Advertisement

Sharanas ವಚನಗಳ ಮೌಲ್ಯ ಮುಂದಿನ ಪೀಳಿಗೆಗೆ ತಲುಪಬೇಕು: ದತ್ತಾತ್ರೇಯ ಹೊಸಬಾಳೆ

10:27 PM Jun 29, 2024 | Team Udayavani |

ಧಾರವಾಡ : ಸಾರ್ಥಕ ಬದುಕಿನ ಜೀವನಕ್ಕೆ ಬೇಕಾದ ಮೌಲ್ಯವನ್ನು ವಚನಗಳು ತಿಳಿಸುತ್ತವೆ. ಹೀಗಾಗಿ ವಚನಗಳು ಬದುಕಿನಲ್ಲಿ ಧರ್ಮವಾಗಿ ಪಾಲಿಸಬೇಕಿದ್ದು, ಇದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕಿದೆ ಎಂದು ಆರ್‌ಎಸ್‌ಎಸ್‌ನ ಸರಕಾರ್ಯವಾಹರು
ದತ್ತಾತ್ರೇಯ ಹೊಸಬಾಳೆ ಹೇಳಿದರು.

Advertisement

ನಗರದ ಜೆಎಸ್‌ಎಸ್ ಆವರಣದ ಸನ್ನಿಧಿ ಕಲಾಕ್ಷೇತ್ರದಲ್ಲಿ ಪ್ರಜ್ಞಾ ಪ್ರವಾಹ ಕರ್ನಾಟಕ ವತಿಯಿಂದ ಆಯೋಜಿಸಿದ್ದ ವಚನ ದರ್ಶನ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದ ಸುಧಾರಣೆಗಾಗಿ ಶರಣರು ಸರಳವಾದ ಪದಗಳನ್ನು ಬಳಸಿ ವಚನಗಳನ್ನು ರಚಿಸಿ ಜನರಿಗೆ ತಿಳಿಸಿದರು. ಫ.ಗು. ಹಳಕಟ್ಟಿ ಅವರು ವಚನ ಸಾಹಿತ್ಯವನ್ನು ಸಂಗ್ರಹಿಸಿ ಪ್ರಸ್ತುತ ಸಮಾಜಕ್ಕೆ ನೀಡುವ ಮೂಲಕ ಮಹತ್ವದ ಕಾರ್ಯ ಮಾಡಿದ್ದಾರೆ. ಭಕ್ತಿ, ಕಾಯಕ, ದಾಸೋಹ ಮಾಡುವುದು ಜೀವನದ ಅಂಗವಾಗಬೇಕು. ಜತೆಗೆ ಇವು ಜೀವನದೊಂದಿಗೆ ನಡೆಯುತ್ತಿರಬೇಕು ಎಂದರು.

ಜೀವನಕ್ಕೆ ಬೇಕಾದ ಮೌಲ್ಯವನ್ನು ವಚನಗಳು ತಿಳಿಸುತ್ತವೆ. ಹೀಗಾಗಿ ವಚನಗಳ ಸಾರವನ್ನು ಬದುಕಿನಲ್ಲಿ ಧರ್ಮವಾಗಿ ಪಾಲಿಸಬೇಕು. ಆಧ್ಯಾತ್ಮ ಎನ್ನುವುದು ನಿತ್ಯ ಜೀವನದಲ್ಲಿ ದಾರಿ ತೋರುತ್ತದೆ. ವಚನ ಸಾಹಿತ್ಯ ಅದನ್ನು ಮಾಡಿದ್ದು, ಜೀವನವನ್ನು ಹೇಗೆ ಕಟ್ಟಿಕೊಳ್ಳಬೇಕು ಎಂಬುದನ್ನು ತೋರಿಸಿಕೊಟ್ಟಿದೆ. ವಚನ ಸಾಹಿತ್ಯದ ಒಂದೊಂದು ನುಡಿ ನೋಡಿದಾಗ ನಾವು ಜೀವನ ಹೇಗೆ ಕಟ್ಟ ಬೇಕು ಎಂದಿದೆ. ಭಾರತದ ಸಂಸ್ಕೃತಿ ಇದನ್ನು ಬಿಟ್ಟು ಇಲ್ಲ ಎಂದರು.

