Advertisement
ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ, ವಿಪಕ್ಷ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಘೋಷಣೆ ಕೂಗಲಾರಂಭಿ ಸಿದರು. ಮನಮೋಹನ್ ಸಿಂಗ್ ವಿರುದ್ಧ ಮೋದಿ ಮಾಡಿರುವ ಆರೋಪಕ್ಕೆ ಸಂಬಂಧಿಸಿ ಪ್ರಧಾನಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು. ರಾಜ್ಯಸಭೆ ಯಲ್ಲಿ ಗದ್ದಲ ಜೋರಾದಾಗ ಅಸಮಾಧಾನಗೊಂಡ ಸಭಾಧ್ಯಕ್ಷ ವೆಂಕಯ್ಯ ನಾಯ್ಡು, “ಇಡೀ ದೇಶವೇ ನಿಮ್ಮನ್ನು ನೋಡುತ್ತಿದೆ,’ ಎಂದು ಹೇಳಿ, ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು.
Related Articles
ಅರಣ್ಯೇತರ ಪ್ರದೇಶಗಳಲ್ಲಿನ ಬಿದಿರನ್ನು “ಮರ’ ಎಂಬ ವ್ಯಾಖ್ಯೆಯಿಂದ ಹೊರಗಿಡುವಂಥ ಭಾರತೀಯ ಅರಣ್ಯ (ತಿದ್ದುಪಡಿ) ಕಾಯ್ದೆ , 2017 ಅನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. ಅದರಂತೆ, ಈ ಪ್ರದೇಶಗಳಲ್ಲಿ ಬೆಳೆದ ಬಿದಿರು ಕತ್ತರಿಸುವ ಮತ್ತು ಸಾಗಾಟ ಮಾಡುವುದಕ್ಕೆ ಪರ ವಾನಿಗೆಯ ಅಗತ್ಯವಿರುವುದಿಲ್ಲ. ಇದೊಂದು ಪ್ರಮುಖ ಸುಧಾರಣಾ ಕ್ರಮವಾಗಿದ್ದು, ರೈತರಿಗೆ ಅನು ಕೂಲವಾಗಲಿದೆ. ರೈತರು ಬಿದಿರು ಬೆಳೆಯುವತ್ತ ಆಸಕ್ತಿ ವಹಿಸಲಿದ್ದು, ಅವರ ಆದಾಯವೂ ಹೆಚ್ಚಳವಾಗಲಿದೆ ಎಂದು ಮಸೂದೆಯನ್ನು ಮಂಡಿಸಿದ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
Advertisement
2 ಬಾರಿ ನೀಟ್ ಪರೀಕ್ಷೆ?ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಲಿ ಎಂಬ ಕಾರಣಕ್ಕಾಗಿ ವರ್ಷದಲ್ಲಿ 2 ಬಾರಿ ನೀಟ್ ಮತ್ತು ಜೆಇಇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಲೋಕಸಭೆಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಹಾಯಕ ಸಚಿವ ಉಪೇಂದ್ರ ಕುಶ್ವಾಹಾ ತಿಳಿಸಿದ್ದಾರೆ. ಜತೆಗೆ, ಪರೀಕ್ಷೆ ನಡೆಸಲೆಂದೇ “ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ'(ಎನ್‌ಟಿಎ) ಎಂಬ ಸ್ವಾಯತ್ತ ಸಂಸ್ಥೆಯನ್ನು ರಚಿಸುತ್ತೇವೆ ಎಂದೂ ಹೇಳಿದ್ದಾರೆ.