Advertisement

ಕೋವಿಡ್19 ನಿಂದ ಸಾವನ್ನಪ್ಪಿದ ಮಹಿಳೆ ಅಂತ್ಯ ಸಂಸ್ಕಾರ ಮಾಡಲು ಗ್ರಾಮಸ್ಥರ ವಿರೋಧ

03:43 PM Jun 18, 2020 | keerthan |

ಗಂಗಾವತಿ: ಕೋವಿಡ್-19 ಸೋಂಕಿನಿಂದ ಸಾವನ್ನಪಿದ ಮಹಿಳೆಯ ಮೃತದೇಹ ಅಂತ್ಯ ಸಂಸ್ಕಾರ ಮಾಡಲು ಮರಳಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಮೃತದೇಹ ಹೂಳಲು ಗುಂಡಿ ತೆಗೆಯುವ ಜೆಸಿಬಿ ಯಂತ್ರಕ್ಕೆ ಅಡ್ಡನಿಂತು ಪ್ರತಿಭಟನೆ ನಡೆಸಿದರು.

Advertisement

ಬೆಳ್ಳಿಗ್ಗೆ 7 ಗಂಟೆಗೆ ಗಂಗಾವತಿ ನಗರಸಭೆಯ ಜೆಸಿಬಿ ಯಂತ್ರ ಮರಳಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಕೋವಿಡ್-19 ಸೋಂಕಿತ ಮಹಿಳೆಯ ಮೃತದೇಹವನ್ನು ಮರಳಿ ಗ್ರಾಮದ ಸ್ಮಶಾನದಲ್ಲಿ ಹೂಳಲು ಅವಕಾಶ ನೀಡುವುದಿಲ್ಲ. ಬೇರೆ ಕಡೆ ದಫನ್ ಮಾಡಬೇಕು. ಸ್ಮಶಾನ ಸಣ್ಣದಿದ್ದು ಸೋಂಕು ಪೀಡಿತ ದೇಹ ಹೂಳುವುದರಿಂದ ಇತರರಿಗೂ ಸೋಂಕು ಹರಡುವ ಸಂಭವವಿದೆ. ಆದ್ದರಿಂದ ಮೃತ ದೇಹ‌ ಹೂಳುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ತಹಸೀಲ್ದಾರ್ ಎಲ್.ಡಿ.ಚಂದ್ರಕಾಂತ, ಸಿಪಿಐ ಸುರೇಶ್ ತಳವಾರ,ಪಿಎಸ್ಐ‌ ಜೆ ದೊಡ್ಡಪ್ಪ ಸೇರಿ ಇತರೆ ಅಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರ ಮನವೊಲಿಕೆ ಮಾಡುತ್ತಿದ್ದಾರೆ. ಸ್ಥಳಕ್ಕೆ ಶಾಸಕ ದಡೇಸೂಗೂರು ಬಸವರಾಜ ಆಗಮಿಸಿ ಗ್ರಾಮಕ್ಕೆ ಹೊಸ ಸ್ಮಶಾನ ನೀಡುವ ಭರವಸೆ ನೀಡಬೇಕು. ಗ್ರಾಮದ ಹತ್ತಿರ 11 ಎಕರೆ ಗೋಮಾಳವಿದ್ದು ನೂತನ ಸ್ಮಶಾನ ಮಂಜೂರು ಮಾಡುವಂತೆ ಗ್ರಾಮಸ್ಥರ ಪರವಾಗಿ ದೇವಪ್ಪ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next