹುಡುಕಾಟ ನಡೆಸಿದರೂ ಸುಳಿವು ಸಿಗದ ಹಿನ್ನೆಲೆಯಲ್ಲಿ ಆತಂಕಗೊಂಡು ಸಂಬಂಧಿ ಕರಿಗೆ ಮಾಹಿತಿ ನೀಡಿದರು. ತಾಲೂಕಿನ ಸಣಾಪುರ ಕೆರೆ ಗೇಟ್‌ ಸಮೀಪ ಈತನ ದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಈತ ತಾಲೂಕಿನ ಮುನಿರಾಬಾದ್‌ ಐಆರ್‌ಬಿ ಬೆಟಾಲಿಯನ್‌ನ ತಮ್ಮ ಸಂಬಂ ಧಿಕರ ಮನೆಯಲ್ಲಿ ಇದ್ದುಕೊಂಡು ಪದವಿ ಅಭ್ಯಾಸ ಮಾಡುತ್ತಿದ್ದ.

ಫಾಲ್ಸ್‌ನಲ್ಲಿ ಮುಳುಗಿದ ವಿದ್ಯಾರ್ಥಿ: ಇದೇ ವೇಳೆ, ಹೋಳಿಹಬ್ಬ ಹಿನ್ನೆಲೆಯಲ್ಲಿ ಸ್ನಾನಕ್ಕೆ ಆಗಮಿಸಿದ್ದ ರಾಜಸ್ಥಾನ ಮೂಲದ ವಿದ್ಯಾರ್ಥಿಯೊಬ್ಬ ಗಂಗಾವತಿ ತಾಲೂಕಿನ ಸಾಣಾಪುರ ಫಾಲ್ಸ್‌ ತುಂಗಭದ್ರಾ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ. ಪ್ರಿಯಾಂಜಿ (24) ನಾಪತ್ತೆಯಾದ ಯುವಕ.

ಬೆಂಗಳೂರಿನಲ್ಲಿ ಕಾನೂನು ಪದವಿ ಓದುತ್ತಿದ್ದ ಈತ ಗೆಳೆಯರ ಜತೆ ಹೋಳಿ ಹಬ್ಬ ಆಚರಣೆ ಮಾಡಲು ಹಂಪಿಗೆ ಆಗಮಿಸಿದ್ದ. ಮಂಗಳವಾರ ಬೆಳಗ್ಗೆ ಸಾಣಾಪುರಕ್ಕೆ ಆಗಮಿಸಿ ಫಾಲ್ಸ್‌ನಲ್ಲಿ ಈಜಾಡಲು ಹೋದ ಸಂದರ್ಭ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ. ಸ್ಥಳಕ್ಕೆ ಹಿರಿಯ ಪೊಲೀಸ್‌ ಅಧಿ ಕಾರಿಗಳು ಭೇಟಿ ನೀಡಿದ್ದಾರೆ. ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.