Advertisement

ಹಳ್ಳಿ ಯುವಕರೇ ಮಾರುಕಟ್ಟೆ ಮಾಲಕರು

02:17 AM May 26, 2020 | Sriram |

ಬೆಂಗಳೂರು: ಹಣ್ಣು, ತರಕಾರಿ, ಆಹಾರ ಧಾನ್ಯ ಬೆಳೆಯುವ ರೈತ ಯುವಕರನ್ನು ಮಾರುಕಟ್ಟೆ ಮಾಲಕರನ್ನಾಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಯೋಜನೆ ರೂಪಿಸಲು ಮುಂದಾಗಿದೆ.

Advertisement

ಎಪಿಎಂಸಿ ಕಾಯ್ದೆ ತಿದ್ದುಪಡಿ ಮೂಲಕ ಒದಗಿರುವ ಖಾಸಗಿ ಮಾರುಕಟ್ಟೆ ಸ್ಥಾಪನೆ ಅವಕಾಶ ವನ್ನು ರೈತಾಪಿ ಯುವಕರ ಆರ್ಥಿಕ ಸಶಕ್ತೀಕರಣಕ್ಕೆ ಬಳಸಿಕೊಳ್ಳಲು ಸರಕಾರ ಚಿಂತಿಸಿದೆ. ಗ್ರಾಮೀಣ ಭಾಗದ ಯುವಕರು ಸ್ವ ಸಹಾಯ ಗುಂಪುಗಳ ಮಾದರಿಯಲ್ಲಿ ಜತೆಗೂಡಿ ಖಾಸಗಿ ಮಾರುಕಟ್ಟೆ ಸ್ಥಾಪನೆ ಮಾಡಿದರೆ ಅದಕ್ಕೆ ಸರಕಾರದಿಂದ ಲೇ ಅಗತ್ಯ ನೆರವು ನೀಡುವುದು ಇದರ ಕಾರ್ಯಶೈಲಿ.

ಗ್ರಾಮೀಣ ಯುವಕರ ಸಂಘಗಳಿಗೆ ಖಾಸಗಿ ಮಾರುಕಟ್ಟೆ ಸ್ಥಾಪನೆಗೆ ಅವಕಾಶ ಕೊಟ್ಟು, ಅವರು ಬೆಳೆದ ಉತ್ಪನ್ನಗಳನ್ನು ಸ್ವತಃ ಮಾರುಕಟ್ಟೆ ಮಾಡಲು ಅವಕಾಶ ಕಲ್ಪಿಸುವುದು, ಖಾಸಗಿ ಕಂಪೆನಿಗಳ ರೀತಿ ಇವರಿಗೂ ಅನುಮತಿ ನೀಡಿ ಸ್ವಯಂ ಉದ್ಯೋಗ ಕಲ್ಪಿಸುವ ನಿಟ್ಟಿನ ಚಿಂತನೆ ಇದು.

ಕೋವಿಡ್-19 ಹಿನ್ನೆಲೆಯಲ್ಲಿ ರಚನೆಯಾಗಿರುವ ತಂಡ ಈ ಶಿಫಾರಸು ಸಿದ್ಧಪಡಿಸಿದೆ. ಕೋವಿಡ್-19 ದಿಂದಾಗಿ ಮತ್ತೆ ಹಳ್ಳಿಗಳತ್ತ ಮುಖ ಮಾಡಿರುವ ಯುವಕರಿಗೆ ಸ್ವಂತ ಉದ್ಯೋಗ ಕಲ್ಪಿಸಲು ಇದು ಸಹಕಾರಿಯಾಗಲಿದೆ. ಗ್ರಾಹಕರಿಗೆ ನ್ಯಾಯಯುತ ದರದಲ್ಲಿ ಮನೆ ಬಾಗಿಲಿಗೆ ಹಣ್ಣು ತರಕಾರಿ ತಲುಪಿಸಿದಂತಾಗುತ್ತದೆ. ಪ್ರಾಯೋಗಿಕವಾಗಿ ಮಂಗಳೂರು, ಬೆಂಗಳೂರು, ಮೈಸೂರು ಸೇರಿ ಐದು ನಗರಗಳಲ್ಲಿ ಇದರ ಜಾರಿಗೆ ನೀಲನಕ್ಷೆ ತಯಾರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅನುಷ್ಠಾನ ಹೇಗೆ?
-ಗ್ರಾಮೀಣ ಯುವಕರ ಸಂಘ ಅಥವಾ ಸಂಘಗಳು ಸ್ಥಾಪಿಸುವ ಸಂಸ್ಥೆಗೆ ಮಾರುಕಟ್ಟೆ ರಚನೆಗೆ ಅವಕಾಶ.
-ಸರಕಾರದಿಂದ ಆರ್ಥಿಕ ನೆರವು, ತಮ್ಮಲ್ಲಿ ಬೆಳೆದ ಉತ್ಪನ್ನ ಮಾರಾಟಕ್ಕೆ ಅವಕಾಶ.
-ಹಳ್ಳಿಗಳಲ್ಲಿ ಬೆಳೆದ ಉತ್ಪನ್ನಗಳ ಮಾಹಿತಿ ಇರುವ ಯುವಕರಿಂದಲೇ ಮಾರುಕಟ್ಟೆ ಸ್ಥಾಪನೆ, ಮಾರಾಟ.
-ಯಾರಾದರೂ ತಾವು ಬೆಳೆದ ಉತ್ಪನ್ನ ನಗರಕ್ಕೆ ತಂದು ಮಾರುವುದಾದರೆ ಲೈಸೆನ್ಸ್‌ ನೀಡಿ ವಾಹನ ಸಹಿತ ಸಣ್ಣಪುಟ್ಟ ಆರ್ಥಿಕ ನೆರವು.
-ಅದಕ್ಕಾಗಿ ವ್ಯಾಪ್ತಿ ನಿಗದಿಪಡಿಸಲು ಕಾನೂನಿನಡಿ ಅವಕಾಶ ಬಗ್ಗೆಯೂ ಸಮಾಲೋಚನೆ.
-ಗ್ರಾಮೀಣ ಭಾಗದ ಯುವಕರ ಜತೆ ನಗರದ ಸ್ವ-ಉದ್ಯೋಗ ಆಕಾಂಕ್ಷಿ ಯುವಕರಿಗೂ ಅವಕಾಶ.

Advertisement

ಗ್ರಾಮೀಣ ಯುವಕರು, ರೈತರನ್ನು ಆರ್ಥಿಕವಾಗಿ ಸದೃಢರಾಗಿಸುವ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸಿದೆ. ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಸಿಕ್ಕಿರುವ ಅವಕಾಶ ಬಳಸಿ ಯುವಕ ಸಂಘಗಳಿಗೆ ಮಾರುಕಟ್ಟೆ ಸ್ಥಾಪನೆಗೆ ಅವಕಾಶ ನೀಡುವುದು ಇದರಲ್ಲಿ ಸೇರಿದೆ.
-ಕೆ.ಸಿ. ನಾರಾಯಣ ಗೌಡ, ತೋಟಗಾರಿಕೆ ಸಚಿವ

-  ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next