ಭಾರತ ಎನ್ನುವ ದೇಶ ಆಧ್ಯಾತ್ಮ ಇಲ್ಲದೇ ಜೀವ ಇಲ್ಲದಂತೆ. ಆಧ್ಯಾತ್ಮ ಎನ್ನುವದು ನಮ್ಮ ಜೀವನ ಮುಂದೆ ಹೋಗಲು ಅಗತ್ಯವಿದೆ. ಇದರ ಜತೆಗೆ ಜೀವನ ಮೌಲ್ಯ ನೀಡುವ ವಚನಗಳನ್ನು ಶಾಲಾ- ಕಾಲೇಜುಗಳಲ್ಲಿ ಓದಿಸಬೇಕು. ಕನ್ನಡದ ಮಕ್ಕಳು ಕನ್ನಡ ಕಲಿಯಬೇಕು ಎಂದರು.

Advertisement

ವಚನಗಳನ್ನು ಶಾಲಾ- ಕಾಲೇಜುಗಳಲ್ಲಿ ಓದಿಸಬೇಕು. ಕನ್ನಡದ ಮಕ್ಕಳು ಕನ್ನಡ ಕಲಿಯಬೇಕು. ನಾವು ಮೂರು ಭಾಷೆ ಮಾತನಾಡುತ್ತೇವೆ. ಯಾರು ಮಾತೃ ಭಾಷೆಮರೆಯುತ್ತಾರೋ ಅವರು ಉನ್ನತ ಮಟ್ಟದಲ್ಲಿ ಬೆಳೆಯುತ್ತರೆ. ಸಂಸ್ಕೃತಿಯ ಅತ್ಯುನ್ನತ ಶಿಖರವಾಗಿದ್ದು, ಒಂದು ರಾಷ್ಟ್ರದ ಅಭಿವ್ಯಕ್ತಿ ಸಂಸ್ಕೃತಿಯಾಗಿದೆ. ಭಾರತ ಎನ್ನುವ ದೇಶ ಆಧ್ಯಾತ್ಮ ಇಲ್ಲದೇ ಜೀವ ಇಲ್ಲದಂತೆ. ಆಧ್ಯಾತ್ಮ ಎನ್ನುವದು ನಮ್ಮ ಜೀವನ ಮುಂದೆ ಹೋಗಲು ಅಗತ್ಯ ಎಂದರು.

ಗದುಗಿನ ಶಿವಾನಂದ ಬೃಹನ್ಮಠದ ಸದಾಶಿವಾನಂದ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ಹಿರಿಯ ಸಂಶೋಧಕ ಡಾ.ಸಂಗಮೇಶ ಸವದತ್ತಿಮಠ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಸಾಹಿತಿ ಶಾಂತಾ ಇಮ್ರಾಪೂರ, ಗೋವಿಂದಪ್ಪ ಗೌಡಪ್ಪಗೋಳ, ಜೆ. ನಂದಕುಮಾರ ಸೇರಿದಂತೆ ಹಲವರು ಇದ್ದರು.

”ಲಿಂಗಪೂಜೆಯೇ ಮಾಡದವರು ವಚನಗಳ ವ್ಯಾಖ್ಯಾನ ಮಾಡಿ, ಜನರ ದಾರಿ ತಪ್ಪಿಸುತ್ತಿದ್ದಾರೆ. ಕೆಲವರು ಬಸವಣ್ಣನವರ ವಚನಗಳನ್ನು ತಪ್ಪಾಗಿ ಅರ್ಥೈಸುತ್ತಿದ್ದು, ಈ ಮೂಲಕ ಸಮಾಜಕ್ಕೆ ತಪ್ಪು ಸಂದೇಶ ನೀಡುವುದು ಸರಿಯಲ್ಲ. ಇನ್ನು ವಚನ ಸಾಹಿತ್ಯವನ್ನು ಮತ್ತೊಬ್ಬರಿಂದ ಕೇಳುವ ಬದಲು ಸ್ವಯಂ ಪ್ರೇರಿತವಾಗಿ ಓದಬೇಕು. ವಚನಗಳ ಮೂಲವನ್ನು ಅರಿತು ವ್ಯಾಖ್ಯಾನ ಮಾಡಬೇಕು”
-ಸದಾಶಿವಾನಂದ ಸ್ವಾಮೀಜಿ, ಗದುಗಿನ ಶಿವಾನಂದ ಬೃಹನ್ಮಠ

Advertisement

Udayavani is now on Telegram. Click here to join our channel and stay updated with the latest news.

Next