Advertisement
ಇಲ್ಲಿನ ಗಣಿಗಾರಿಕೆಯಿಂದ ಈಗಾಗಲೇ ಲಕ್ಷಾಂತರ ರೂ. ಬೆಳೆ ನಾಶವಾಗಿರುವ ಹಿನ್ನೆಲೆಯಲ್ಲಿ ಇಲ್ಲಿನ ರೈತರು ಗ್ರಾಮಸ್ಥರಲ್ಲಿ ಅತಂಕ ಮನೆ ಮಾಡಿದ್ದು, ತಮ್ಮ ಕುಟುಂಬ ಮತ್ತು ನೆಲ, ಜಲದ ರಕ್ಷಣೆಗಾಗಿ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಲು ಗ್ರಾಮಸ್ಥರು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ.
Related Articles
Advertisement
ಗೋಡೆ ಬಿರುಕು: ಕಳೆದ ಎರಡು ವರ್ಷಗಳಿಂದ ಮಳೆಯಿಲ್ಲದೆ ಬೆಳೆ ಇಲ್ಲದೆ ಕಂಗಲಾಗಿರುವ ರೈತರಿಗೆ ಗಣಿಗಾರಿಕೆ ದೂಳಿನಿಂದ, ಗಣಿಗಾರಿಕೆ ಶಬ್ದ ಹಾಗೂ ನ್ಪೋಟಗಳಿಂದ ಮನೆ ಮತ್ತು ಜಮೀನುಗಳಿಗೆ ಕಲ್ಲು ಬೀಳುತ್ತಿದ್ದು, ಗೋಡೆಗಳು ಸೀಳು ಬಿಟ್ಟಿವೆ. ಜಮೀನುಗಳಲ್ಲಿ ಅಳವಡಿಸಿರುವ ಬೋರವೆಲ್‌ಗಳಲ್ಲಿ ಅಂತರ್ಜಲ ಕುಸಿತಗೊಂಡು ನೀರಿಗಾಗಿ ಹಾಹಾಕಾರ ಪಡುವಂತಾಗಿದೆ.
ಹೋರಾಟದ ರೂಪುರೇಷೆ: ಗಣಿಗಾರಿಕೆಯನ್ನು ನಿಯಂತ್ರಿಸದಿದ್ದಲ್ಲಿ ಮತ್ತಷ್ಟು ಸಮಸ್ಯೆಗಳು ಹೆಚ್ಚಾಗಲಿದೆ ಎನ್ನುವುದನ್ನು ಮನಗಂಡಿರುವ ಚಿಕ್ಕಕೆರೆಯೂರು ಗ್ರಾಮದ ಪೈಲ್ವಾನ್ ಕಾಲೋನಿ, ಭೋಗೇಶ್ವರ ಕಾಲೋನಿ, ಕೊಡಸಿಗೆ, ದೊಡ್ಡಕೆರೆಯೂರು, ಮಾದಾಪು, ಹೆ„ರಿಗೆ ಇನ್ನಿತರ ಗ್ರಾಮಗಳ ರೈತರು ಮತ್ತು ಗ್ರಾಮದ ಮುಖಂಡರು ಸಭೆ ಸೇರಿ ಗಣಿಗಾರಿಕೆಯಿಂದ ಆಗುತ್ತಿರುವ ಸಮಸ್ಯೆಗಳನ್ನು ತಡೆಗಟ್ಟವ ನಿಟ್ಟಿನಲ್ಲಿ ಹೋರಾಟದ ರೂಪುರೇಷೆಗಳ ಬಗ್ಗೆ ತೀವ್ರ ಚೆರ್ಚೆ ನಡೆಸಿದರು.
ಉಪವಾಸ ಸತ್ಯಾಗ್ರಹಕ್ಕೆ ತೀರ್ಮಾನ: ರೈತರು ತಮ್ಮ ಕುಟುಂಬ, ಭೂಮಿ, ನೀರು ಹಾಗೂ ಪರಿಸರ ಉಳಿವಿಗಾಗಿ ಗಣಿಗಾರಿಕೆ ತಡೆಗಟ್ಟುವವರೆಗೂ ತಾಲೂಕು ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದಾರೆ.
ಸಭೆಯಲ್ಲಿ ಗ್ರಾಮಗಳ ಮುಖಂಡರಾದ ನಾಗೇಗೌಡ, ಡಾ.ಬಾಬುಜಗಜೀವನರಾಮ್ ವಿಚಾರ ವೇದಿಕೆ ಅಧ್ಯಕ್ಷ ಪಿ. ನಾಗರಾಜು, ಕೆಂಡಪ್ಪ, ಕೆಂಡಗಣ್ಣಗೌಡ, ರವಿ, ಮಹೇಶ್, ಬಸವೇಗೌಡ, ಶಿವಣ್ಣ, ಮಂಜೇಗೌಡ, ಸುಪೀತ್, ಶಶಿಧರ್, ದಾಸೇಗೌಡ, ಸಂಗರಾಜ, ಉಮೇಶ, ವಿಜಯಕುಮಾರ್, ಶಿವಣ್ಣಗೌಡ, ಸ್ವಾಮಿಗೌಡ, ಅಮೀರ್, ರಾಮೇಗೌಡ, ಶಿವರಾಜಪ್ಪ, ಮಹದೇವಸ್ವಾಮಿ, ಮಾದಪ್ಪ, ಕೊಂಡಿ ಕುಮಾರ, ಸೇರಿದಂತೆ ಇನ್ನಿತರ ಗ್ರಾಮದ ಜನರು ಉಪಸ್ಥಿತರಿದ್ದರು.
ಜಿಲ್ಲಾಡಳಿತಕ್ಕೆ ದೂರು ನೀಡಿದರೂ ಕ್ರಮವಿಲ್ಲ: ಮಂಡ್ಯ ಮೂಲದ ಪ್ರಭಾವಿ ವ್ಯಕ್ತಿಗಳು ನಡೆಸುತ್ತಿರುವ ಕಲ್ಲು ಗಣಿಗಾರಿಕೆಯನ್ನು ತಡೆದು ನಮ್ಮ ಕುಟುಂಬಗಳನ್ನು, ಬೆಳೆಗಳನ್ನು ರಕ್ಷಿಸುವಂತೆ ರೈತರು ತಾಲೂಕು ಆಡಳಿತಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಯಾವುದೇ ಕ್ರಮಕೈಗೊಂಡಿಲ್ಲ,
ಕಾರಣ ಇಲ್ಲಿ ಗಣಿಗಾರಿಕೆ ನಡೆಸುತ್ತಿರುವವರು ಸಚಿವ ಪುಟ್ಟರಾಜು ಅವರ ಸಂಬಂಧಿಕರಾಗಿರುವ ಹಿನ್ನೆ°ಲೆಯಲ್ಲಿ ಯಾವುದೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.