ಬದಿಯಡ್ಕ: ಇಲ್ಲಿನ ಖ್ಯಾತ ದಂತ ವೈದ್ಯ ಡಾ|ಕೃಷ್ಣಮೂರ್ತಿ ಎಸ್. (57) ಅವರು ನಾಪತ್ತೆಯಾಗಿದ್ದಾರೆ.
Advertisement
ನ.8 ರಂದು ಮಧ್ಯಾಹ್ನ ಅವರು ನಾಪತ್ತೆಯಾಗಿದ್ದು ಅವರ ಬೈಕ್ ಕುಂಬಳೆಯಲ್ಲಿ ಪತ್ತೆಯಾಗಿದೆ. ಇವರ ನಾಪತ್ತೆಯ ಬಗ್ಗೆ ಅವರ ಕುಟುಂಬ ಸದಸ್ಯರು ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಈ ಬಗ್ಗೆ ಮಾಹಿತಿ ಲಭಿಸಿದವರು 8296818248 ನಂಬ್ರದಲ್ಲಿ ಅಥವಾ ಬದಿಯಡ್ಕ ಪೊಲೀಸ್ ಠಾಣೆಗೆ(04998 284033) ಸಂಪರ್ಕಿಸಲು ಕೋರಲಾಗಿದೆ.
ನೀಲಿ ಬಣ್ಣದ ಅಂಗಿ ಹಾಗು ಬೂದು ಬಣ್ಣದ ಪ್ಯಾಂಟ್ ಧರಿಸಿದ್ದಾರೆ.