Advertisement

ವರ್ಣಮಯವಾಗಿರಲಿ ಮನೆಯ ಗೋಡೆ

03:42 AM May 04, 2019 | mahesh |

ಮನೆ ಸೌಂದರ್ಯವನ್ನು ಹೆಚ್ಚಿಸುವ ವಿವಿಧ ವಸ್ತುಗಳ ಪೈಕಿ ಗೋಡೆಯ ಬಣ್ಣಗಳ ಆಯ್ಕೆಯೂ ಒಂದು. ಮನೆ ಮಂದಿರದಂತೆ. ನಾವು ದೇವರನ್ನು ಪೂಜಿಸುವಂತಹ ಸ್ಥಳದಂತಿರಬೇಕೆಂಬ ಮಾತಿದೆ. ಇಲ್ಲಿ ಎಲ್ಲವೂ ಅಚ್ಚುಕಟ್ಟಾಗಿ ಹಾಗೂ ಸ್ವಚ್ಛವಾಗಿರುತ್ತದೆ. ಮನೆ ಕೂಡ ಅದೇ ರೀತಿಯಲ್ಲಿ ಇರಬೇಕೆಂದು ಪ್ರತಿ ಯೊಬ್ಬರೂ ಬಯಸುತ್ತಾರೆ. ಆದರೆ ಹೆಚ್ಚಿನ ವರಿಗೆ ಬೇರೆ ಬೇರೆ ಕಾರಣಗಳಿಂದ ಇದು ಸಾಧ್ಯವಾಗದೇ ಹೋಗುವುದೇ ಹೆಚ್ಚು.

Advertisement

ಅದರಲ್ಲೂ ನಾವು ವಾಸಿಸುವ ಕೋಣೆ ನೋಡುಗರನ್ನು ಆಕರ್ಷಿಸುವಂತಿರಬೇಕು. ಇಲ್ಲದಿದ್ದರೆ ಬಂದಂತವರು ಮನೆಯ ಬಗ್ಗೆ ಕೆಟ್ಟ ಅಭಿಪ್ರಾಯ ವ್ಯಕ್ತಪಡಿಸಬಹುದು. ಹೊರಗಿನವರು ಬಂದಾಗ ಅವರಿಗೆ ಮೊದ ಲು ಕಾಣಿಸುವುದೇ ವಾಸಿಸುವ ಕೋಣೆ.

ಈ ಕೋಣೆಯನ್ನು ಅಚ್ಚುಕಟ್ಟಾಗಿ ಹಾಗೂ ಸ್ವಚ್ಛವಾಗಿ ಇಟ್ಟುಕೊಂಡರೆ ಮನೆಯ ಬಗ್ಗೆ ಉತ್ತಮ ಅಭಿಪ್ರಾಯ ಮೂಡುವುದು. ಹೊಸ ಬಣ್ಣ ಮನೆಯ ಯಾವುದೇ ಭಾಗಕ್ಕೂ ಹೊಸ ಕಳೆಯನ್ನು ನೀಡುವುದು. ನೀವು ವಾಸಿಸುವ ಕೋಣೆಗೆ ಯಾವ ರೀತಿಯ ಬಣ್ಣಗಳನ್ನು ಬಳಿಯಬೇಕು ಎನ್ನುವ ಬಗ್ಗೆ ಕೆಲವು ಮಾಹಿತಿ

ಭೂಮಿ ಬಣ್ಣ ಮತ್ತು ನೀಲಿ
ನೀಲಿ ಬಣ್ಣವನ್ನು ಹೆಚ್ಚಿನ ಮಂದಿ ಇಷ್ಟಪಡುತ್ತಾರೆ. ಇಂತಹ ನೀಲಿ ಬಣ್ಣವನ್ನು ಭೂಮಿಯ ಬಣ್ಣಗಳಾದ ಮರ, ಮರಳು ಕಂದು ಮತ್ತು ಶ್ರೀಮಂತ ಕಂದು ಬಣ್ಣದ ಜತೆ ಸೇರಿಸಿ ಬಳಿದಾಗ ಆಗ ಕೋಣೆಗೆ ಒಂದು ವಿಶೇಷ ಹೊಳಪು ಬರುವುದು. ನೀಲಿ, ಕಡುನೀಲಿ, ಆಕಾಶನೀಲಿ ಅಥವಾ ಬೇಬಿ ನೀಲಿ ಬಣ್ಣಗಳು ವಾಸದ ಕೋಣೆಗೆ ಆಕರ್ಷಕವಾಗಿ ಕಾಣಿಸುತ್ತದೆ.

ಬೂದು ಮತ್ತು ಹಳದಿ
ಈ ಮಿಶ್ರಣದ ಬಣ್ಣಗಳು ಇಂದಿನ ದಿನಗಳಲ್ಲಿ ಹೆಚ್ಚು ಪ್ರಚಲಿತದಲ್ಲಿವೆ. ಈ ಬಣ್ಣವು ವಾಸಿಸುವ ಕೋಣೆಗೆ ವಿಶೇಷ ಮೆರುಗು ನೀಡಿ ಶಕ್ತಿಯನ್ನು ತುಂಬುವುದು. ಈ ಬಣ್ಣವನ್ನು ಮಕ್ಕಳು ಹೆಚ್ಚಾಗಿ ಇಷ್ಟಪಡುತ್ತಾರೆ.

Advertisement

ವಧು ಗುಲಾಬಿ, ಕಡು ಕಂದು ಬಣ್ಣ
ವಾಸಿಸುವ ಕೋಣೆಗೆ ವಧು ಗುಲಾಬಿ ಬಣ್ಣವನ್ನು ಹಚ್ಚಬೇಕು ಮತ್ತು ಕೆಲವು ಭಾಗಗಳಿಗೆ ಕಡು ಕಂದುಬಣ್ಣವನ್ನು ಹಚ್ಚುವುದರಿಂದ ಕೋಣೆಗೆ ಹೊಸ ರೂಪ ನೀಡಿದಂತಾಗುತ್ತದೆ.

ಕಡುಹಸಿರು ಮತ್ತು ಬಿಳಿ ಬಣ್ಣ
ಈ ಮಿಶ್ರಣವು ಕೋಣೆಯ ಅಂದವನ್ನು ಹೆಚ್ಚಿಸುವುದರಲ್ಲಿ ಸಂಶಯವೇ ಇಲ್ಲ. ಈ ಬಣ್ಣಗಳು ಕೋಣೆಯನ್ನು ಪ್ರಕಾಶಮಾನವಾಗಿ ಕಾಣುವಂತೆ ಮಾಡುತ್ತದೆ, ಕಣ್ಣಿಗೆ ಮುದ ನೀಡುವುದು. ಹಸಿರು ಮತ್ತು ಬಿಳಿ ಬಣ್ಣಗಳನ್ನು ಸಮತೋಲಿತವಾಗಿ ಬಳಿದರೆ ಕೋಣೆ ನೋಡುಗರನ್ನು ಆಕರ್ಷಿಸುವುದು.

••ಕಾರ್ತಿಕ್‌ ಚಿತ್ರಾಪುರ

Advertisement

Udayavani is now on Telegram. Click here to join our channel and stay updated with the latest news.

Next