ತಾಲೂಕಿನ ಕೊಕ್ಕಡ ಮತ್ತು ಪುತ್ತೂರು ತಾಲೂಕಿನ ಕೊಯಿಲ ಗ್ರಾಮದ ಎಂಡೋ ಪಾಲನಾ ಕೇಂದ್ರದ ಸಂತ್ರಸ್ತರು, ಅವರ ಹೆತ್ತವರು ಸಿಬಂದಿ ನಕ್ಕು ನಲಿದು ಸಂಭ್ರಮಿಸಿದರು.
Advertisement
ಇದೇ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ ಕೊಯಿಲ ಎಂಡೋಪಾಲನ ಕೇಂದ್ರದ ಅಭಿಷೇಕ್, ಸತ್ಯಜಿತ್, ನಾರಾಯಣ, ತುಳಸಿ, ನವೀನ್, ಕೊಯಿಲದ ಸಾದತ್, ರಶೀದ್ ಮಾತನಾಡಿ, ಈ ಘಳಿಗೆಗಾಗಿ ಮಧ್ಯರಾತ್ರಿ 3.30ರ ವೆರೆಗೆ ಕಾಯುತ್ತಿದ್ದೆ. ನಮ್ಮ ಖುಷಿಗೆ ಪಾರವೇ ಇರಲಿಲ್ಲ ಎಂದಿದ್ದಾರೆ. ಚೆಂಡಾಟ, ಹೆತ್ತವರಿಗೆ ಲೋಟ, ಸ್ಟ್ರಾ ಆಟ, ಹಣೆಯಲ್ಲಿ ಬಿಸ್ಕೆಟ್ ಇಟ್ಟು ಓಡುವ ಆಟ ಆಡಿ ತಮ್ಮ ಮಕ್ಕಳ ಜತೆ ಹೆತ್ತವರು ಖುಷಿಪಟ್ಟರು. ಅನಂತರ ಬೋಟಿನಲ್ಲಿ ಸುಲ್ತಾನ್‌ಬತ್ತೇರಿ ಕೋಟೆ ನೋಡಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರಕ್ಕೆ ಭೇಟಿ ನೀಡಿದರು. ಈ ವೇಳೆ ಕ್ಷೇತ್ರದ ವತಿಯಿಂದ ಉಪಾಹಾರ ವ್ಯವಸ್ಥೆ ಮಾಡಲಾಯಿತು. ಮಧ್ಯಾಹ್ನದ ಭೋಜನದ ಪ್ರಾಯೋಜಕತ್ವವನ್ನು ಎಂಡೋಸಲ್ಫಾನ್ ಜಿಲ್ಲಾ ಆರೋಗ್ಯ ಇಲಾಖೆ ವಹಿಸಿತ್ತು.
ನಾವು ಎಲ್ಲಾ ತಾಯಂದಿರಂತೆ ಮಕ್ಕಳನ್ನು ಕರೆದು ಕೊಂಡು ಪ್ರವಾಸಕ್ಕೆ ಬರುತ್ತೇವೆ ಎನಿಸಿರಲಿಲ್ಲ. ಬೆಂಗಳೂರಿನ ಪ್ರವಾಸ ಬಿಟ್ಟು ಮಗನಿಗಾಗಿ ಇಲ್ಲಿ ಬಂದಿದ್ದೇನೆ. ಅವನ ಸಂತೋಷ ಎಂದೆಂದಿಗೂ ಹೀಗೇ ಇರಲಿ. ಸೇವಾಭಾರತಿಗೆ ಧನ್ಯವಾದ.
–ರೇವತಿ,
ಎಂಡೋಸಲ್ಫಾನ್ ಪೀಡಿತ ಪ್ರದೀಪನ ತಾಯಿ