Advertisement

ವಿನಯ್ ಕುಲಕರ್ಣಿ ಪ್ರಕರಣವನ್ನು ಕಾಂಗ್ರೆಸ್ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ:ಜಗದೀಶ್ ಶೆಟ್ಟರ್

07:31 PM Nov 08, 2020 | Mithun PG |

ಧಾರವಾಡ: ಕಾಂಗ್ರೆಸ್‌ ನವರಿಗೆ ಬೇರೆ ವಿಷಯಗಳಿಲ್ಲ. ಹೀಗಾಗಿ ಎಲ್ಲದರಲ್ಲೂ ಅವರು ರಾಜಕೀಯ ಮಾಡುತ್ತಾರೆ ಸಿಬಿಐ,ಇಡಿ ದಾಳಿಯಾದರೆ ರಾಜಕೀಯ ಮಾಡುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ.

Advertisement

ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಸಿಬಿಐ ಕಸ್ಟಡಿಯಡಿ ವಿಚಾರಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅವರಿಗೆ ಬೇರೆ ವಿಷಯಗಳಿಲ್ಲ, ಅವರು ಸಿಎಂ ಆಗಿದ್ದವರು ಜವಾಬ್ದಾರಿ ಸ್ಥಾನದಲ್ಲಿದ್ದವರು ಯೋಚನೆ ಮಾಡಿ ಮಾತನಾಡಬೇಕು. ಉಪಚುನಾವಣೆಯಲ್ಲಿ ಅವರಿಗೆ ಹಿನ್ನೆಡೆಯಾಗಲಿದೆ ಎಂದು ಎಕ್ಸಿಟ್ ಪೋಲ್‌ ಗಳಲ್ಲಿ ತಿಳಿದು ಬಂದಿದೆ. ಎಕ್ಸಿಟ್ ಪೋಲ್ ಪ್ರಕಾರ‌ ಕಾಂಗ್ರೆಸ್ ಅಧೋಗತಿ ಆರಂಭವಾಗಿದೆ ಎಂದ ಅವರು, ಬಂಧನದ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅನ್ಯಾಯವಾಗಿದ್ದರೆ ಕೋರ್ಟ್ ಹೋಗಲಿ. ಸಿಬಿಐ, ಇಡಿ ಇಲಾಖೆ ಸರಕಾರದ ಅಡಿಯಲ್ಲಿಯೇ ಕೆಲಸ‌ ಮಾಡಬೇಕಲ್ಲವೇ? ಯುಪಿಎ ಸರಕಾರದ ವೇಳೆಯಲ್ಲಿ ಜನಾರ್ದನರೆಡ್ಡಿ ಬಂಧನವಾಗಲಿಲ್ಲವೇ? ಅವರನ್ನು ಜೈಲಿನಲ್ಲಿ‌ ಇಡಲಿಲ್ಲವೇ? ಆಗ ಯುಪಿಎ ಸರಕಾರ ಇತ್ತಲ್ಲವೇ? ಎಂದು ಪ್ರಶ್ನಿಶಿದ ಅವರು, ಕಾಂಗ್ರೆಸ್ ನವರು ಇಷ್ಟು ವರ್ಷ ದೇಶವನ್ನು ಆಳಿದ್ದಾರೆ. ಅವರು ಎಲ್ಲವೂ ನಡೆಯುತ್ತೆ ಅಂದುಕೊಂಡಿದ್ದರು ಆದರೆ ಇವತ್ತು ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡೆನ್‌ ಗೆಲುವು ; ಯಾವ ದೇಶದ ಮೇಲೆ ಏನು ಪರಿಣಾಮ?

ಹೀಗಾಗಿ ಏನು ಮಾಡಬೇಕೆಂಬುದು ಗೊತ್ತಾಗುತ್ತಿಲ್ಲ. ತಪ್ಪು ಮಾಡದಿದ್ದರೆ ಹೆದರುವ ಅವಶ್ಯಕತೆ ಇಲ್ಲ, ವಿನಯ್‌ಗೆ ಸ್ವಾಮಿಗಳ ಬೆಂಬಲವಿದೆಯೆಂದು ಪ್ರಕರಣಗಳನ್ನು ಧರ್ಮಕ್ಕೆ, ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಹಾಗೆ ಮಾಡುವುದು  ತಪ್ಪು.  ಸಿಬಿಐ ತಪ್ಪು ಮಾಡಿದರೆ ಕೋರ್ಟ್ ಗೆ ಹೋಗಲಿ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next