Advertisement

ಜಾನಪದದಲ್ಲಿದೆ ಬದುಕಿನ ಮೌಲ್ಯ

12:28 PM Sep 04, 2018 | |

ಬಸವನಬಾಗೇವಾಡಿ: ಬದುಕಿನ ಎಲ್ಲ ಮೌಲ್ಯಗಳು ಜಾನಪದ ಸಂಸ್ಕೃತಿಯಲ್ಲಿ ಅಡಗಿವೆ. ಜಾನಪದವು ಸನಾತನ ಸಂಸ್ಕೃತಿಯನ್ನು ಬಿಂಬಿಸುವಂತ ಕೆಲಸ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಿದೆ ಎಂದು ಜೆಡಿಎಸ್‌ ಮುಖಂಡ ಅಪ್ಪುಗೌಡ ಪಾಟೀಲ (ಮನಗೂಳಿ) ಹೇಳಿದರು.

Advertisement

ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಬಸವೇಶ್ವರ ಜಾತ್ರೆ ನಿಮಿತ್ತ ಕನ್ನಡ ಜಾನಪದ ಪರಿಷತ್‌ ಜಿಲ್ಲಾ ಘಟಕ ಏರ್ಪಡಿಸಿದ್ದ ನಮ್ಮೂರ ಜಾನಪದ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ಸಂಸ್ಕೃತಿ ಶಾಂತಿ, ಸಾಮರಸ್ಯ, ಸಭ್ಯತೆ ಮೂಡಿಸುವ ಮೂಲಕ ಉತ್ತಮ ಬದುಕು ರೂಪಿಸುತ್ತದೆ ಎಂದು ಹೇಳಿದರು.

ಜಾನಪದ ಚಿಂತನ ಮಂಡಿಸಿ ಎಸ್‌.ಡಿ. ಕೃಷ್ಣಮೂರ್ತಿ, ಒಕ್ಕಲು ಸಂಸ್ಕೃತಿಯೇ ಜಾನಪದಕ್ಕೆ ಮೂಲಧಾರವಾಗಿದೆ. ಲಾಲಿ ಹಾಡು ಮಾನವನಿಗೆ ನೈತಿಕತೆ ಒದಗಿಸುವ ಮೊದಲ ಸಂಸ್ಕಾರವಾಗಿದೆ. ಆಡಂಬರವಿಲ್ಲದ ಜಾನಪದ ಬದುಕು ಶ್ರೇಷ್ಠವಾಗಿದೆ ಎಂದರು.

ಆಶಯ ನುಡಿಗಳನ್ನಾಡಿದ ಕಜಾಪ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ, ಎಲೆಮರೆ ಕಾಯಂತಿರುವ ಜಾನಪದರನ್ನು ಮುಖ್ಯವಾಹಿನಿಗೆ ತಂದು ಜಾನಪದ ಸಂಸ್ಕೃತಿಯನ್ನು ಕಾಪಾಡುವ ಕೆಲಸ ಕನ್ನಡ ಜಾನಪದ ಪರಿಷತ್‌ ಮಾಡುತ್ತಿದೆ ಎಂದರು. 

ಎಂಪಿಎಂಸಿ ನಿರ್ದೇಶಕ ವಿಶ್ವನಾಥಗೌಡ ಪಾಟೀಲ, ತಾಲೂಕು ಕಜಾಪ ಅಧ್ಯಕ್ಷ ದೇವೇಂದ್ರ ಗೋನಾಳ, ಪಪಂ ಅಧ್ಯಕ್ಷ ಸದಾಶಿವ ಸಿಂಗೆ ಅತಿಥಿಗಳಾಗಿ ಆಗಮಿಸಿದ್ದರು. ಹಿರಿಯರಾದ ಬಾಪುರಾಯ ಯಾದವಾಡ ಅಧ್ಯಕ್ಷತೆ ವಹಿಸಿದ್ದರು.

Advertisement

ಹಿರಿಯ ಜಾನಪದ ಕಲಾವಿದರಾದ ವೆಂಕಪ್ಪ ಮುದ್ದೇಬಿಹಾಳ, ಹಾಜಿಸಾಬ ತೆಲಸಂಗ, ಮಾಳಪ್ಪ ತಳೇವಾಡ, ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗಂಗನಳ್ಳಿ ಮತ್ತು ಕೊಲ್ಹಾರದ ಹಂತಿ ಮೇಳ, ಉಕ್ಕಲಿಯ ಮಂಗಲ ವಾದ್ಯ,
ದೇವರಹಿಪ್ಪರಗಿಯ ಗೊರವರ ಕುಣಿತ, ಮಸಬಿನಾಳದ ಗಿಗಿ ಮೇಳ, ಜೈನಾಪುರದ ಹೆಜ್ಜೆಮೇಳ, ಕೊಲ್ಹಾರದ ಚೌಡಕಿಮೇಳ, ಹಣಮಾಪುರ ಹಲಗೆ ಮಜಲು, ನಾಗರದಿನ್ನಿಯ ಕೊಳಲು ಮತ್ತು ಮನಗೂಳಿಯ ಭಜನೆ , ಡೊಳ್ಳು , ಹಂತಿ, ಸಂಪ್ರದಾಯ ಕಲಾವಿದರು ಕಲಾ ಪ್ರದರ್ಶನ ನೀಡಿದರು ಮನಗೂಳಿ ವಲಯ ಅಧ್ಯಕ್ಷ ಎಸ್‌.ಐ.ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಮಲ್ಲನಗೌಡ ಪಾಟೀಲ ಸ್ವಾಗತಿಸಿದರು. ಶಿವಾಜಿ ಮೋರೆ ನಿರೂಪಿಸಿದರು. ವಿಠ್ಠಲ ಸಿಂಧೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next